ಜನರೇ ಇಲ್ಲದ ಖಾಲಿ ಪಾರ್ಕಲ್ಲಿ ನಡುರಾತ್ರಿ ಎಕ್ಸರ್ಸೈಸ್ ಮಾಡುತ್ತೆ ದೆವ್ವ..? ಭಯ ಹುಟ್ಟಿಸೋ ವಿಡಿಯೋ ವೈರಲ್

Published : Jun 14, 2020, 01:46 PM ISTUpdated : Jun 14, 2020, 02:01 PM IST
ಜನರೇ ಇಲ್ಲದ ಖಾಲಿ ಪಾರ್ಕಲ್ಲಿ ನಡುರಾತ್ರಿ ಎಕ್ಸರ್ಸೈಸ್ ಮಾಡುತ್ತೆ ದೆವ್ವ..? ಭಯ ಹುಟ್ಟಿಸೋ ವಿಡಿಯೋ ವೈರಲ್

ಸಾರಾಂಶ

ಪಾರ್ಕ್‌ನಲ್ಲಿ ಹಗಲು ಜನ ಜಿಮ್ ಮೆಷಿನ್‌ಗಳನ್ನು ಬಳಸ್ತಾರೆ ಸರಿ. ಆದ್ರೆ ನಡು ರಾತ್ರಿ ಯಾರಾದ್ರೂ ಬಳಸ್ತಾರಾ..? ಅದು ಪಬ್ಲಿಕ್ ಪಾರ್ಕ್‌ನಲ್ಲಿ..? ಈ ಲಾಕ್‌ಡೌನ್ ಸಮಯದಲ್ಲಂತೂ ಸಾಧ್ಯವೇ ಇಲ್ಲ. ಆದ್ರೂ ದೆಹಲಿಯ ಪಾರ್ಕ್‌ ಒಂದರಲ್ಲಿ ಜನರೇ ಇಲ್ಲದೆ ಜಿಮ್ ಮೆಷಿನ್ ಮಾತ್ರ ತೂಗುತ್ತೆ..! ಏನಿದು ದೆವ್ವದಾಟ..? ಇಲ್ಲಿ ನೋಡಿ

ನವದೆಹಲಿ(ಜೂ.14): ಕ್ವಾರೆಂಟೈನ್‌ ಸಮಯದಲ್ಲಿ ಜನರಿಗೆ ಮನೋರಂಜನೆಗೇನೂ ಕಡಿಮೆ ಇಲ್ಲ. ಇಲ್ಲೊಂದು ವಿಡಿಯೋ ಜನರನ್ನು ತರ್ಕಕ್ಕೆ ತಳ್ಳಿದೆ, ಕನ್ಫ್ಯೂಸ್ ಮಾಡಿದೆ, ಜೊತೆಗೇ ಹೆದರಿಸಿಬಿಟ್ಟಿದೆ. ಲಾಕ್‌ಡೌನ್ ಸಂದರ್ಭ ಈ ವಿಇಡಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪಾರ್ಕ್‌ನಲ್ಲಿ ಔಟ್‌ ಡೋರ್ ಜಿಮ್ ಮೆಷಿನ್‌ಗಳನ್ನು ಯಾರೂ ಜನರಿಲ್ಲದೆಯೇ ಸುಮ್ಮನೆ ಆಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಎದುರಿನಲ್ಲಿ ಏನಪ್ಪಾ ನಡೀತಿರೋದು ಅಂತ ಪೊಲೀಸರು ನೋಡುತ್ತಿರುವುದು ವಿಇಡಯೋದಲ್ಲಿ ಕಾಣಬಹುದು.

ಕೊರೋನಾ ಸಾವಿನಿಂದ ಪಾರಾದ ವೃದ್ಧನಿಗೆ 181 ಪುಟದ ಹಾಸ್ಪಿಟಲ್ ಬಿಲ್..! ಮೊತ್ತ ನೋಡಿದ್ರೆ ತಲೆ ಸುತ್ತುತ್ತೆ..!

ಯಾರೋ ಜಿಮ್ ಮೆಷಿನ್‌ನಲ್ಲಿ ವರ್ಕೌಟ್ ಮಾಡುತ್ತಿರುವಂತೆಯೇ ಕಾಣಿಸುವ ಚನೆಯನ್ನು ಪೊಲೀಸ್ ಸಿಬ್ಬಂದಿಯೊಬ್ಬರು ವಿಡಿಯೋ ಮೂಲಕ ಸೆರೆ ಹಿಡಿಯುವುದೂ ಕಾಣಿಸುತ್ತದೆ.

ಈವರೆಗೂ ಈ ಪಾರ್ಕ್ ಯಾವುದು..? ಎಲ್ಲಿಯದು ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಕೆಲವರು ದೆಹಲಿಯ ರೋಹಿಣಿ ಪ್ರದೇಶದ ಜಪಾನೀಸ್ ಪಾರ್ಕ್‌ ಎನ್ನುತ್ತಾರೆ ಕೆಲವರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಸಿದ ಸರ್ಕಲ್ ಆಫೀಸರ್ ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸವಾಗಿರಬಹುದು ಎಂದಿದ್ದಾರೆ. ಕಳೆದ ಬಾರಿ ಚಂಡೀಗಢದ ವೈದ್ಯಕೀಯ ಕಾಲೇಜು ಎದುರು ವೀಲ್ ಚೇರ್ ಸುತ್ತುವ ಸಿಸಿಟಿವಿ ಕ್ಯಾಮೆರಾ ಫೋಟೇಜ್ ವೈರಲ್ ಆಗಿತ್ತು. 

ಆಲಮಟ್ಟಿ ರಾಕ್ ಗಾರ್ಡನ್.. ಅಮಾವಾಸ್ಯೆ ದಿನ ತನ್ನಿಂದ ತಾನೇ ತೂಗಿದ ಜೋಕಾಲಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ