ಟಿಕೆಟ್‌ ಕೊಡಿಸುವುದಾಗಿ ಹಣ ವಸೂಲಿ: ನಕಲಿ ಪ್ರಶಾಂತ್‌ ಕಿಶೋರ್‌ ಸೆರೆ!

Published : May 16, 2021, 12:49 PM IST
ಟಿಕೆಟ್‌ ಕೊಡಿಸುವುದಾಗಿ ಹಣ ವಸೂಲಿ: ನಕಲಿ ಪ್ರಶಾಂತ್‌ ಕಿಶೋರ್‌ ಸೆರೆ!

ಸಾರಾಂಶ

* ಖ್ಯಾತ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಸೋಗಿನಲ್ಲಿ ಹಣ ವಸೂಲಿ * ಟಿಕೆಟ್‌ ಕೊಡಿಸುವುದಾಗಿ ಹಣ ವಸೂಲಿ: ನಕಲಿ ಪ್ರಶಾಂತ್‌ ಕಿಶೋರ್‌ ಸೆರೆ! * ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ

ಅಮೃತಸರ(ಮೇ.16): ಖ್ಯಾತ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಸೋಗಿನಲ್ಲಿ ಪಂಜಾಬ್‌, ಬಿಹಾರ, ಹರಾರ‍ಯಣ, ರಾಜಸ್ಥಾನ ಮತ್ತು ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೇರಿ ಇನ್ನಿತರ ಪಕ್ಷಗಳ ಟಿಕೆಟ್‌ ಆಕಾಂಕ್ಷಿತರಿಗೆ ಕೋಟ್ಯಂತರ ರು. ವಂಚಿಸುತ್ತಿದ್ದ ಜಾಲವೊಂದನ್ನು ಪಂಜಾಬ್‌ನ ಲೂಧಿಯಾನ ಪೊಲೀಸರು ಭೇದಿಸಿದ್ದಾರೆ.

ಈ ಪ್ರಕರಣದ ಇಬ್ಬರು ಶಂಕಿತರಾದ ರಾಕೇಶ್‌ ಕುಮಾರ್‌ ಭಾಸಿನ್‌ ಮತ್ತು ರಜತ್‌ ಕುಮಾರ್‌ರನ್ನು ಬಂಧಿಸಲಾಗಿದ್ದು, ಈ ಪ್ರಕರಣದ ಕಿಂಗ್‌ಪಿನ್‌ ಎನ್ನಲಾದ ಆರೋಪಿ ಗೌರವ್‌ ಶರ್ಮಾ ಪರಾರಿಯಾಗಿದ್ದಾನೆ ಎಂದಿದ್ದಾರೆ ಪೊಲೀಸರು.

ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತರನ್ನೇ ಗುರಿಯಾಗಿಸಿಕೊಂಡು ಈ ಗ್ಯಾಂಗ್‌ ಒಬ್ಬ ಆಕಾಂಕ್ಷಿಯಿಂದ 5 ಕೋಟಿ ರು. ಹಣ ಪೀಕುತಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

ಈ ಪ್ರಕರಣದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದಾಗ ಬಂಧಿತ ಶಂಕಿತರಾದ ರಾಕೇಶ್‌ ಕುಮಾರ್‌ ಭಾಸಿನ್‌ ಮತ್ತು ರಜತ್‌ ಕುಮಾರ್‌ ಹಾಗೂ ಪರಾರಿಯಾದ ಗೌರವ್‌ ಶರ್ಮಾ ಎಂಬುವರು ತಾವು ಪ್ರಶಾಂತ್‌ ಕಿಶೋರ್‌ ಅವರ ಸೋಗಲ್ಲಿ ಹಲವು ಕಾಂಗ್ರೆಸ್‌ ಆಕಾಂಕ್ಷಿತರಿಗೆ ಟಿಕೆಟ್‌ ನೀಡುವ ವಾಗ್ದಾನದೊಂದಿಗೆ 5 ಕೋಟಿ ರು. ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!