Viral Video ನದಿಯಲ್ಲಿ ಯುವತಿಯ ವಿಡಿಯೋ ಶೂಟ್, ಡ್ಯಾನ್ಸ್ ಮಾಡಿ ಹಿಂತಿರುಗಿದಾಗ ಶಾಕ್!

By Suvarna NewsFirst Published May 9, 2022, 8:33 PM IST
Highlights
  • ನೀರಿನ ನಡುವೆ ವಿಡಿಯೋ ಶೂಟ್‌ಗಾಗಿ ಯುವತಿ ಡ್ಯಾನ್ಸ್
  • ಯುವತಿ ಡ್ಯಾನ್ಸ್ ಮಾಡಿದ್ದೇ ಬಂತು, ಮುಂದೇನಾಯ್ತು?
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ
     

ಬೆಂಗಳೂರು(ಮೇ.09) ಸಣ್ಣ ನದಿ, ಕಲ್ಲು, ಮುರಿದು ಬಿದ್ದ ಸೇತುವೆ. ಈ ತಟ್ಟಿನ ಮೇಲೆ ನಿಂತು ಯುವತಿಯ ಡ್ಯಾನ್ಸ್. ಆದರೆ ಏನೋ ಮಾಡಲು ಹೋಗಿ ಇನ್ನೇನು ಆಗೋಯ್ತು. ಹಾಗಂತ ಯುವತಿ ನೀರಿಗೆ ಬಿದ್ದಿಲ್ಲ. ಡ್ಯಾನ್ಸ್ ಮಾಡಿ ಮುಗಿಸಿದ್ದಾಳೆ. ಆದರೆ ಶೂಟ್ ಮಾಡಲು ಇಟ್ಟಿದ್ದ ಫೋನ್ ನೀರಿಗೆ ಬಿದ್ದಿದೆ. ಈ ವಿಡಿಯೋ ವೈರಲ್ ಆಗಿದೆ.

ಮುರಿದ ಬಿದ್ದ ಸೇತುವೆ ಮೇಲೆ ಯುವತಿ ಡ್ಯಾನ್ಸ್ ಮಾಡಿ ತನ್ನ ಡ್ಯಾನ್ಸಿಂಗ್ ಸ್ಕಿಲ್ ತೋರಿಸಲು ಹೋಗಿ ಇದೀಗ ವೈರಲ್ ಆಗಿದ್ದಾಳೆ. ಈ ಸೇತುವೆ ಮೇಲೆ ಸ್ಟ್ಯಾಂಡ್ ಸಹಾಯದಲ್ಲಿ ಮೊಬೈಲ್ ಇಟ್ಟಿದ್ದಾಳೆ. ಈ ಮೊಬೈಲ್ ಮೂಲಕ ವಿಡಿಯೋ ಶೂಟ್ ಮಾಡಲು ಮುಂದಾಗಿದ್ದಾಳೆ.

ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಸರಳತೆಗೆ ಶ್ಲಾಘನೆ: ವಿಡಿಯೋ ವೈರಲ್‌

ಮೊಬೈಲ್ ಸ್ಟ್ಯಾಂಡ್ ಇಟ್ಟು ಹಿಂತಿರುಗಿ ನಿಂತು ಯುವತಿ ಡ್ಯಾನ್ಸ್ ಮಾಡಿದ್ದಾಳೆ. ತನ್ನ ಡ್ಯಾನ್ಸ್ ಮುಗಿದ ಬಳಿಕ ಹಿಂತುರುಗಿ ನೋಡಿದಾಗ ಅಚ್ಚರಿ ಕಾದಿತ್ತು. ಕಾರಣ ಇಟ್ಟ ಮೊಬೈಲ್ ಹಾಗೂ ಸ್ಟ್ಯಾಂಡ್ ಇರಲಿಲ್ಲ. ಯುವತಿ ಮೊಬೈಲ್ ಇಟ್ಟ ಮರುಕ್ಷಣದಲ್ಲೇ ನೀರಿಗೆ ಬಿದ್ದಿದೆ.

ಯುವತಿ ಈ ಕಸರತ್ತು  ಮತ್ತೊಂದು ಮೊಬೈಲ್‌ನಲ್ಲಿ ಸೆರೆಯಾಗಿದೆ. ನೀರಿನಲ್ಲಿ ಬಿದ್ದ ಕಾರಣ ಯುವತಿ ಮೊಬೈಲ್ ಕೆಟ್ಟು ಹೋಗಿದೆ ಎಂದು ಯುವತಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ಇದು ನೈಜ ವಿಡಿಯೋ ಅಲ್ಲ, ವೈರಲ್ ಆಗಲು ಬೇಕೆಂತಲೇ ಸೃಷ್ಟಿಸಲಾಗಿದೆ. ಯುವತಿ ಮೊಬೈಲ್ ಸ್ಟ್ಯಾಂಡ್ ನಿಲ್ಲುತ್ತೋ ಇಲ್ಲವೋ ಅನ್ನೋದನ್ನು ಪರಿಶೀಲಿಸಿಲ್ಲ.  ಇಷ್ಟೇ ಅಲ್ಲ ಯುವತಿ ಮೊಬೈಲ್ ಇಟ್ಟು ಅಷ್ಟೇ ವೇಗದಲ್ಲಿ ಹಿಂತುರುಗಿದ್ದಾಳೆ. ಸ್ಟ್ಯಾಂಡ್ ಮೇಲಿಟ್ಟ ಮೊಬೈಲ್ ಡಮ್ಮಿಯಾಗಿದೆ. ಅದು ನೈಜ ಮೊಬೈಲ್ ಅಲ್ಲ. ಈ ರೀತಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಗಲಾಟೆ ಮಾಡ್ತಿದ್ದಾರೆ ಅಂತ ಪೊಲೀಸರ ಕರೆಸಿದ್ರು: ಬಂದ ಪೊಲೀಸರು ಜೊತೆಲೇ ಕುಣಿದ್ರು

ಸಂಪೂರ್ಣವಾಗಿ ಇದು ನಕಲಿ, ಈ ವಿಡಿಯೋ ಸೃಷ್ಟಿಸಲಾಗಿದೆ. ಇಲ್ಲಿ ಯುವತಿಯ ಡ್ಯಾನ್ಸ್, ಮೊಬೈಲ್ ಎಲ್ಲವೂ ನಕಲಿ. ಮೊದಲೆ ನಿರ್ಧರಿಸಿ ಚಿತ್ರೀಕರಿಸಿ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ.

ಬ್ಯಾಂಕ್‌ ದೋಚುವ ಪ್ರಯತ್ನದ ವಿಡಿಯೋ ವೈರಲ್‌
ಹುಬ್ಬಳ್ಳಿ ನಗರದ ಕೊಪ್ಪಿಕರ್‌ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ಶಾಖೆಯಲ್ಲಿ ಜ. 18ರಂದು ಯುವಕನೊಬ್ಬ ಹಣ ದೋಚಲು ಯತ್ನಿಸಿದ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳು ಆತನನ್ನು ಬಂಧಿಸಿದ್ದ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ವಿಜಯಪುರದ ಪ್ರವೀಣಕುಮಾರ ಎಂಬಾತ, ಮುಖಕ್ಕೆ ಮುಸುಕು ಹಾಕಿಕೊಂಡು ಮಧ್ಯಾಹ್ನ 2.17ರ ಸುಮಾರಿಗೆ ಬ್ಯಾಂಕ್‌ ಒಳಕ್ಕೆ ನುಗ್ಗಿದ್ದಾನೆ. ನಗದು ಕೌಂಟರನ ಬಾಗಿಲಿಗೆ ಒದ್ದು, ಪಕ್ಕದಲ್ಲಿದ್ದ ಮಹಿಳಾ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ನಂತರ, ಅವರ ಕೈಚೀಲವನ್ನು ದೂರಕ್ಕೆ ಎಸೆದು, ಅಲ್ಲಿದ್ದ ಹಣವನ್ನು ತನ್ನ ಬ್ಯಾಗ್‌ಗೆ ತುಂಬಿಸಿಕೊಂಡಿದ್ದಾನೆ.

ಯಕ್ಷಗಾನಕ್ಕೂ ಕಾಲಿಟ್ಟಶ್ರೀವಲ್ಲಿ ಹಾಡು
ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನಕ್ಕೂ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ ತೆಲುಗು ಚಿತ್ರದ ಶ್ರೀವಲ್ಲಿ ಹಾಡು ಕಾಲಿಟ್ಟಿದೆ.ಬಪ್ಪನಾಡು ದುರ್ಗಾಪರಮೇಶ್ವರಿ ಮೇಳದಲ್ಲಿ ಈ ಹಾಡಿನ ತುಣುಕನ್ನು ಭಾಗವತರು ಹಾಡಿದ್ದಾರೆ. ಇದಕ್ಕೆ ಹಾಸ್ಯ ಕಲಾವಿದ ದಿನೇಶ್‌ ಕೋಡಪದವು ಹೆಜ್ಜೆ ಹಾಕಿದ್ದಾರೆ. ಇದರ ವೀಡಿಯೋ ತುಣುಕು ಜಲತಾಣದಲ್ಲಿ ವೈರಲ್‌ ಆಗಿದೆ.ಯಕ್ಷಗಾನಕ್ಕೆ ಅದರದ್ದೇ ಆದ ಚೌಕಟ್ಟಿದ್ದು, ಯಾವುದೇ ಪ್ರಯೋಗ ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಇರಬೇಕು ಎಂಬ ಮಾತು ಕೂಡ ಕೇಳಿ ಬಂದಿದೆ. ಯಕ್ಷಗಾನ ಪ್ರಿಯರು ಈ ಹಾಡನ್ನು ಇದೀಗ ಯಾವ ರೀತಿ ಸ್ವೀಕರಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
 

click me!