Bribery Case: ಗೇಲ್‌ ನಿರ್ದೇಶಕ ರಂಗನಾಥನ್‌ ಸೇರಿ ಹಲವರ ಬಂಧನ

By Kannadaprabha NewsFirst Published Jan 17, 2022, 3:30 AM IST
Highlights

ಸರ್ಕಾರಿ ಸ್ವಾಮ್ಯದ ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ (ಗೇಲ್‌)ದ ಪೆಟ್ರೋ ಕೆಮಿಕಲ್‌ ಉತ್ಪನ್ನಗಳನ್ನು ಖಾಸಗಿ ಕಂಪನಿಗಳಿಗೆ ರಿಯಾಯಿತಿ ದರದಲ್ಲಿ ನೀಡಿ ಅವುಗಳಿಂದ ಲಂಚ ಸ್ವೀಕರಿಸುತ್ತಿದ್ದ ಪ್ರಕರಣವೊಂದನ್ನು ಸಿಬಿಐ ಬಯಲಿಗೆಳೆದಿದೆ.

ನವದೆಹಲಿ (ಜ. 17): ಸರ್ಕಾರಿ ಸ್ವಾಮ್ಯದ ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾದ (ಗೇಲ್- GAIL) ಪೆಟ್ರೋ ಕೆಮಿಕಲ್‌ ಉತ್ಪನ್ನಗಳನ್ನು ಖಾಸಗಿ ಕಂಪನಿಗಳಿಗೆ ರಿಯಾಯಿತಿ ದರದಲ್ಲಿ ನೀಡಿ ಅವುಗಳಿಂದ ಲಂಚ ಸ್ವೀಕರಿಸುತ್ತಿದ್ದ ಪ್ರಕರಣವೊಂದನ್ನು ಸಿಬಿಐ ಬಯಲಿಗೆಳೆದಿದೆ. ಈ ಸಂಬಂಧ ಗೇಲ್‌ನ ನಿರ್ದೇಶಕ (ಮಾರುಕಟ್ಟೆ) ಇ.ಎಸ್‌.ರಂಗನಾಥನ್‌, ಓರ್ವ ಮಧ್ಯವರ್ತಿ, ಓರ್ವ ಉದ್ಯಮಿ ಮತ್ತು ಇತರೆ ಐವರನ್ನು ಬಂಧಿಸಿದೆ.

ಹಗರಣ ಸಂಬಂಧ ಶನಿವಾರ ಇ.ಎಸ್.ರಂಗನಾಥನ್ (ES Ranganathan) ಮನೆ ಸೇರಿ 8 ಸ್ಥಳಗಳ ಮೇಲೆ ಸಿಬಿಐ (CBI) ದಾಳಿ ನಡೆಸಿದೆ. ಈ ವೇಳೆ ರಂಗನಾಥನ್‌ ಮನೆಯಲ್ಲಿ 1.29 ಕೋಟಿ ರು. ನಗದು ಮತ್ತು 1.25 ಕೋಟಿ ರು.ಮೌಲ್ಯದ ಚಿನ್ನಾಭರಣ ಮತ್ತು ಇತರೆ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ ಎಂದು ಸಿಬಿಐ ಮಾಹಿತಿ ನೀಡಿದೆ.

ಮಧ್ಯವರ್ತಿ ಪವನ್‌ ಗೌರ್‌ ಮೂಲಕ ಉದ್ಯಮಿ ರಾಜೇಶ್‌ ಕುಮಾರ್‌ಗೆ  ಗೇಲ್‌ನ ಪೆಟ್ರೊ ಕೆಮಿಕಲ್‌ ಉತ್ಪನ್ನಗಳನ್ನು ರಂಗನಾಥನ್‌ ಪೂರೈಸಿದ್ದರು. ಇದಕ್ಕಾಗಿ ಉದ್ಯಮಿಯಿಂದ 50 ಲಕ್ಷ ರು.ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಇದೀಗ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಇದಲ್ಲದೆ ಮದ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಕೃಷ್ಣನ್‌ ನಾಯಕ್‌, ಉದ್ಯಮಿಗಳಾದ ಸೌರಭ್‌ ಗುಪ್ತಾ, ಆದಿತ್ಯ ಬನ್ಸಲ್‌ರನ್ನು ಕೂಡಾ ಸಿಬಿಐ ಬಂಧಿಸಿದೆ.

ಬಿಜೆಪಿ ಶಾಸಕ ಬೋಪಯ್ಯಗೆ 1 ಕೋಟಿಗೆ ಬೇಡಿಕೆ ಇಟ್ಟಿದ್ದವನ ಬಂಧನ

ಮುಂಬೈ ಬಿಲ್ಡರ್‌ ಬಳಿ 2 ಕೋಟಿ ಸುಲಿಗೆ ಯತ್ನ: ಬಿಲ್ಡರ್‌ (Builder) ಒಬ್ಬರಿಂದ ಸುಮಾರು 2 ಕೋಟಿ ಸುಲಿಗೆಗೆ ಯತ್ನಿಸಿದ ಬೆಂಗಳೂರು(Bengaluru) ಮೂಲದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಮಹೇಶ್‌ ಸಂಜೀವ್‌ ಪೂಜಾರಿ (35) ಎಂದು ಗುರುತಿಸಲಾಗಿದೆ. 2021ರ ಮೇನಲ್ಲಿ ಪೂಜಾರಿ ಮೊಬೈಲ್‌ ಕಾಲಿಂಗ್‌ ಆ್ಯಪ್‌ (Mobile Calling App) ಮೂಲಕ ವಿದೇಶಿ ಕರೆ ಸೋಗಿನಲ್ಲಿ ಮುಂಬೈ ಮೂಲದ ಬಿಲ್ಡರ್‌ಗೆ ಕರೆ ಮಾಡಿ 2 ಕೋಟಿಗೆ ಬೇಡಿಕೆ ಇಟ್ಟಿದ್ದ. 

ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಪದೇ ಪದೇ ಕರೆಗಳು ಬಂದ ಹಿನ್ನೆಲೆ ಬಿಲ್ಡರ್‌ 2021ರ ಡಿಸೆಂಬರ್‌ನಲ್ಲಿ ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಕೇಸ್‌ ದಾಖಲಿಸಿದ್ದರು. ಸೈಬರ್‌ ಕ್ರೈಂ ಸಹಾಯ ಪಡೆದ ಮುಂಬೈ ಪೊಲೀಸರು, ಕರೆಯು ವಿದೇಶದಿಂದ ಬಂದಿದ್ದಲ್ಲ. ಬೆಂಗಳೂರಿಂದ ಬಂದಿದ್ದು ಎಂದು ಪತ್ತೆ ಮಾಡಿದ್ದರು. ಹೀಗಾಗಿ ಬೆಂಗಳೂರಿಗೆ ಆಗಮಿಸಿ ಬುಧವಾರ ಪೂಜಾರಿಯನ್ನು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ.

ಹಾಸನದಲ್ಲಿ ಮಾಜಿ ಸಚಿವ ಅರೆಸ್ಟ್, ಹಿಂಬಾಲಿಸಿ ಬಂಧಿಸಿದ್ರು!: ಕೆಲಸ ಕೊಡಿಸುವುದಾಗಿ (Fraud) ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ  (Tamilnadu) ಮಾಜಿ ಸಚಿವರನ್ನು ಕರ್ನಾಟಕದ (Karnataka) ಹಾಸನದಲ್ಲಿ (Hassan) ಬಂಧಿಸಲಾಗಿದೆ.  ಎಐಎಡಿಎಂಕೆ ಪಕ್ಷದ ರಾಜೇಂದ್ರ ಬಾಲಾಜಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಹಾಸನ‌ ನಗರದ ಡಿಸಿ ಕಚೇರಿ ಎದುರು ಕಾರಿನಲ್ಲಿ ಹೋಗುತ್ತಿದ್ದಾಗ ಹಿಂಬಾಲಿಸಿ ವಶಕ್ಕೆ ಪಡೆಯಲಾಗಿದೆ.

ಸರ್ಕಾರವಿದ್ದಾಗ ಹಾಲು ಮತ್ತು ಡೈರಿ ಅಭಿವೃದ್ಧಿ ಖಾತೆಯನ್ನು ಹೊಂದಿದ್ದ  ಬಾಲಾಜಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಲವಾರು ವ್ಯಕ್ತಿಗಳಿಂದ ಭಾರಿ ಮೊತ್ತವನ್ನು ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಇದೆ. ಸತ್ತೂರು ನಿವಾಸಿ ಎಸ್. ರವೀಂದ್ರನ್ ನವೆಂಬರ್ 2020 ರ ವೇಳೆ   ಮಾಜಿ ಸಚಿವರ ಸಂಬಂಧಿಗೆ 30 ಲಕ್ಷ ರೂ ನೀಡಿದ್ದು ವಂಚನೆಯಾಗಿದೆ ಎಂದು ಆರೋಪಿಸಿದ್ದರು.

ತಿರುಪತಿ ದೇವಸ್ಥಾನದ ಪುರೋಹಿತರಿಂದ 128Kg ಚಿನ್ನ, ₹60 ಕೋಟಿ ಮೌಲ್ಯದ ವಜ್ರ ವಶ?

ಮಾಜಿ ಸಚಿವರ ಹೆಸರಿನಲ್ಲಿ ಆಗಿನ ಎಐಎಡಿಎಂಕೆ ಕಾರ್ಯಾಧ್ಯಕ್ಷ ವಿಜಯನ್ ನಲ್ಲತಂಬಿ ಮತ್ತು ಪಕ್ಷದ ಕಾರ್ಯಕರ್ತ ಮರಿಯಪ್ಪನ್  ಸಹಾಯಕರಾದ ಬಾಬುರಾಜ್, ಬಲರಾಮನ್ ಮತ್ತು ಮುತ್ತುಪಾಂಡಿ ಅವರ ಮೂಲಕ ಸುಮಾರು 1.60 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎನ್ನುವ ಆರೋಪ ಇದೆ. 

click me!