
ನ್ಯೂಯಾರ್ಕ್ (ಡಿ.04): ವಿಶ್ವದ ಪ್ರತಿಷ್ಠಿತ ‘ಟೈಮ್’ ನಿಯತಕಾಲಿಕೆ ಭಾರತೀಯ ಮೂಲದ 15 ವರ್ಷದ ಬಾಲಕಿ ಗೀತಾಂಜಲಿ ರಾವ್ ಅವರನ್ನು ಮಕ್ಕಳ ವಿಭಾಗದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ತಂತ್ರಜ್ಞಾನದ ಸಹಾಯದಿಂದ ಸೈಬರ್ ಬೆದರಿಕೆ, ಮಾದಕ ವ್ಯಸನ, ಅಶುದ್ಧ ಕುಡಿಯುವ ನೀರಿನಂತಹ ಸಮಸ್ಯೆಗೆ ಪರಿಹಾರ ಕಂಡುಹಿಡಿದ ಕಾರಣಕ್ಕೆ ಗೀತಾಂಜಲಿ ರಾವ್ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
https://kannada.asianetnews.com/india-news/hcl-roshni-richest-women-in-india-snr-qksvlq
ಟೈಮ್ ನಿಯತಕಾಲಿಕೆ ಮೊಟ್ಟಮೊದಲ ಬಾರಿಗೆ ಮಕ್ಕಳ ವಿಭಾಗದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ನೀಡುತ್ತಿದೆ. ಈ ವಿಭಾಗದಲ್ಲಿ 5,000ಕ್ಕೂ ಅಧಿಕ ನಾಮನಿರ್ದೇಶನಗಳು ಬಂದಿದ್ದವು.
ಹಲವು ರೀತಿಯ ಆವಿಷ್ಕಾರಗಳನ್ನು ಮಾಡಿ ಗುರುತಿಸಿಕೊಂಡು ನಿಟ್ಟಿನಲ್ಲಿ ಇದೀಗ ಶ್ರೇಷ್ಠ ಗೌರವ ಗೀತಾಂಜಲಿ ಅವರಿಗೆ ಒಲಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ