ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೇಕ್ ಹಸೀನಾ ಪ್ರಾಣ ಉಳಿಸಿಕೊಳ್ಳಲು ಪರಾರಿಯಾಗಿದ್ದಾರೆ. ಆದರೆ ಈ ಘಟನೆ ಕುರಿತು 2023ರ ಡಿಸೆಂಬರ್ ತಿಂಗಳಲ್ಲಿ ಭಾರತದ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು.
ನವದೆಹಲಿ(ಆ.6) ಭಾರತದ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ 2023ರ ಡಿಸೆಂಬರ್ ತಿಂಗಳಲ್ಲಿ ನುಡಿದ ಭವಿಷ್ಯ ಇದೀಗ ಭಾರಿ ವೈರಲ್ ಆಗುತ್ತಿದೆ. ಹೌದು, ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿ, ಶೇಕ್ ಹಸೀನಾಗೆ ಎದುರಾಗುವ ಸಂಕಷ್ಟಗಳ ಕುರಿತು ಜ್ಯೋತಿಷಿ ಪ್ರಶಾಂತ್ ಕಿಣಿ 8 ತಿಂಗಳ ಮೊದಲೇ ಭವಿಷ್ಯ ನುಡಿದಿದ್ದರು. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಹತ್ಯೆ ಯತ್ನಗಳು ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಪ್ರಶಾಂತ್ ಕಿಣಿ ಮಾಡಿದ ಟ್ವೀಟ್ ಭವಿಷ್ಯ ಭಾರಿ ಸದ್ದು ಮಾಡುತ್ತಿದೆ.
ಜ್ಯೋತಿಷಿ ಪ್ರಶಾಂತ್ ಕಿಣಿ ಡಿಸೆಂಬರ್ 2023ರಲ್ಲಿ ಈ ಕುರಿತು ಮಹತ್ವದ ಟ್ವೀಟ್ ಮಾಡಿದ್ದರು. ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಕುರಿತು ನನ್ನ ಭವಿಷ್ಯ ಎಂದು ಕೆಲ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದರು. ಶೇಕ್ ಹಸೀನಾ 2024ನೇ ವರ್ಷದ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕು. ಈ ತಿಂಗಳಲ್ಲಿ ಶೇಕ್ ಹಸೀನಾ ಮೇಲೆ ಹತ್ಯೆ ಯತ್ನಗಳು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಅತೀವ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು.
ಹಸೀನಾ ಮಾತ್ರವಲ್ಲ ಕಿಡಿಗೇಡಿಗಳು ಬಾಂಗ್ಲಾ ಯಶಸ್ವಿ ನಾಯಕ ಮುಶ್ರಫೆ ಮನೆಯನ್ನೂ ಬಿಡಲಿಲ್ಲ!
ಡಿಸೆಂಬರ್ 14, 2023 ರಂದು ಪ್ರಶಾಂತ್ ಕಿಣಿ ಈ ಭವಿಷ್ಯ ನುಡಿದಿದ್ದರು. ಈ ವೇಳೆ ಬಾಂಗ್ಲಾದೇಶದ ಚುನಾವಣೆ ಕಾವು ಜೋರಾಗಿತ್ತು. ಇದೇ ವೇಳೆ ಪ್ರಶಾಂತ್ ಕಿಣಿ ಎಚ್ಚರಿಕೆ ನೀಡಿದ್ದರು. ಮತ್ತೊಮ್ಮೆ ಶೇಕ್ ಹಸೀನಾ ಆಯ್ಕೆ ಬಹುತೇಕ ಎಂದೇ ಹೇಳಲಾಗುತ್ತಿತ್ತು. ಇದರಂತ ಜನವರಿ 7, 2024ರಲ್ಲಿ ಬಾಂಗ್ಲಾದೇಶ ಚುನಾವಣೆ ನಡೆದಿತ್ತು. ಈ ವೇಳೆ ಶೇಕ್ ಹಸೀನಾ ನೇತತ್ವದ ಅವಾಮಿ ಲೀಗ್ 300 ಸ್ಥಾನಗಳಲ್ಲಿ 224 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೇರಿತ್ತು. ಯಶಸ್ವಿಯಾಗಿ ಪ್ರಧಾನಿಯಾಗಿರುವ ಶೇಕ್ ಹಸೀನಾ ಹತ್ಯೆ ಸಾಧ್ಯತೆ ಕುರಿತು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಪ್ರಶಾಂತ್ ಕಿಣಿ ನುಡಿದ ಭವಿಷ್ಯ ನಿಜವಾಗಿದೆ.
I have Already predicted Sheikh Haseena will be in trouble in August 2024 ,
Is she flee her country !!!! https://t.co/WePWMaOOkP
ಬಾಂಗ್ಲಾದೇಶದಿಂದ ಭಾರತಕ್ಕೆ ಆಗಮಿಸಿರುವ ಶೇಕ್ ಹಸೀನಾ ಇದೀಗ ಸುರಕ್ಷಿತ ಸ್ಥಳಕ್ಕೆ ತೆರಳಲು ಸಜ್ಜಾಗಿದ್ದಾರೆ. ಆದರೆ ಇಂಗ್ಲೆಂಡ್ ಶೇಕ್ ಹಸೀನಾ ಸ್ವೀಕರಿಸಲು ನಿರಾಸಕ್ತಿ ತೋರಿದೆ. ಹೀಗಾಗಿ ಯೂರೋಪ್ ದೇಶಗಳತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಭಾರತದಲ್ಲಿ ಉಳಿಸುವುದು ಸುರಕ್ಷಿತವಲ್ಲದ ಕಾರಣ ಶೇಕ್ ಹಸೀನಾ ಶೀಘ್ರದಲ್ಲೇ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಪತ್ನಿಯನ್ನು ಬಾಂಗ್ಲಾ ಪ್ರಧಾನಿ ಮಾಡುತ್ತೇನೆ, ಶೇಕ್ ಹಸೀನಾ ಸೀರೆ ಸೂಟ್ ಕದ್ದವನ ವೀರಾವೇಶದ ಮಾತು!