ಅದಾನಿಗೆ ಚೀನಾ ನಂಟು; ಆದರೂ ಬಂದರು ನಿರ್ವಹಣೆಗೆ ಅವಕಾಶ: ಕಾಂಗ್ರೆಸ್‌ ಆಕ್ರೋಶ

By Kannadaprabha News  |  First Published Apr 10, 2023, 9:38 AM IST

ಚೀನಾದ ಯಾವುದೇ ಸಂಸ್ಥೆಗಳು ಅಥವಾ ಚೀನಾ ನಂಟಿನ ಯಾವುದೇ ಕಂಪನಿಗಳಿಗೆ ಭಾರತದ ಬಂದರುಗಳ ನಿರ್ವಹಣೆ ನೀಡಬಾರದು ಎಂಬುದು ಸರ್ಕಾರದ ನೀತಿ. ಇದೇ ಕಾರಣಕ್ಕಾಗಿ ಅದಾನಿ ಒಡೆತನದ ಕಂಪನಿಯೊಂದಕ್ಕೆ ಜವಾಹರ್‌ಲಾಲ್‌ ನೆಹರು ಬಂದರಿನ ನಿರ್ವಹಣೆ ಗುತ್ತಿಗೆ ನೀಡಿರಲಿಲ್ಲ. ಇದು ಚೀನಾ ಕಂಪನಿಗಳ ಜೊತೆ ಗೌತಮ್ ಅದಾನಿ ನಂಟನ್ನು ಸಾಬೀತುಪಡಿಸುತ್ತದೆ’ ಎಂದಿದ್ದಾರೆ.  


ನವದೆಹಲಿ (ಏಪ್ರಿಲ್ 10, 2023): ‘ಉದ್ಯಮಿ ಗೌತಮ್‌ ಅದಾನಿಗೆ ಚೀನಾ ನಂಟಿದೆ. ಆದರೂ ಅವರಿಗೆ ಭಾರತದಾದ್ಯಂತ ಬಂದರುಗಳನ್ನು ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ. ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಈ ಆರೋಪ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಎಪಿಎಂ ಟರ್ಮಿನಲ್ಸ್‌ ಮ್ಯಾನೇಜ್‌ಮೆಂಟ್‌ ಮತ್ತು ತೈವಾನ್‌ನ ವಾನ್‌ ಹೈ ಲೈನ್ಸ್‌ ಪಾಲುದಾರಿಕೆಯ ಕಂಪನಿಯೊಂದಕ್ಕೆ ಭದ್ರತಾ ನಿರಾಕ್ಷೇಪಣಾ ಪತ್ರ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. 

ವಾನ್‌ ಹೈನ ನಿರ್ದೇಶಕ ಮತ್ತು ಚೀನಾ ಕಂಪನಿಯೊಂದರ (China Firm) ನಂಟಿನ ಹಿನ್ನೆಲೆಯಲ್ಲಿ ಸರ್ಕಾರ (Government) ಈ ಕ್ರಮ ಕೈಗೊಂಡಿತ್ತು. ಚೀನಾದ ಯಾವುದೇ ಸಂಸ್ಥೆಗಳು ಅಥವಾ ಚೀನಾ ನಂಟಿನ ಯಾವುದೇ ಕಂಪನಿಗಳಿಗೆ ಭಾರತದ (India) ಬಂದರುಗಳ (Ports) ನಿರ್ವಹಣೆ ನೀಡಬಾರದು ಎಂಬುದು ಸರ್ಕಾರದ ನೀತಿ. ಇದೇ ಕಾರಣಕ್ಕಾಗಿ ಅದಾನಿ (Adani) ಒಡೆತನದ ಕಂಪನಿಯೊಂದಕ್ಕೆ ಜವಾಹರ್‌ಲಾಲ್‌ ನೆಹರು ಬಂದರಿನ (Jawaharlal Nehru Port) ನಿರ್ವಹಣೆ ಗುತ್ತಿಗೆ ನೀಡಿರಲಿಲ್ಲ. ಇದು ಚೀನಾ ಕಂಪನಿಗಳ ಜೊತೆ ಗೌತಮ್ ಅದಾನಿ (Gautam Adani) ನಂಟನ್ನು ಸಾಬೀತುಪಡಿಸುತ್ತದೆ’ ಎಂದಿದ್ದಾರೆ.  

Tap to resize

Latest Videos

ಇದನ್ನು ಓದಿ: ಅದಾನಿ ಬೆಂಬಲಕ್ಕೆ ಪವಾರ್‌: ಹಿಂಡನ್‌ಬರ್ಗ್‌ ವರದಿಗೆ ಎನ್‌ಸಿಪಿ ನಾಯಕ ಕಿಡಿ

‘ಆದಾಗ್ಯೂ ದೇಶದ ಇತರ ಕೆಲವು ಬಂದರುಗಳ ನಿರ್ವಹಣೆಯನ್ನು ಅದಾನಿಗೆ ನೀಡುತ್ತಿದೆ. ಇದು ಆಕ್ಷೇಪಾರ್ಹ’ ಎಂದು ಅವರು ಹೇಳಿದ್ದಾರೆ.

‘ಚೀನಾದ ಚಾಂಗ್‌ ಚುಂಗ್‌ ಲಿಂಗ್‌, ಅದಾನಿ ಸಮೂಹದ (Adani Group) ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಚಾಂಗ್‌ರ ಪುತ್ರನ ಕಂಪನಿಯೇ ಅದಾನಿ ಸಮೂಹಕ್ಕೆ ಬಂದರು, ಟರ್ಮಿನಲ್‌, ರೈಲು ಮಾರ್ಗ ಮತ್ತು ಇತರೆ ಮೂಲಸೌಕರ್ಯಗಳನ್ನು ನಿರ್ಮಿಸಿ ಕೊಡುತ್ತಿದೆ. ಜೊತೆಗೆ ಅದಾನಿ ಸಮೂಹ ಮತ್ತು ಪಿಎಂಸಿ ಕಂಪನಿಗಳು ಜಂಟಿಯಾಗಿ ವಿದ್ಯುತ್‌ ಉಪಕರಣಗಳ ಬೆಲೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚಳ ಮಾಡಿ 5500 ಕೋಟಿ ರೂ. ವಂಚಿಸಿರುವ ಬಗ್ಗೆ ಕಂದಾಯ ಗುಪ್ತಚರ ಇಲಾಖೆ (Revenue Intelligence Department) ವರದಿ ನೀಡಿದೆ’ ಎಂದು ಜೈರಾಮ್‌ ರಮೇಶ್‌ (Jairam Ramesh) ಆರೋಪಿಸಿದ್ದಾರೆ.

ಇದನ್ನೂ ಓದಿ: ಭ್ರಷ್ಟರೆಲ್ಲ ಇಂದು ಒಂದೇ ವೇದಿಕೆಗೆ: ವಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಹಾರ; ಕರ್ನಾಟಕದಲ್ಲಿ ಬಿಜೆಪಿ ನಂ. 1 ಎಂದ ಮೋದಿ

ದಶಕದ ಹಿಂದೆಯೇ ಅದಾನಿ ಹೊಗಳಿದ್ದ ಶರದ್‌ ಪವಾರ್‌!
ಉದ್ಯಮಿ ಗೌತಮ್‌ ಅದಾನಿ ವಿರುದ್ಧದ ಹಿಂಡನ್‌ಬರ್ಗ್‌ ವರದಿಯನ್ನು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಟೀಕಿಸಿದ್ದು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಆದರೆ ಶರದ್‌ ಪವಾರ್‌ ಮತ್ತು ಗೌತಮ್‌ ಅದಾನಿ ನಂಟು ಈಗಿನದ್ದಲ್ಲ, ದಶಕಗಳ ಹಿಂದಿನದ್ದು! ಹೌದು. 2015ರಲ್ಲಿ ಬಿಡುಗಡೆಯಾಗಿದ್ದ ಶರದ್‌ ಪವಾರ್‌ ಅವರ ಆತ್ಮಚರಿತ್ರೆ ‘ಲೋಕ್‌ ಮಝೆ ಸಾಂಗತಿ’ಯಲ್ಲಿ ಅದಾನಿ ಜೊತೆಗಿನ ತಮ್ಮ ನಂಟನ್ನು ಪವಾರ್‌ ವಿಸ್ತೃತವಾಗಿ ಬರೆದುಕೊಂಡಿದ್ದರು.

‘ಅದಾನಿ ಸರಳ ವ್ಯಕ್ತಿತ್ವದ ಓರ್ವ ಶ್ರಮಜೀವಿ ಮತ್ತು ತಳಮಟ್ಟದ ನಾಯಕ. ಮೂಲಸೌಕರ್ಯ ವಲಯದಲ್ಲಿ ದೊಡ್ಡ ಸಾಧನೆ ಮಾಡುವ ಹಂಬಲ ಅವರಿಗಿತ್ತು. ಮೊದಲಿಗೆ ವಜ್ರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಅದಾನಿ ಬಳಿಕ ಮೂಲಸೌಕರ್ಯ ವಲಯದಲ್ಲಿ ಕಾಲಿಟ್ಟು ದೊಡ್ಡ ಸಾಧನೆ ಮಾಡಿದರು. ಉಷ್ಣ ವಿದ್ಯುತ್‌ ವಲಯಕ್ಕೂ ಪ್ರವೇಶ ಮಾಡುವಂತೆ ನಾನು ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಆ ವಲಯವನ್ನೂ ಪ್ರವೇಶಿಸಿದರು’ ಎಂದು ಶರದ್‌ ಪವಾರ್‌ ಬಣ್ಣಿಸಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ, ಅದಾನಿ ವಿಚಾರಕ್ಕೆ ಬಲಿಯಾದ ಸಂಸತ್‌ ಕಲಾಪ: ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್‌ ಸಂಸದರು

click me!