10ನೇ ತರಗತಿಯ ವಿದ್ಯಾರ್ಥಿನಿಯರು ಪೆನ್ ಡೇ ಆಚರಿಸಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಪ್ರಿನ್ಸಿಪಾಲ್ 80 ವಿದ್ಯಾರ್ಥಿನಿಯರ ಸಮವಸ್ತ್ರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿದ ಘಟನೆ ನಡೆದಿದೆ.
ಧನಾಬಾದ್(ಜ.12) ಶಾಲೆಗಳಲ್ಲಿ ಅಂತಿಮ ಪರೀಕ್ಷಾ ತಯಾರಿಗಳು ಆರಂಭಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳು ಶಾಲಾ ದಿನಗಳನ್ನು ಮತ್ತಷ್ಟು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತಾರೆ. ಇದರಂತೆ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರು ತಮ್ಮ ಕೊನೆಯ ಶಾಲಾ ತರಗತಿ ದಿನದಲ್ಲಿ ಪೆನ್ ಡೇ ಆಚರಿಸಿದ್ದಾರೆ. ಒಂದೆಡೆ ಕೊನೆಯ ತರಗತಿ, ಬಳಿಕ ಪರೀಕ್ಷೆಗೆ ತಯಾರಿ ಮಾಡಲು ರಜೆ. ಹೀಗಾಗಿ ವಿದ್ಯಾರ್ಥಿನಿಯರು ಮತ್ತೊಬ್ಬರ ಸಮವಸ್ತ್ರದಲ್ಲಿ ನೆನಪುಗಳು, ಕ್ಷಮೆ, ಸೇರದಂತೆ ಸಂದೇಶಗಳನ್ನು ಬರದು ತಮ್ಮ ಹೆಸರಿನೊಂದಿಗೆ ಸಹಿ ಹಾಕಿದ್ದಾರೆ. ಈ ಸಮವಸ್ತ್ರವನ್ನು ಫ್ರೇಮ್ ಹಾಕಿ ಇಟ್ಟುಕೊಳ್ಳುವುದು ವಿದ್ಯಾರ್ಥಿನಿಯರ ಪ್ಲಾನ್ ಆಗಿತ್ತು. ಆದರೆ ವಿದ್ಯಾರ್ಥಿನಿಯರ ಈ ಸಂಭ್ರಮ ಪ್ರಿನ್ಸಿಪಾಲ್ ಕೆರಳಿಸಿದೆ. ಈ ಸಂಭ್ರಮ ಆಚರಿಸಿದ ಎಲ್ಲಾ ವಿದ್ಯಾರ್ಥಿನಿಯರನ್ನು ಕರೆಸೆ ಸಮವಸ್ತ್ರ ಶರ್ಟ್ ಬಿಚ್ಚುವಂತೆ ಸೂಚಿಸಿದ್ದಾರೆ. ಬಳಿಕ 80 ವಿದ್ಯಾರ್ಥಿನಿಯರನ್ನು ಶರ್ಟ್ ಇಲ್ಲದೆ ಮನೆಗೆ ಕಳುಹಿಸಿದ ಘಟನೆ ಜಾರ್ಖಂಡ್‌ನ ಧನಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಜೋರಾಪೋಖರ್ ಪೊಲೀಸ್ ಠಾಣಾ ವ್ಯಾಪ್ತಿಯ ದಿಗ್‌ಲಾಧಿಯಲ್ಲಿ ಈ ಘಟನೆ ನಡೆದಿದೆ. ಪ್ರತಿಷ್ಠಿತ ಖಾಸಗಿ ಶಾಲೆ ವಿರುದ್ಧ ವಿದ್ಯಾರ್ಥಿನಿಯರ ಪೋಷಕರು ದೂರು ದಾಖಲಿಸಿದ್ದಾರೆ. ಇದೀಗ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹಲವು ವಿದ್ಯಾರ್ಥಿನಿಯರ ಪೋಷಕರು ದೂರು ನೀಡಿದ್ದಾರೆ. ಘಟನೆಯನ್ನು ಉಪ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಗಂಭೀರವಾಗಿ ಪರಗಿಣಿಸಿದ್ದಾರೆ. ಪೋಷಕರು ಹಾಗೂ ವಿದ್ಯಾರ್ಥಿನಿಯರನ್ನು ಭೇಟ ಮಾಡಿ ಮಾಹಿತಿ ಪಡೆದಿದ್ದಾರೆ.
ಪೋಷಕರು ನೀಡಿದ ದೂರಿನ ಪ್ರಕಾರ, 10ನೇ ತರಗತಿ ವಿದ್ಯಾರ್ಥಿನಿಯರಿಗೆ ಅಂದು ಕೊನೆಯ ದಿನವಾಗಿತ್ತು. ಬಳಿಕ ಪರೀಕ್ಷೆಗೆ ತಯಾರಿ ರಜೆ. ಹೀಗಾಗಿ ಕೊನೆಯ ದಿನದಲ್ಲಿ ಕಳೆದ ಕೆಲ ವರ್ಷಗಳಿಂದ ಒಂದೇ ತರತಗತಿಯಲ್ಲಿ ಒಂದೆ ಶಾಲೆಯಲ್ಲಿ ಜೊತೆಯಾಗಿ ಕಲಿತ ಸಹಪಾಠಿಗಳು, ಆತ್ಮೀಯರನ್ನು ಬೀಳ್ಕೊಡುವ ನೋವು ಅವರಲ್ಲಿತ್ತು. ಇನ್ನು ಪರೀಕ್ಷೆ ಸಮಯದಲ್ಲಿ ಸಿಕ್ಕರೂ ಮಾತುಕತೆ ಹೆಚ್ಚಿರಲ್ಲ. ಬಳಿಕ ಎಲ್ಲರೂ ಒಂದೊಂದು ದಾರಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ವಿದ್ಯಾರ್ಥಿನಿಯರು ತರಗತಿಯ ಕೊನೆಯ ದಿನವನ್ನು ಸಂಭ್ರಮಿಸಲು ಹಾಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಸಜ್ಜಾಗಿದ್ದಾರೆ.
2025ರ ಹೊಸ ವರ್ಷದ ಅತ್ಯುತ್ತಮ ಫೋಟೋ, ತಂದೆ-ಮಗನ ನಡುವಿನ ಭಾವನಾತ್ಮಕ ಕ್ಷಣ
ತರಗತಿಯ ಕೊನೆಯ ದಿನದಲ್ಲಿ ವಿದ್ಯಾರ್ಥಿನಿಯರು ಪೆನ್ ಡೇ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ವಿದ್ಯಾರ್ಥನಿಯರು ಮತ್ತೊಬ್ಬ ವಿದ್ಯಾರ್ಥಿನಿ ಸಮವಸ್ತ್ರದ ಮೇಲೆ ಬರೆಯಬೇಕು. ತಮಗೆ ತೋಚಿದ್ದು, ಆ ವಿದ್ಯಾರ್ಥಿನಿ ಕುರಿತು ಅನಿಸಿದ್ದು, ಕ್ಷಮೆ ಕೇಳುವುದಿದ್ದರೆ, ಸಂಭ್ರಮ-ಸಂತಸ ಹಂಚಿಕೊಳ್ಳುವುದಿದ್ದರೆ, ಅಥವಾ ಏನಾದರು ಸಂದೇಶ, ಉಪದೇಶ ನೀಡುವುದಿದ್ದರೆ, ಹೀಗೆ ಏನಾದರು ಸರಿ, ಬರೆಯಬೇಕು. ಹೀಗೆ ಬರೆದು ತಮ್ಮ ಹೆಸರು ಹಾಗೂ ಸಹಿ ಹಾಕಬೇಕು. ಒಂದು ರೀತಿಯಲಲ್ಲಿ ಸೆಲೆಬ್ರೆಟಿಗಳು ಶರ್ಟ್ ಮೇಲೆ ಆಟೋಗ್ರಾಫ್ ಹಾಕಿದಂತೆ. ಈ ಶರ್ಟ್‌ನ್ನು ಪ್ರೇಮ್ ಹಾಕಿಸಿ ಇಟ್ಟುಕೊಳ್ಳುವುದು ವಿದ್ಯಾರ್ಥಿನಿಯರ ನಿರ್ಧಾರವಾಗಿತ್ತು.
ಹೀಗಾಗಿ ಕೊನಯೆ ದಿನದಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಪೆನ್ ಡೇ ಆಚರಿಸಿದ್ದಾರೆ. ವಿದ್ಯಾರ್ಥಿನಿಯರು ಹಾಕಿದ್ದ ಸಮವಸ್ತ್ರದ ಮೇಲೆ ಸಂದೇಶ, ಸಹಿ, ಉಪದೇಶ, ಕ್ಷಮೆ ಸೇರಿದಂತೆ ಹಲವು ವಿಚಾರಗಳನ್ನು ಬರೆದು ಸಹಿ ಹಾಕಿದ್ದಾರೆ. ಕೆಲ ವಿದ್ಯಾರ್ಥಿನಿಯರ ಶರ್ಟ್ ಮೇಲೆ ಜಾಗವೇ ಇರಲಿಲ್ಲ. ವಿದ್ಯಾರ್ಥಿನಿಯರು ಪೆನ್ ಡೇ ಆಚರಿಸುತ್ತಿರುವ ಮಾಹಿತಿ ತಿಳಿದ ಶಾಲಾ ಪ್ರಿನ್ಸಿಪಾಲ್ 10ನೇ ತರಗತಿ ವಿದ್ಯಾರ್ಥಿನಿಯರ ಕೊಠಡಿಗೆ ದಾಳಿ ಮಾಡಿದ್ದಾರೆ. ಈ ವೇಳೆ ಸಂಭ್ರಮದಲ್ಲಿದ್ದ ವಿದ್ಯಾರ್ಥಿನಿಯರ ಎಲ್ಲಾ ಸಂತೋಷ ಒಂದು ಕ್ಷಣದಲ್ಲಿ ಮಾಯವಾಗಿತ್ತು.
ಪೆನ್ ಡೇ ಆಚರಣೆ ವಿರುದ್ದ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಕೊನೆಯ ದಿನವಾದ ಕಾರಣ ಈ ರೀತಿ ಮಾಡಿದ್ದೇವೆ. ಕ್ಷಮೆ ಇರಲಿ ಎಂದು ವಿದ್ಯಾರ್ಥಿನಿಯರು ಕ್ಷಮೆ ಕೋರಿದ್ದಾರೆ. ಆದರೆ ಪ್ರಿನ್ಸಿಪಾಲ್ ಸಿಟ್ಟು ತಣ್ಣಗಾಗಿಲ್ಲ. 80 ವಿದ್ಯಾರ್ಥಿನಿಯರ ಸಮವಸ್ತ್ರ ಶರ್ಟ್ ಕಳಚುವಂತೆ ಸೂಚಿಸಿದ್ದಾರೆ. ಎಲ್ಲಾ ವಿದ್ಯಾರ್ಥಿನಿಯರ ಶರ್ಟ್ ಪಡೆದು ವಿದ್ಯಾರ್ಥಿನಿಯರನ್ನು ತಕ್ಷಣವೇ ಮನೆಗೆ ಹೊರಡುವಂತೆ ಸೂಚಿಸಿದ್ದಾರೆ. ಶರ್ಟ್‌ನ್ನು ಪ್ರ್ರಿನ್ಸಿಪಾಲ್‌ಗೆ ನೀಡಿ ತಮ್ಮ ಬ್ಲೇಜರ್ ಹಾಕಿಕೊಂಡು ಮನೆಗೆ ವಾಪಾಸ್ಸಾಗಿದ್ದಾರೆ. ಇದೀಗ ಶಾಲಾ ಪ್ರಿನ್ಸಿಪಾಲ್ ವಿರುದ್ಧ ದೂರು ದಾಖಲಾಗಿದೆ. ಸೂಕ್ತ ಕ್ರಮದ ಭರವಸೆಯನ್ನು ಉಪ ಜಿಲ್ಲಾಧಿಕಾರಿ ನೀಡಿದ್ದಾರೆ.
ನವೀಕರಣಕ್ಕೆ ಅರ್ಜಿ ಹಾಕದ 1500 ಖಾಸಗಿ ಶಾಲೆ: ಸ್ವಯಂ ಘೋಷಣೆಗೆ 1 ವರ್ಷ ಮಾನ್ಯತೆ