ದೇಶದಲ್ಲಿ ಮತ್ತೆ 11 ಮಂದಿ ಬಲಿ| ಒಟ್ಟು ಮೃತರ ಸಂಖ್ಯೆ 129ಕ್ಕೆ ಹೆಚ್ಚಳ| ನಿನ್ನೆ ಒಂದೇ ದಿನ 700 ಜನಕ್ಕೆ ವೈರಸ್
ನವದೆಹಲಿ(ಏ.07): ಭಾನುವಾರ ಒಂದೇ ದಿನ 30 ಮಂದಿಯ ಸಾವಿಗೆ ಕಾರಣವಾಗಿದ್ದ ಕೊರೋನಾ ವೈರಸ್ ಸೋಮವಾರ ಮತ್ತೆ 11 ಮಂದಿಯನ್ನು ಬಲಿ ಪಡೆದಿದೆ. ಇದರೊಂದಿಗೆ ದೇಶದಲ್ಲಿ ಈ ಮಾರಕ ವೈರಸ್‌ಗೆ ಬಲಿಯಾದವರ ಸಂಖ್ಯೆ 129ಕ್ಕೇರಿಕೆಯಾಗಿದೆ.
ಕರ್ನಾಟಕದಲ್ಲಿ 12 ಮಂದಿ ಸೇರಿ ದೇಶದಲ್ಲಿ ಸೋಮವಾರ ಒಂದೇ ದಿನ 700ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಖಚಿತಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 4678ಕ್ಕೇರಿಕೆಯಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
undefined
ಮಹಾರಾಷ್ಟ್ರವೊಂದರಲ್ಲೇ ಸೋಮವಾರ 7 ಮಂದಿ ಸಾವಿಗೀಡಾಗಿದ್ದು, ಆ ರಾಜ್ಯದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 52ಕ್ಕೆ ಹೆಚ್ಚಳವಾಗಿದೆ.
10 ದಿನದಲ್ಲಿ ಹೆಚ್ಚು ಕೊರೋನಾ, ಮಾನಸಿಕವಾಗಿ ಸಿದ್ಧರಾಗಿ: ಡಾ. ದೇವಿ ಶೆಟ್ಟಿ
ಸೋಂಕಿತರಲ್ಲಿ 76% ಪುರುಷರು
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿರುವವರಲ್ಲಿ ಪುರುಷರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಸೋಂಕಿತರಲ್ಲಿ ಶೇ.76ರಷ್ಟುಪುರುಷರಿದ್ದರೆ, ಕೇವಲ 24ರಷ್ಟುಮಹಿಳೆಯರಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೊರೋನಾ ಭೀತಿ: ಲಾಕ್‌ಡೌನ್‌ನಿಂದಾಗಿ ಸಾವಿನ ಸಂಖ್ಯೆ ಶೇ.50 ನಿಯಂತ್ರಣ
60 ವರ್ಷ ಮೇಲ್ಪಟ್ಟ ಶೇ.63ರಷ್ಟುಜನ ಸಾವು
ಹಿರಿಯರನ್ನೇ ಕೊರೋನಾ ಹೆಚ್ಚಾಗಿ ಕಾಡುತ್ತದೆ ಎಂಬುದಕ್ಕೆ ಇಂಬು ನೀಡುವಂತೆ ದೇಶದಲ್ಲಿ ಈ ವೈರಸ್‌ನಿಂದ ಸಾವಿಗೀಡಾದವರಲ್ಲಿ 60 ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನವರ ಸಂಖ್ಯೆ ಶೇ.63ರಷ್ಟಿದೆ. ಶೇ.30ರಷ್ಟುವ್ಯಕ್ತಿಗಳು 40ರಿಂದ 60 ವರ್ಷದೊಳಗಿದ್ದಾರೆ. 40 ವರ್ಷದೊಳಗಿನ ಮೃತರ ಸಂಖ್ಯೆ ಕೇವಲ ಶೇ.7ರಷ್ಟಿದೆ ಎಂದು ಸರ್ಕಾರ ಹೇಳಿದೆ.