ಭಾರತೀಯ ಭೂಸೇನೆಗೆ ಹೊಸ ಸಾರಥಿ| ಭೂಸೇನಾ ಮುಖ್ಯಸ್ಥರಾಗಿ ಜನರಲ್ ಮುಕುಂದ್ ನಾರವಾನೆ ಅಧಿಕಾರ ಸ್ವೀಕಾರ| ಜನರಲ್ ಬಿಪಿನ್ ರಾವತ್ ಅವರಿಂದ ತೆರವಾದ ಸ್ಥಾನ| ಬಿಪಿನ್ ರಾವತ್ ದೇಶದ ಮೊದಲ CDS ಆಗಿ ನೇಮಕ| 37 ವರ್ಷಗಳ ಸುದೀರ್ಘ ಸೇವೆಯ ಅನುಭವ ಹೊಂದಿರುವ ಜನರಲ್ ಮನೋಜ್| ಭೂಸೇನೆಯ ಪೂರ್ವ ಕಮಾಂಡ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ನಾರವಾನೆ|
ನವದೆಹಲಿ(ಡಿ.31): ಭಾರತೀಯ ಭೂಸೇನಯ ನೂತನ ಮುಖ್ಯಸ್ಥರಾಗಿ ಜನರಲ್.ಮನೋಜ್ ಮುಕುಂದ್ ನಾರವಾನೆ ಅಧಿಕಾರ ಸ್ವೀಕರಿಸಿದ್ದಾರೆ.
ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಂದ ತೆರವಾದ ಸ್ಥಾನಕ್ಕೆ ಮುಕುಂದ್ ನಾರವಾನೆ ಅವರನ್ನು ನೇಮಿಸಲಾಗಿದೆ.
जनरल मनोज मुकुंद नरवणे, पीवीएसएम, एवीएसएम, एसएम, वीएसएम, एडीसी ने सेनाध्यक्ष का पदभार संभाला।
General Manoj Mukund Naravane, PVSM, AVSM, SM, VSM, ADC takes over as the Chief of Army Staff of the pic.twitter.com/bBEyNQohDi
undefined
ಬಿಪಿನ್ ರಾವತ್ ದೇಶದ ಮೊದಲ CDS ಆಗಿ ನೇಮಕಗೊಂಡಿದ್ದು, ಈ ಮೂಲಕ ಮೂರೂ ಸೇನಾ ಪಡೆಗೆ ಸಂಬಂಧಿಸಿದ ವಿಚಾರಗಳಲ್ಲಿ ಸಮನ್ವಯ ಸಾಧಿಸಲು ರಕ್ಷಣಾ ಸಚಿವರಿಗೆ ಪ್ರಧಾನ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮಿಲಿಟರಿಗೆ ಹೊಸ ಬಾಸ್: ಬಿಪಿನ್ ರಾವತ್ ದೇಶದ ಮೊದಲ CDS!
ಸೇನೆಯಲ್ಲಿ ಸುಮಾರು 37 ವರ್ಷಗಳ ಸೇವೆಯ ಅನುಭವ ಹೊಂದಿರುವ ಜನರಲ್ ಮನೋಜ್, ಈ ಅವಧಿಯಲ್ಲಿ ಚೀನಾ ಗಡಿ, ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಜಾಗಕ್ಕೆ ಅನುಭವಿ ಯೋಧ
ಈ ಸುದೀರ್ಘ ಸೇವೆಯಲ್ಲಿ ಜನರಲ್ ಮನೋಜ್ ನಾರವಾನೆ ಅವರಿಗೆ ಈಗಾಗಲೇ ವಿಶಿಷ್ಟ ಸೇವಾ ಪದಕ, ಅತೀ ವಿಶಿಷ್ಠ ಸೇವಾ ಪದಕಗಳು ಸಂದಿವೆ. ಮುಕುಂದ್ ನಾರವಾನೆ ನೇತೃತ್ವದಲ್ಲಿ ಭಾರತೀಯ ಭೂಸೇನೆ ಮತ್ತಷ್ಟು ಸದೃಢವಾಗಲಿದೆ ಎಂದು ನಿರ್ಗಮಿತ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭರವಸೆ ವ್ಯಕ್ತಪಡಿಸಿದ್ದಾರೆ.
ನಾರವಾನೆ ಸೇನೆಯ ಉಪ ಮುಖ್ಯಸ್ಥರಾಗುವುದಕ್ಕೂ ಮುನ್ನ ಕೋಲ್ಕತಾದಲ್ಲಿ ಪ್ರಧಾನ ಕಚೇರಿಯಿರುವ ಭೂಸೇನೆಯ ಪೂರ್ವ ಕಮಾಂಡ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.
ಜನರಲ್ ಮನೋಜ್ ನಾರವಾನೆ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ವಿರುದ್ಧ ಕಾರ್ಯಾಚರಣೆಗಳ ತಂತ್ರದ ರೂವಾರಿ ಕೂಡ ಹೌದು.