
ಗೋರಖಪುರ (ಜುಲೈ 8, 2023): ಇತ್ತೀಚೆಗೆ ಗಾಂಧಿ ಶಾಂತಿ ಪ್ರಶಸ್ತಿ ಪಡೆದ ಧಾರ್ಮಿಕ ಪುಸ್ತಕ ಪ್ರಕಾಶನ ‘ಗೀತಾ ಪ್ರೆಸ್’ ಯಾವ ದೇಗುಲಕ್ಕೂ ಕಡಿಮೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಗೀತಾ ಮುದ್ರಣಾಲಯದ ಶತಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ಕೆಲವೊಮ್ಮೆ ಸಂತರು ದಾರಿ ತೋರಿಸುತ್ತಾರೆ, ಕೆಲವೊಮ್ಮೆ ಗೀತಾ ಪ್ರೆಸ್‌ನಂತಹ ಸಂಸ್ಥೆಗಳು. ಪ್ರಕಾಶಕರು ತನ್ನ ಕೆಲಸದ ಮೂಲಕ ಮಾನವೀಯತೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಗೋರಖಪುರ ಅಭಿವೃದ್ಧಿ ಹಾಗೂ ಸಂಸ್ಕೃತಿಯ ಪ್ರತೀಕ’ ಎಂದು ಕೊಂಡಾಡಿದರು.
ಹಿಂದೂ ಧಾರ್ಮಿಕ ಸಾಹಿತ್ಯದ ಅತಿದೊಡ್ಡ ಪ್ರಕಾಶನ ಸಂಸ್ಥೆ ಎಂದು ಹೇಳಿಕೊಳ್ಳುವ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿತು. ಗಾಂಧಿಗೂ ಗೀತಾ ಪ್ರೆಸ್‌ಗೂ ಸಂಬಂಧ ಸರಿ ಇರಲಿಲ್ಲ. ಅವರ ಹೆಸರಿನ ಪ್ರಶಸ್ತಿ ಗೀತಾ ಪ್ರೆಸ್‌ಗೆ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
ಇದನ್ನು ಓದಿ: ಗೀತಾ ಪ್ರೆಸ್ ಪ್ರಶಸ್ತಿ ವಿವಾದ: ಗಾಂಧಿ ಸರ್‌ನೇಮ್ ಇದ್ದ ಕೂಡಲೇ ಮಹಾತ್ಮ ಆಗಲ್ಲ; ಕಾಂಗ್ರೆಸ್ ಹಿಂದೂ ವಿರೋಧಿ ಎಂದ ಬಿಜೆಪಿ
ಈ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ‘ಮಹಾತ್ಮ ಗಾಂಧಿಯವರು ಗೀತಾ ಪತ್ರಿಕಾ ಮಾಧ್ಯಮದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದರು ಮತ್ತು ಅವರು ಅದರ ಮಾಸಿಕ ನಿಯತಕಾಲಿಕೆ ’ಕಲ್ಯಾಣ್’ ಗೆ ಕೊಡುಗೆ ನೀಡಿದ್ದರು’ ಎಂದರು.
2 ವಂದೇ ಭಾರತ್ ರೈಲು ಉದ್ಘಾಟನೆ:
ಈ ನಡುವೆ, ಮೋದಿ ಅವರು ಗೋರಖಪುರ-ಲಖನೌ ಹಾಗೂ ಜೋಧಪುರ-ಅಹಮದಾಬಾದ್ ವಂದೇಭಾರತ ರೈಲಿಗೆ ಚಾಲನೆ ನೀಡಿದರು. ಗೋರಖಪುರ - ಲಖನೌ ವಂದೇ ಭಾರತ ರೈಲು ಅಯೋಧ್ಯೆ ಮೂಲಕ ಹಾದು ಹೋಗಲಿದ್ದು, ಭಕ್ತರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ಕೋಟಿ ಕೋಟಿ ಭಗವದ್ಗೀತೆ ಪ್ರತಿ ಮುದ್ರಿಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ: ಕಾಂಗ್ರೆಸ್ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ