ಕೊರೋನಾದಿಂದ ಗುಣಮುಖರಾಗಿದ್ದ ಕಾಂಗ್ರೆಸ್ ಸಂಸದ ರಾಜೀವ್ ಇನ್ನಿಲ್ಲ

By Suvarna NewsFirst Published May 16, 2021, 12:22 PM IST
Highlights
  • ಕೊರೋನಾದಿಂದ ಗುಣಮುಖರಾಗಿದ್ದ ಕಾಂಗ್ರೆಸ್ ಸಂಸದ ನಿಧನ
  • ಕೊರೋನಾದಿಂದ ಗುಣಮುಖರಾದ ಮೇಲೆ ವೈರಲ್ ಇನ್ಫೆಕ್ಷನ್‌ಗೊಳಗಾಗಿದ್ದ ಸಂಸದ

ದೆಹಲಿ(ಮೇ.16): ಕೊರೋನ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ಕೆಲ ದಿನಗಳ ನಂತರ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಸಂಸದ ರಾಜೀವ್ ಸತವ್(46) ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇದು ನಮ್ಮೆಲ್ಲರಿಗೂ ದೊಡ್ಡ ನಷ್ಟವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ಸತವ್ ಅವರು ಕಾಂಗ್ರೆಸ್ ಆದರ್ಶಗಳನ್ನು ಸಾಕಾರಗೊಳಿಸಿದ ನನ್ನ ಸ್ನೇಹಿತ ಎಂದು ಹೊಗಳಿದ್ದಾರೆ ರಾಹುಲ್ ಗಾಂಧಿ.

ಕೇರಳ, ಕರ್ನಾಟಕದ ಸೇರಿ ಹಲವೆಡೆ ತೌಕ್ಟೆ ತೀವ್ರ ಪರಿಣಾಮ: 100 ರಿಲೀಫ್ ತಂಡ ರೆಡಿ

ರಾಜೀವ್ ಸತವ್ ಅವರಿಗೆ ಮೇ 9, 2021 ರಂದು ಕೊರೋನಾ ನೆಗೆಟಿವ್ ಬಂದಿತ್ತು. ಆದರೂ ದೀರ್ಘಕಾಲದ ಅನಾರೋಗ್ಯದ ನಂತರ ಅವರು ಮೇ 16 ರಂದು ಬೆಳಗ್ಗೆ 4:58ಕ್ಕೆ ನ್ಯುಮೋನಿಯಾಕ್ಕೆ ಬಲಿಯಾದರು ಎಂದು ಕಾಂಗ್ರೆಸ್ ನಾಯಕನಿಗೆ ಚಿಕಿತ್ಸೆ ನೀಡಿದ ಜೆಹಂಗೀರ್ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

ಕಾಂಗ್ರೆಸ್ ಮುಖಂಡನಿಗೆ ಹೊಸ ವೈರಲ್ ಸೋಂಕು ತಗುಲಿದ ನಂತರ ಅವರ ಸ್ಥಿತಿ ಗಂಭೀರವಾಗಿತ್ತು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ. ರಾಜೀವ್ ಸತವ್ ಚೇತರಿಕೆಯ ಹಾದಿಯಲ್ಲಿದ್ದರು, ಆದರೆ ಅವರ ಆರೋಗ್ಯವು ಮತ್ತೆ ಹದಗೆಟ್ಟಿದೆ ಮತ್ತು ಅವರು ಈಗ ಗಂಭೀರವಾಗಿದ್ದಾರೆ. ಅವರಿಗೆ ಸೈಟೊಮೆಗಾಲೊವೈರಸ್ ಸೋಂಕು ಇದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ ಎಂದು ಟೋಪ್ ಹೇಳಿದ್ದಾರೆ.

click me!