8 ದಿನದ ಮಗುವಿಗೆ ಕೊರೋನಾ ಪಾಸಿಟಿವ್: 15 ದಿನದಲ್ಲೇ ಗುಣಮುಖ

By Suvarna News  |  First Published May 2, 2021, 3:44 PM IST

ಹೆರಿಗೆಯ ಮೊದಲು ತಾಯಿಗೆ ಕೊರೋನಾ  ನೆಗೆಟಿವ್ | ಮನೆಗೆ ಹೋದ ನಂತರ ಆಕೆಗೂ ಸೋಂಕು | 8 ದಿನಗಳ ಮಗುವಿಗೆ ಸಹ ಪಾಸಿಟಿವ್


ಲಕ್ನೋ(ಮೇ.02): ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನವಜಾತ ಶಿಶುವಿಗೆ ಹುಟ್ಟಿದ ಎಂಟು ದಿನಗಳಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಮಗು ಕೊರೋನಾ ಯಶಸ್ವಿಯಾಗಿ ಸೋಲಿಸಿ 15 ದಿನಗಳಲ್ಲಿ ಸಂಪೂರ್ಣ ಗುಣಮುಖವಾಗಿದೆ.

ಹೆರಿಗೆಗೆ ಮುಂಚಿತವಾಗಿ ತಾಯಿಗೆ ಕೊರೋನಾ ನೆಗೆಟಿವ್ ಆಗಿತ್ತು. ಮನೆಗೆ ಹೋದ ನಂತರ ಆಕೆಗೆ ಸೋಂಕು ತಗುಲಿತು. 8 ದಿನಗಳ ಮಗುವಿಗೆ ಸಹ ವೈರಸ್ ಬಂತು. ಮಗುವಿಗೆ COVID-19 ಪಾಸಿಟಿವ್ ಬಂದಿದೆ. 15 ದಿನಗಳ ಚಿಕಿತ್ಸೆಯ ನಂತರ ನವಜಾತ ಶಿಶುವಿಗೆ ವರದಿ ನೆಗೆಟಿವ್ ಬಂದಿದೆ ಎಂದು ಯಶೋದ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

Tap to resize

Latest Videos

"

ಕೆಲವೇ ದಿನದಲ್ಲಿ ಭಾರತಕ್ಕೆ ಮರಳಲಿದ್ದಾರೆ ಸೀರಂ ಮುಖ್ಯಸ್ಥ ಅದಾರ್ ಪೂನಾವಾಲಾ

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಹೊಸ ಪ್ರಕರಣಗಳಲ್ಲಿ ಶೇಕಡಾ 73.71 ರಷ್ಟು ಪ್ರಕರಣ ವರದಿಯಾದ ಹತ್ತು ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಸೇರಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 34,372 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಮೊದಲ ಬಾರಿಗೆ ಕಳೆದ 24 ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಹೊಸ COVID-19 ಪ್ರಕರಣಗಳನ್ನು ವರದಿಯಾಗಿವೆ.

ಒಟ್ಟು 4,01,993 ಹೊಸ COVID-19 ಪ್ರಕರಣಗಳು ದಾಖಲಾಗಿದ್ದು, ಒಟ್ಟು 1,91,64,969 ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!