ಬ್ಯಾಂಕ್ ವಂಚನೆ ಆರೋಪಿ ಮೆಹುಲ್ ಚೋಕ್ಸಿಗೆ ಡೋಮಿನಿಕಾ ಹೈಕೋರ್ಟ್ ಮಧ್ಯಂತರ ಜಾಮೀನು!

By Suvarna NewsFirst Published Jul 12, 2021, 9:46 PM IST
Highlights
  • PNB ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಗೆ ಕೊನೆಗೂ ಜಾಮೀನು
  • ಡೋಮಿನಿಕಾ ಹೈಕೋರ್ಟ್ ವೈದ್ಯಕೀಯ ಕಾರಣಕ್ಕೆ ಮಧ್ಯಂತರ ಜಾಮೀನು ಮಂಜೂರು
  • ಮೆಹುಲ್ ಚೋಕ್ಸಿಯ ಹಸ್ತಾಂತರ ವಿಚಾರಣೆಗೆ ಸದ್ಯಕ್ಕೆ ತಡೆ 

ನವದೆಹಲಿ(ಜು.12):  PNB ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಭಾರತದಿಂದ ಪಲಾಯನ ಮಾಡಿ ಡೋಮಿನಿಕಾ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿ ಮೆಹುಲ್ ಚೋಕ್ಸಿಗೆ ಕೊನೆಗೂ ಜಾಮೀನು ಸಿಕ್ಕಿದೆ. ವೈದ್ಯಕೀಯ ಕಾರಣಕ್ಕಾಗಿ ಡೋಮಿನಿಕಾ ಹೈಕೋರ್ಟ್ ಮೆಹುಲ್ ಚೋಕ್ಸಿಗೆ ಜಾಮೀನು ಮಂಜೂರು ಮಾಡಿದೆ.

ಮಲ್ಯ, ನೀರವ್, ಚೋಕ್ಸಿಯ ಆಸ್ತಿ ಸೀಜ್, 9,371 ಕೋಟಿ ರೂ ಬ್ಯಾಂಕ್‌ಗೆ ಹಸ್ತಾಂತರ!

ಆ್ಯಂಟಿಗುವಾದಿಂದ ಡೋಮಿನಿಕಾ ತೆರಳುತ್ತಿದ್ದ ವೇಳೆ ಚೋಕ್ಸಿ ಪೊಲೀಸರ ಕೈಗೆ ಸಿಕ್ಕಿಬಿದ್ದದರು. ಇದರ ಬೆನ್ನಲ್ಲೇ ಚೋಕ್ಸಿ ಭಾರತಕ್ಕೆ ಹಸ್ತಾಂತರ ಮಾಡುವ ಕುರಿತು ತ್ವರಿತಗತಿಯಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತಗೊಂಡಿತ್ತು. ಬಂಧನದ ಬಳಿಕ ಡೋಮಿನಿಕಾ ಹೈಕೋರ್ಟ್‌ನಲ್ಲಿ ಚೋಕ್ಸಿಗೆ ಜಾಮೀನು ನಿರಾಕರಿಸಲಾಗಿತ್ತು. ಆದರೆ ಚೋಕ್ಸಿ ಕಾನೂನು ಹೋರಾಟ ಮುಂದುವರಿಸಿದ್ದರು.

ಪ್ರೇಯ​ಸಿಗೂ ನಕಲಿ ವಜ್ರ​ದ ಉಂಗುರ ನೀಡಿದ್ದ ಚೋಕ್ಸಿ!

ಇದೀಗ ವಕೀಲರು ಚೋಕ್ಸಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗಾಗಿ ಚೋಕ್ಸಿಯನ್ನು ಆಂಟಿಗುವಾಕ್ಕೆ ಅಥವಾ ಯುನೈಟೆಡ್ ಸ್ಟೇಟ್ಸ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು. ಈ ಮನವಿ ಸ್ವೀಕರಿಸಿದ ಕೋರ್ಟ್, ಚೋಕ್ಸಿ ಪ್ರಯಾಣಕ್ಕೆ ಯೋಗ್ಯರು ಎಂದು ಪ್ರಮಾಣೀಕರಿಸುವವರೆಗೂ ಮಧ್ಯಂತರ ಜಾಮೀನು ನೀಡಲಾಗುತ್ತದೆ  ಎಂದಿದೆ.

ಭಾರತದಿಂದ ಪಲಾಯನ ಮಾಡಿಲ್ಲ, ಚಿಕಿತ್ಸೆಗಾಗಿ ಬಂದಿದ್ದೇನೆ; ಹೊಸ ವಾದ ಮಂಡಿಸಿದ ಚೋಕ್ಸಿ!

ಭಾರತಕ್ಕೆ ಚೋಕ್ಸಿ ಹಸ್ತಾಂತರ ವಿಚಾರಣೆಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ ಎಂದು ಡೋಮಿನಿಕಾ ಕೋರ್ಟ್ ಹೇಳಿದೆ. ಇದು ಭಾರತಕ್ಕೆ ಕೊಂಚ ನಿರಾಸೆ ತಂದಿದೆ.  ಮೇ 23 ರಂದು ಚೋಕ್ಸಿಯನ್ನು ಡೋಮಿನಿಕಾ ಪೊಲೀಸರು ಬಂಧಿಸಿದ್ದರು. 
 

click me!