ಘಾಯಲ್‌ ಹೂಂ, ಇಸೀಲಿಯೇ ಘಾತಕ್‌ ಹೂಂ: ಧುರಂಧರ್‌ ಸ್ಟೈಲ್‌ನಲ್ಲಿ AAP ವಿರುದ್ಧ ಛಡ್ಡಾ ಗುಡುಗು

Kannadaprabha News   | Kannada Prabha
Published : Apr 05, 2026, 08:28 AM IST
raghav chadha aap controversy rajya sabha removal response allegations video statement political conflict india news

ಸಾರಾಂಶ

ರಾಜ್ಯಸಭೆಯ ಆಪ್ ಉಪನಾಯಕ ಸ್ಥಾನದಿಂದ ವಜಾಗೊಂಡಿರುವ ರಾಘವ್ ಛಡ್ಡಾ, ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದು ಸವಾಲೆಸೆದಿರುವ ಅವರು, ಜನರ ಧ್ವನಿಯಾಗಲು ಸಂಸತ್ತಿಗೆ ಬಂದಿದ್ದೇನೆ ಹೊರತು ಗದ್ದಲ ಸೃಷ್ಟಿಸಲು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ನವದೆಹಲಿ(ಏ.5): ರಾಜ್ಯಸಭೆಯ ಆಮ್‌ ಆದ್ಮಿ ಪಕ್ಷದ (ಆಪ್‌) ಉಪನಾಯಕ ಸ್ಥಾನದಿಂದ ವಜಾಗೊಂಡಿರುವ ಸಂಸದ ರಾಘವ್‌ ಛಡ್ಡಾ ಶನಿವಾರವೂ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ‘ಘಾಯಲ್‌ ಹೂಂ, ಇಸೀಲಿಯೇ ಘಾತಕ್‌ ಹೂಂ’ (ಗಾಯಗೊಂಡಿದ್ದೇನೆ, ಇದೇ ಕಾರಣಕ್ಕೆ ಘಾತಕನಾಗಿದ್ದೇನೆ) ಎಂದು ಧುರಂಧರ್‌ ಸಿನಿಮಾ ಡೈಲಾಗ್‌ ಮೂಲಕ ಚಾಟಿ ಬೀಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರದ ನಿಲುವಿಗೆ ರಾಹುಲ್ ಗಾಂಧಿ ಟೀಕೆ, ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಹಿರಿಯ ನಾಯಕರು!

ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ‘ಸದನದಿಂದ ವಿಪಕ್ಷಗಳು ಸಭಾತ್ಯಾಗ ಮಾಡಿದಾಗ ನಾನು ಅವರೊಂದಿಗೆ ಹೊರನಡೆಯಲಿಲ್ಲ ಮತ್ತು ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಯ ಗೊತ್ತುವಳಿಗೆ ಸಹಿ ಹಾಕಲಿಲ್ಲ ಎಂಬುದು ನನ್ನ ಮೇಲಿನ ಮೊದಲ ಆರೋಪ. ಇದು ಶುದ್ಧ ಸುಳ್ಳು. ವಿಪಕ್ಷದವರು ಸಭಾತ್ಯಾಗ ಮಾಡಿ ನಾನು ಅವರಿಗೆ ಬೆಂಬಲ ನೀಡದ ಒಂದೇ ಒಂದು ಘಟನೆಯ ಉದಾಹರಣೆ ಕೊಡಿ’ ಎಂದು ಪಕ್ಷಕ್ಕೆ ಸವಾಲೆಸೆದರು. ಜೊತೆಗೆ ನಾನು ಸಂಸತ್ತಿಗೆ ಜನರ ವಿಷಯಗಳ ಬಗ್ಗೆ ಧ್ವನಿ ಎತ್ತಲು ಬಂದಿದ್ದೇನೆಯೇ ಹೊರತೂ ಗದ್ದಲ ಸೃಷ್ಟಿಸಲು ಅಲ್ಲ ಎಂದು ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಟ್ರಬಲ್; ಕೆಲಸ ಕಳೆದುಕೊಂಡು ನಗರಗಳಿಂದ ತವರಿನತ್ತ ಹೊರಟ ಲಕ್ಷಾಂತರ ಕಾರ್ಮಿಕರು
India Latest News Live: ಘಾಯಲ್‌ ಹೂಂ, ಇಸೀಲಿಯೇ ಘಾತಕ್‌ ಹೂಂ - ಧುರಂಧರ್‌ ಸ್ಟೈಲ್‌ನಲ್ಲಿ AAP ವಿರುದ್ಧ ಛಡ್ಡಾ ಗುಡುಗು