ಡಾನ್ಸ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಹೊಡೆದ ವರ: ಅದೇ ಮಂಟಪದಲ್ಲೇ ಸೋದರ ಸಂಬಂಧಿಯ ವಿವಾಹವಾದ ವಧು

By Suvarna NewsFirst Published Jan 22, 2022, 1:43 PM IST
Highlights
  • ವಧು ಸೋದರ ಸಂಬಂಧಿಯೊಂದಿಗೆ ಡಾನ್ಸ್ ಮಾಡಿದ್ದಕ್ಕೆ ಸಿಟ್ಟು
  • ವಧುವಿನ ಕೆನ್ನೆಗೆ ಬಾರಿಸಿದ ವರ
  • ಅದೇ ಮಂಟಪದಲ್ಲಿ ಸಂಬಂಧಿಯ ವಿವಾಹವಾದ ವಧು

ಮದುವೆ ಸಂದರ್ಭದಲ್ಲಿ ವಧು ಡಾನ್ಸ್‌ ಮಾಡಿದ್ದಕ್ಕೆ ಕೋಪಗೊಂಡ ವರನೊಬ್ಬ ಅಲ್ಲೇ ಆಕೆಯ ಕೆನ್ನೆಗೆ ಬಾರಿಸಿದ್ದು, ಇದರಿಂದ ಮದುವೆಯೇ ನಿಂತು ಹೋದಂತಹ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. ಅಲ್ಲದೇ ಇದೇ ಮಂಟಪದಲ್ಲಿ ವಧುವನ್ನು ಸಂಬಂಧಿ ಯುವಕನಿಗೆ ವಿವಾಹ ಮಾಡಿ ಕೊಡಲಾಗಿದ್ದು, ಇತ್ತ ವರನ ಕಡೆಯವರು ತಮಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ಕೆಲ ಮಾಧ್ಯಮಗಳ ವರದಿ ಪ್ರಕಾರ, ವರ ಚೆನ್ನೈನ ಕಂಪನಿಯೊಂದರಲ್ಲಿ ಸೀನಿಯರ್‌ ಇಂಜಿನಿಯರ್‌ ಆಗಿದ್ದು ಈ ವಧುವಿನೊಂದಿಗೆ ನವಂಬರ್‌ 6ರಂದು ವಿವಾಹ ನಿಶ್ಚಿತಾರ್ಥವಾಗಿತ್ತು.  ಜನವರಿ 20ರಂದು ಕಡಲೂರಿನ ಪನ್ರತಿಯಲ್ಲಿ ಇವರ ನಡೆಯಬೇಕಾಗಿತ್ತು. ಆ ದಿನ ವಧು ವರ ಇಬ್ಬರು ಜೊತೆಯಾಗಿ ಡಾನ್ಸ್ ಮಾಡುತ್ತಿದ್ದರು. ಈ ವೇಳೆ ವಧುವಿನ ಸೋದರ ಸಂಬಂಧಿ ಕೂಡ ಅಲ್ಲಿಗೆ ಬಂದು ವಧು ಹಾಗೂ ವರನ ಭುಜದ ಮೇಲೆ ಕೈಯಿಟ್ಟು ಡಾನ್ಸ್‌ ಮಾಡಲು ಶುರು ಮಾಡಿದ್ದಾನೆ. ಆದರೆ ವರನಿಗೆ ಆತ ಬಂದಿದ್ದು ಇಷ್ಟವಾಗಿಲ್ಲ ಹಾಗೂ ಸೋದರ ಸಂಬಂಧಿ ಹೋಗಲೆಂದು ಕಾದ ಆತ ನಂತರ ಸಿಟ್ಟಿನಿಂದ  ವಧುವಿನ ಕೆನ್ನೆಗೆ ಬಾರಿಸಿದ್ದಾನೆ.

ಟಿವಿ ಚರ್ಚೆ ವೇಳ ಸಿಗದ ಅವಕಾಶ, ಡ್ಯಾನ್ಸ್ ಮಾಡಿದ ಮಹಿಳೆ

ಇದು ವಧು ಹಾಗೂ ಆಕೆಯ ಕುಟುಂಬಸ್ಥರನ್ನು ಆಕ್ರೋಶಕ್ಕಿಡುಮಾಡಿದೆ. ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ನೆಂಟರು ಸಂಬಂಧಿಕರು ಎಲ್ಲರ ಎದುರು ಆತ ವಧುವಿನ ಮೇಲೆ ಕೈ ಮಾಡಿದ್ದಕ್ಕೆ ಸಿಟ್ಟಿಗೆದ್ದ ವಧುವಿನ ಕುಟುಂಬಸ್ಥರು ಮದುವೆಯನ್ನೇ ಮುರಿದಿದ್ದಾರೆ. ಅಲ್ಲದೇ ತಮ್ಮ ಸಂಬಂಧಿಗಳಲ್ಲೇ ಇದ್ದ ಓರ್ವ ಹುಡುಗನೊಂದಿಗೆ ಅದೇ ಮಂಟಪದಲ್ಲಿ ತಮ್ಮ ಮಗಳ ಮದುವೆಯನ್ನು ಮಾಡಿದ್ದಾರೆ. ಇದರಿಂದ ಅವಮಾನಕ್ಕೊಳಗಾದ ವರ ತಾನು ಮದುವೆಯ ಎಲ್ಲಾ ವ್ಯವಸ್ಥೆಗಾಗಿ ಏಳು ಲಕ್ಷ ರೂ. ಖರ್ಚು ಮಾಡಿದ್ದು, ಅದನ್ನು ವಧುವಿನ ಕಡೆಯವರು ನನಗೆ ಪರಿಹಾರವಾಗಿ ನೀಡಬೇಕು ಎಂದು  ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇತ್ತ ವಧುವಿನ ಕಡೆಯವರು ಕೂಡ ವಧುವಿಗೆ ಆತ ಹೊಡೆದಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. 

ಟೀಚರ್‌ ಬೆಲ್ಲಿ ಡಾನ್ಸ್‌ ವೈರಲ್‌... ಮನೆಗೆ ಕಳುಹಿಸಿದ ಶಾಲೆ : ಡಿವೋರ್ಸ್‌ ನೀಡಿದ ಗಂಡ

ಇತ್ತ ಯುವತಿ ಉದ್ಯಮಿಯೊಬ್ಬರ ಪುತ್ರಿಯಾಗಿದ್ದು, ಬ್ಯೂಟಿಪಾರ್ಲರ್‌ವೊಂದನ್ನು ನಡೆಸುತ್ತಿದ್ದಳು. ಜನವರಿ 19 ರಂದು ವಧು ತನ್ನ ಸಂಬಂಧಿಕರೊಂದಿಗೆ ಡಾನ್ಸ್‌ ಮಾಡುತ್ತಾ ಮದುವೆ ಹಾಲ್‌ಗೆ ಬಂದಿದ್ದಾಳೆ. ಆದರೆ ಡಾನ್ಸ್ ಮಾಡುತ್ತಾ ಬಂದಿದ್ದು ವರನಿಗೆ ಇಷ್ಟವಾಗಿಲ್ಲ. ಹಾಗಾಗಿ ಆತ ಡಾನ್ಸ್‌ ಮಾಡುತ್ತಾ ಏಕೆ ಬಂದೇ ಎಂದು ಅವಳೊಂದಿಗೆ ವಾದ ಮಾಡಲು ಶುರು ಮಾಡಿದ್ದಾನೆ.  ಈ ವೇಳೆ ಸಿಟ್ಟಿಗೆದ್ದ ವರ ಆಕೆಯ ಕೆನ್ನೆಗೆ ಬಾರಿಸಿದ್ದು, ಆಕೆಯೂ ತಿರುಗಿಸಿ ಆತನಿಗೆ ಹೊಡೆದಿದ್ದಾಳೆ ಎಂದು ಕೆಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಇನ್ನು ಮಗಳಿಗೆ ಹೊಡೆದವನನ್ನು ನಾನು ಅಳಿಯ ಎಂದು ಒಪ್ಪಿಕೊಳ್ಳಲಾರೆ ಎಂದ ವಧುವಿನ ತಂದೆ ವರನ ಕಡೆಯವರನ್ನು ಮದುವೆ ಮಂಟಪದಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ಅಲ್ಲದೇ ತನ್ನ ಸಂಬಂಧಿ ಹುಡುಗನೊಂದಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದಾರೆ. ಇತ್ತ ವಧು ಕೂಡ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ. ನಂತರ ಅದೇ ದಿನ ಪನ್ರತಿಯ ತಿರುವತಿಗೈ ದೇಗುಲದಲ್ಲಿ ಅದೇ ದಿನ ಜನವರಿ 20 ರಂದು ಇವರ ವಿವಾಹ ನಡೆದಿದೆ. 

ಇತ್ತೀಚೆಗೆ ಬ್ರೆಜಿಲ್‌ನಲ್ಲಿ ಶಾಲಾ ಶಿಕ್ಷಕಿಯೊಬ್ಬರು ಬೆಲ್ಲಿಡಾನ್ಸ್‌ ಮಾಡಿದ್ದಕ್ಕೆ ಅವರನ್ನು ಶಿಕ್ಷಕಿ ಕೆಲಸದಿಂದ ಉಚ್ಛಾಟಿಸಿ ಮನೆಗೆ ಕಳುಹಿಸಲಾಗಿತ್ತು. ಅವರ ಡಾನ್ಸ್‌ನ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅವರ ಪತಿ ಕೂಡ ಟೀಚರ್‌ಗೆ ವಿಚ್ಛೇದನ ನೀಡಿದಂತಹ ಘಟನೆ ನಡೆದಿತ್ತು.

click me!