ಕೊಂದ ಸೊಳ್ಳೆಗಳ ದಾಖಲೆ ಇಡ್ತಾಳೆ- ಪುಸ್ತಕಕ್ಕೆ ಅಂಟಿಸಿ ನಾಮಕರಣ ಮಾಡ್ತಾಳೆ! ವಿಡಿಯೋ ವೈರಲ್

Published : Apr 17, 2025, 02:57 PM ISTUpdated : Apr 17, 2025, 03:14 PM IST
ಕೊಂದ ಸೊಳ್ಳೆಗಳ ದಾಖಲೆ ಇಡ್ತಾಳೆ- ಪುಸ್ತಕಕ್ಕೆ ಅಂಟಿಸಿ ನಾಮಕರಣ ಮಾಡ್ತಾಳೆ! ವಿಡಿಯೋ ವೈರಲ್

ಸಾರಾಂಶ

ಆಕಾಂಕ್ಷಾ ರಾವತ್ ಮತ್ತು ಆಕೆಯ ಸಹೋದರಿ ಕೊಂದ ಸೊಳ್ಳೆಗಳನ್ನು ಸಂಗ್ರಹಿಸಿ, ಹೆಸರಿಟ್ಟು ದಾಖಲಿಸುವ ವಿಶಿಷ್ಟ ಹವ್ಯಾಸ ಹೊಂದಿದ್ದಾರೆ. ಈ ಹವ್ಯಾಸದ ವಿಡಿಯೋ ಏಳು ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಸೊಳ್ಳೆಗಳ "ಸಾವಿನ" ಸಮಯ, ಸ್ಥಳ, ಹೆಸರನ್ನು ದಾಖಲಿಸುತ್ತಾರೆ. ರೀಲ್ಸ್ ಹುಚ್ಚಿನ ನಡುವೆ ಈ ವಿಭಿನ್ನ ಹವ್ಯಾಸ ಗಮನ ಸೆಳೆದಿದೆ.

ಜಗತ್ತಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸ ಇರುತ್ತದೆ. ಕೆಲವರ ಹವ್ಯಾಸ ವಿಚಿತ್ರ ಎನ್ನಿಸುವುದೂ ಉಂಟು. ಹೀಗೂ ಉಂಟೆ ಎಂದು ಹುಬ್ಬೇರಿಸುವ ಕೆಲವು ಹವ್ಯಾಸಗಳನ್ನೂ ಕೆಲವರು ಬೆಳೆಸಿಕೊಳ್ಳುವುದು ಉಂಟು. ಅಂಥದ್ದರಲ್ಲಿ ಒಂದು ಈ ಯುವತಿಯ ಹವ್ಯಾಸ. ಅದು ಎಂಥ ಹವ್ಯಾಸ ಅಂತೀರಾ!  ತಾನು ಕೊಲ್ಲುವ ಸೊಳ್ಳೆಗಳ ದಾಖಲೆಯನ್ನು ಇಟ್ಟುಕೊಳ್ಳುವ "ವಿಶಿಷ್ಟ ಹವ್ಯಾಸ" ಇದು!  ಮಾತ್ರವಲ್ಲದೇ ಕೊಂದ ಸೊಳ್ಳೆಗಳನ್ನು ಅಂಟಿಸಿ ಅದಕ್ಕೆ ಹೆಸರು ಕೂಡ ಇಡ್ತಾಳಂತೆ! ಇಂಥದ್ದೊಂದು ವಿಚಿತ್ರ ಹವ್ಯಾಸ ಇರುವ ಯುವತಿಯ ಹೆಸರು  ಆಕಾಂಕ್ಷಾ ರಾವತ್. ಈಕೆ ಮತ್ತು ಇವಳ ಸಹೋದರಿ ಇಬ್ಬರೂ ಈ ವಿಚಿತ್ರ ಹವ್ಯಾಸ ಇದೆ. ಇದರ ಬಗ್ಗೆ ಆಕಾಂಕ್ಷಾ ವಿಡಿಯೋ ಮಾಡಿದ್ದು, ಅದು ಈಗಾಗಲೇ ಏಳು ಮಿಲಿಯನ್​ಗೂ ಅಧಿಕ ವ್ಯೂವ್ಸ್​ ಕಂಡಿದೆ. ತಾನು ಮತ್ತು ಸಹೋದರಿ,  ಕೊಲ್ಲುವ ಪ್ರತಿಯೊಂದು ಸೊಳ್ಳೆಯ ದಾಖಲೆಯನ್ನು ಇಟ್ಟುಕೊಳ್ಳುವುದಾಗಿ ಹಾಗೂ ಅವುಗಳಿಗೆ ಹೆಸರು ಇಡುವುದಾಗಿ ವಿಡಿಯೋದಲ್ಲಿ ಆಕಾಂಕ್ಷಾ ಹೇಳಿಕೊಂಡಿದ್ದಾಳೆ.  

ಬಳಿಕ,  ಆಕಾಂಕ್ಷಾ ಕ್ಯಾಮೆರಾವನ್ನು ತಿರುಗಿಸಿ ಬಿಳಿ ಹಾಳೆಗಳ ಮೇಲೆ ಬಾಕ್ಸ್​ ಹಾಕಿ ವಿಂಗಡಿಸುವುದನ್ನು ನೋಡಬಹುದು.  ಪ್ರತಿಯೊಂದು ಬಾಕ್ಸ್​ನಲ್ಲಿ ಸೊಳ್ಳೆಯ "ಸಾವಿನ" ಹೆಸರು, ಸಮಯ ಮತ್ತು ಸ್ಥಳವನ್ನು ಪಟ್ಟಿ ಮಾಡಲಾಗಿದೆ. ಉದಾಹರಣೆಗೆ, ಅಡುಗೆಮನೆಯಲ್ಲಿ ಕೊಲ್ಲಲ್ಪಟ್ಟ ಒಂದು ಸೊಳ್ಳೆಗೆ ರಮೇಶ್ ಎಂದು ಹೆಸರಿಸಲಾಗಿದೆ. ಹಲವಾರು ಇತರರು ಅನುಸರಿಸಿದರು, ಎಲ್ಲವೂ ತಮ್ಮದೇ ಆದ "ಸಾವಿನ" ವಿವರಗಳೊಂದಿಗೆ ಕಂಡು ಬರುತ್ತದೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. 

ಉಫ್​... ಲೈಕ್ಸ್​ಗಾಗಿ ಇದೆಂಥ ಹುಚ್ಚು? ಟವಲ್​ ಸುತ್ತಿಕೊಂಡು ಬಿಚ್ಚಿಬಿಚ್ಚಿ ತೋರಿಸಿದ ಯುವತಿಯರು!

ರೀಲ್ಸ್​ ಹುಚ್ಚಿಗಾಗಿ ಒಂದೆಡೆ ಏನೇನೋ ಮಾಡುವವರು ಇದ್ದಾರೆ. ಏಕೆಂದರೆ, ಇಂದು  ರೀಲ್ಸ್‌ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್‍‌ ಎಂದು ಫೇಮಸ್‌ ಆಗಲು ಕಾಣುವ ಮಾರ್ಗ ಇದೊಂದೇ. ರೀಲ್ಸ್‌ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್‌ ಕೂಡ ಜಾಸ್ತಿಯಾಗುತ್ತಿದೆ. ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್‌ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್‌ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ. ರೈಲು ಹಳಿಗಳ ಮೇಲೆ ನಿಲ್ಲುವುದು, ಬೆಟ್ಟದ ತುದಿಯಲ್ಲಿ ಹೋಗುವುದು... ಹೀಗೆ ರೀಲ್ಸ್ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಚಿತ್ರ-ವಿಚಿತ್ರವಾಗಿ ರೀಲ್ಸ್‌ ಮಾಡಲು ಹೋಗಿ ಥಳಿತಕ್ಕೆ ಒಳಗಾಗುವವರೂ ಇದ್ದಾರೆ. ಆದರೆ ಈ ಯುವತಿ ಪ್ರಚಾರಕ್ಕೋ, ಹವ್ಯಾಸಕ್ಕೋ ಗೊತ್ತಿಲ್ಲ ಒಟ್ಟಿನಲ್ಲಿ ಯಾರೂ ಮಾಡದ ದಾಖಲೆ ಮಾಡಿರುವುದಂತೂ ನಿಜ. 

ಕೆಲವು ತಿಂಗಳ ಹಿಂದೆ,  ಹರಿಯಾಣದ ಪಾಣಿಪತ್‌ನಲ್ಲಿ ಲೈಕ್ಸ್​ ಹುಚ್ಚಿಗಾಗಿ ಜನಜಂಗುಳಿ ಇರುವ ಮಾರ್ಕೆಟ್‌ನಲ್ಲಿ ಯುವಕನೊಬ್ಬ ಮಾಡಬಾರದ್ದು ಮಾಡಿ ಒದೆ ತಿಂದಿದ್ದ. ಈತ ಮಾಡಿದ್ದು ಏನೆಂದರೆ, ಮಹಿಳೆಯರ ಒಳಉಡುಪು ಧರಿಸಿ ರೀಲ್ಸ್ ಮಾಡುತ್ತಿದ್ದ! ಆರಂಭದಲ್ಲಿ ಈತ ಒಬ್ಬ ಹುಚ್ಚ ಎಂದುಕೊಂಡರು ಜನರು. ಬಳಿಕ ರೀಲ್ಸ್‌ ಮಾಡುತ್ತಿರುವುದು ತಿಳಿಯಿತು. ಈತನನ್ನು ನೋಡಿ ಮಹಿಳೆಯರು ಮುಜುಗರ ಪಟ್ಟುಕೊಂಡಿದ್ದಾರೆ. ಜನರಿಗೂ ಅಶ್ಲೀಲ ಎನ್ನಿಸಿದೆ. ಅಷ್ಟಕ್ಕೆಸುಮ್ಮನಾಗದ ಜನರು, ಈತನ ಸುತ್ತುವರೆದು ಹಿಗ್ಗಾಮುಗ್ಗ ಥಳಿಸಿದ್ದರು. ಆತನ ರೀಲ್ಸ್‌ ವೈರಲ್‌ ಆಯ್ತೋ ಇಲ್ವೋ ಗೊತ್ತಿಲ್ಲ. ಆದರೆ ಯುವಕನನ್ನು ಥಳಿಸಿದ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಂಥ ಹುಚ್ಚು ವಿಡಿಯೋಗಳ ಮುಂದೆ ಸೊಳ್ಳೆಗಳ ಕಲೆಕ್ಷನ್​  ಮಾತ್ರ ಸಕತ್​ ನೆಟ್ಟಿಗರು ಖುಷಿ ಕೊಡುತ್ತಿದೆ. 

ಶ್ರೀರಸ್ತು ಶುಭಮಸ್ತು ಪೂರ್ಣಿಯ ಈ ವಿಡಿಯೋ ನೋಡಿ ನಿಮ್ಮ ಹೆಂಡ್ತಿ ನೆನಪಾದ್ರೆ ನಾವೇನೂ ಮಾಡೋಕೆ ಆಗಲ್ಲ ಬಿಡಿ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ
ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು