
SFI ಅಕ್ರಮ ಬಯಲು
ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರ ಆಡಳಿತ ನಡೆಸುತ್ತಿದೆ. ಇದೇ ಕಮ್ಯೂನಿಸ್ಟ್ ಪಾರ್ಟಿಯ ವಿದ್ಯಾರ್ಥಿ ಘಟಕ ಎಸ್ಎಫ್ಐ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿದೆ. ಇದೇ SFI ಘಟಕ ಜನಪ್ರಿಯ ನಾಯಕ ಅರ್ಶೂ ಅಕ್ರಮ ಎಸಗದಿ ಸಿಕ್ಕಿ ಹಾಕಿಕೊಂಡಿದ್ದಾನೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆತನ ಆಪ್ತೆ ವಿದ್ಯಾ ಎಸಗಿರುವ ಅಕ್ರವೂ ಬಯಲಾಗಿದೆ. ಎರ್ನಾಕುಲಂನ ಮಹಾರಾಜ ಕಾಲೇಜಿನ SFI ನಾಯಕ ಅರ್ಶೂ ಪರೀಕ್ಷೆ ಬರೆಯದೇ ಪದವಿ ಪಡೆದಿದ್ದಾರೆ. ಅಂಕಪಟ್ಟಿಯ ಎಲ್ಲಾ ವಿಷಯದಲ್ಲೂ ಪಾಸ್ ಆಗಿದ್ದಾನೆ. ಈತನ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರ್ಶೂ ಸ್ನೇಹಿತೆ, SFI ನಾಯಕಿ ವಿದ್ಯಾ, ನಕಲಿ ದಾಖಲಿ ಸೃಷ್ಟಿಸಿ ಎರಡು ಕಾಲೇಜಿನಲ್ಲಿ ಅತಿಥಿ ಉಪನ್ಯಾಸರಾಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
SFI ಸಂಘಟನೆಯ ಕೇಂದ್ರ ತಾಣವಾಗಿರುವ ಮಹಾರಾಜ ಕಾಲೇಜು ಎರ್ನಾಕುಲಂನಲ್ಲಿ ಇದೀಗ ಅಕ್ರಮಗಳು ಬಯಲಿಗೆ ಬರುತ್ತಿದೆ. ಇದರ ಬೆನ್ನಲ್ಲೇ ಮಹಾರಾಜ ಕಾಲೇಜಿನ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದಾರೆ. ಅರ್ಶೂ ಕೆಲ ಸುಳ್ಳು ಮಾಹಿತಿಗಳನ್ನು ನೀಡಿ ಅಂಕಪಟ್ಟಿ ಪಡೆದಿದ್ದಾರೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇತ್ತ ವಿದ್ಯಾ ಮೇಲೆ ಪ್ರಕರಣ ದಾಖಲಾಗಿದೆ ಎಂದಿದ್ದಾರೆ. ಆದರೆ ಅರ್ಶೂ ಸುಳ್ಳು ಅಂಕಪಟ್ಟಿ ಪಡೆದಿರುವ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಇದರ ಬೆನ್ನಲ್ಲೇ ಸಿಪಿಎಂ ತೀವ್ರ ಮುಜುಗರ ಅನುಭವಿಸಿದೆ.ಇದೀಗ SFI ಆಡಳಿತ ಹಾಗೂ ಕಾರ್ಯಾಕಾರಣಿ ಸದಸ್ಯರಾಗಲು ಕೆಲ ಮಾನದಂಡಗಳನ್ನು ನಿಗದಿಪಡಿಸಲು ಚರ್ಚಿಸಿದೆ.
From the india gate: ರಾಣಿ ಜೇನು ಭೇಟಿಯಾದ ಡಿಕೆಶಿ, ಕೇರಳದಲ್ಲಿ ಯಥಾ ರಾಜ ತಥಾ ಪ್ರಜಾ!
ಕರ್ನಾಟಕದಲ್ಲಿ ಶಾಂತ, ಕೇರಳ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್‌ನಲ್ಲಿದ್ದ ಬಣಗಳು ಒಂದಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇದೀಗ ಜೋಡೆತ್ತಿನ ರೀತಿಯಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಸಮಸ್ಯೆ ಪರಿಹಾರವಾದರೆ, ಕೇರಳದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಎಕೆ ಆ್ಯಂಟಿನಿ ನಿವೃತ್ತಿ, ಒಮ್ಮನ್ ಚಾಂಡಿ ಅನಾರೋಗ್ಯದಿಂದ ಕೇರಳದಲ್ಲಿ ಆ್ಯಂಟಿನಿ ಬಣದ ಬಲ ಕ್ಷೀಣಿಸಿದೆ.
ಎಕೆ ಆಂಟನಿ ನಿವೃತ್ತಿ ಹಾಗೂ ಉಮ್ಮನ್ ಚಾಂಡಿ ಅನಾರೋಗ್ಯದ ನಂತರ ನಿದ್ರಾವಸ್ಥೆಗೆ ತಲುಪಿದ್ದ ಕೇರಳದ ಆಂಟನಿ ಗುಂಪು ಇದರ ವಿರುದ್ಧ ಎಚ್ಚೆತ್ತುಕೊಂಡಿದೆ. ಚಾಂಡಿಯವರ ಮ್ಯಾನ್ ಫ್ರೈಡೇ ಬೆನ್ನಿ ಬೆಹೆನನ್ ಅವರು ತಮ್ಮ ಪೈ ಅನ್ನು ನೀಡದಿದ್ದರೆ ಎ ಗ್ರೂಪ್ ತನ್ನ ಎಲ್ಲಾ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಬಹಿರಂಗವಾಗಿ ಎಚ್ಚರಿಸಿದ್ದಾರೆ. ಇದೀಗ ಚಾಂಡಿ ಆಪ್ತ ಬೆನ್ನಿ ಬೆಹೆನಾನ್ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿ ಪಕ್ಷನಾಯಕನಾಗಿರುವ ಕಾಂಗ್ರೆಸ್ ಮುಖಂಡ ವಿಡಿ ಸತೀಶ ಅವರ ಸಾಮರ್ಥ್ಯವನ್ನು ಮತ್ತೊರ್ವ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಪ್ರಶ್ನಿಸಿದ್ದಾರೆ. ಇದಕ್ಕೆ ಎಂಎಂ ಹಾಸನ್ ಕೂಡ ಧನಿಗೂಡಿಸಿದ್ದಾರೆ.
ರಾಜಸ್ಥಾನದಲ್ಲಿ ಒಯಸಿಸ್‌ಗಾಗಿ ಕಾಂಗ್ರೆಸ್ ಹುಡುಕಾಟ
ರಾಜಸ್ಥಾನ ಕಾಂಗ್ರೆಸ್ ಬಣ ರಾಜಕೀಯ ತಾರಕಕ್ಕೇರಿದೆ. ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸರ್ಕಾರದ ವಿರುದ್ಧವೇ ಸಮರ ಸಾರಿರುವ ಸಚಿನ್ ಪೈಲೆಟ್ ಬಣ ಹೋರಾಟ ತೀವ್ರಗೊಳಿಸಿದೆ. ಇತ್ತ ಕೇಂದ್ರ ನಾಯಕರು, ಹೈಕಮಾಂಡ್ ಸೇರಿದಂತೆ ಹಲವರು ಭಿನ್ನಮತ ಶಮನಗೊಳಿಸಲು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಇದರ ಬೆನ್ನಲ್ಲೇ ಹೊಸ ಪಾರ್ಟಿ ಸ್ಥಾಪಿಸುವ ಎಚ್ಚರಿಕೆಯನ್ನು ಸಚಿನ್ ಪೈಲೆಟ್ ನೀಡಿದ್ದಾರೆ. ಸರ್ಕಾರದ ವಿರುದ್ದ ಸಂಘರ್ಷ ಯಾತ್ರಾ, ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವು ಆಂದೋಲನಗಳನ್ನು ಪೈಲೆಟ್ ನಡೆಸಿದ್ದಾರೆ. ಇತ್ತ ಹೊಸ ಪಾರ್ಟಿ ಮಾಡದೆ ತಮ್ಮ ಆಪ್ತ ಜ್ಯೋತಿರಾಧಿತ್ಯ ಸಿಂಧಿಯಾ ರೀತಿಯಲ್ಲಿ ಬಿಜೆಪಿ ಸೇರಿಕೊಳ್ಳುತ್ತಾರಾ ಅನ್ನೋ ಅನುಮಾನಗಳು ಕಾಡುತ್ತಿದೆ.
From the India Gate: ಸೈಲೆಂಟ್ ಆದ ಕರ್ನಾಟಕ ಸಿಂಗಂ, ತೆಲಂಗಾಣ ಸಿಎಂ ಕನಸಿನ ಕಾರು ಪಂಕ್ಚರ್!
ಕಾಂಗ್ರೆಸ್ ಕಟ್ಟೆಯಲ್ಲಿ ಈಗ ಫ್ಲೈಟೂ.. ಪೈಲಟ್.. ದ್ದೇ ಚರ್ಚೆ. ಪೈಲಟ್ ಹೊಸ ಫ್ಲೈಟ್ ಹುಡುಕುತ್ತಿದ್ದಾರಂತೆ ಅನ್ನೋದೇ ಮಾತು..ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ವಿಜಯ ಮಾಲೆಗೆ ತಲೆಯೊಡ್ಡಿದೆ. ಪಕ್ಷದ ಉಸಿರು ನಿಂತು ಹೋಗುತ್ತಿದೆ ಎನ್ನುವಾಗ ಕನ್ನಡಿಗರು ಹಸ್ತದ ಕೈ ಹಿಡಿದು ನಿಲ್ಲಿಸಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಗೆ ಆಕ್ಸಿಜನ್ ತುಂಬಿದ್ದು ಈಗ ಇತಿಹಾಸ.
ಇಂಥ ವಿಜಯದ ಕ್ಷಣಗಳಲ್ಲಿ ತೇಲುತ್ತಿದ್ದ ಹಸ್ತಪಾಳಯಕ್ಕೆ ಮತ್ತೆ ಬಿಸಿತುಪ್ಪ ಆಗಿರೋದು ಸಚಿನ್ ಪೈಲಟ್. 40+ ವಯಸ್ಸಿನ ಈ ಪೈಲಟ್ ತಮ್ಮ ವಯಸ್ಸಿಗೆ ಹೆಚ್ಚೇ ಅಧಿಕಾರ ಅನುಭವಿಸಿದ್ದಾರೆ. ಡಿಸಿಎಂ, ಸೆಂಟ್ರಲ್ ಮಿನಿಸ್ಟರ್ ಎಲ್ಲವೂ ಆಗಿ ಬಿಟ್ಟಿದ್ದಾರೆ. ಬಟ್ ಸಿಎಂ ಆಗ್ಲೇಬೇಕು ಅಂಥ ಹಠಕ್ಕೆ ಬಿದ್ದಿದ್ದಾರೆ. ಇಷ್ಟರ ನಡುವೆ ಪೈಲಟ್ ಬಳಗ ಹಾರಿಸ್ತಿರೋ ಹೊಸ ಪಟ ಎಂದರೆ ಹೊಸ ಪಕ್ಷ ಕಟ್ತಿನಿ ಅಂಥ.ಈ ಹೊಸ ಪಕ್ಷದ ಬಾಣ ಇದೀಗ ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಬಿರುಗಾಳಿ ಸುಳಿವು ನೀಡುತ್ತಿದೆ. ಚುನಾವಣಾ ಹೊಸ್ತಿಲಲ್ಲಿ ಪೈಲಟ್ ಹೊಸ ಪಕ್ಷದ ಬಾಣ ಗೆಹ್ಲೋಟ್ ಸಾಹೇಬ್ರು ಸೇರಿ ಎಐಸಿಸಿ ಯನ್ನು ಚಿಂತೆಗೆ ದೂಡಿದೆ. ಜೊತೆ ಜೊತೆಯಲ್ಲೇ ಇದ್ದ ರಾಜಕೀಯ ಸಾಥಿ ಸಿಂದ್ಯಾ ಕಾಂಗ್ರೆಸ್ ಬಿಟ್ರು. ಬಿಜೆಪಿ ಸೇರಿ ಮಂತ್ರಿಯಾದ್ರೆ ಹೊಸ ಪಕ್ಷದ ಕಟ್ಟಿ ಮರುಭೂಮಿ ರಾಜ್ಯಕ್ಕೆ ಸಿಎಂ ಆಗ್ರಿನಿ ಅಂತ್ ಯಂಗ್ ಕಾಂಗ್ರೆಸ್ ಮೆನ್ ಪಗಡೆ ಆಟ ಶುರು ಮಾಡೋ ಸುಳಿವು ನೀಡುತ್ತಿದ್ದಾರೆ. ಪೈಲಟರ ಹೊಸ ಪಕ್ಷದ ಫ್ಲೈಟ್ ಮರುಭೂಮಿ ಮತದಾರರು ಮತ ಕೊಟ್ಟು ಬೋಡಿ೯ಂಗ್ ಮಾಡ್ತಾರಾ ಅಥವಾ ಪೈಲಟ್ ಸಾಹೇಬ್ರ ಹೊಸ ವಿಮಾನ ಗಾಳಿಯಲ್ಲೇ ತೇಲಾಡ್ಲಿ ಅಂತ ಕೈ ಬಿಡ್ತಾರಾ.. ಕಾದು ನೋಡಬೇಕು.
ಎಲ್ಲಾ ಪ್ರಯತ್ನದಲ್ಲಿ ಫೇಲ್, ಬಿಜೆಪಿಯತ್ತ ಮುಖ
ಬಿಜೆಪಿ ವಿರುದ್ಧ ಕೆರಳಿ ಕೆಂಡವಾಗುತ್ತಿದ್ದ ಆಂಧ್ರಪ್ರದೇಶ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಇದೀಗ ಸೈಲೆಂಟ್ ಆಗಿದ್ದಾರೆ. ಇಷ್ಟೇ ಅಲ್ಲ ಒಳಗಿಂದೊಳಗೆ ಬಿಜೆಪಿ ಜೊತೆ ಸೇರಿಕೊಳ್ಳಲು ಕಸರತ್ತು ನಡೆಸಿದ್ದಾರೆ. 2019ರ ಬಳಿಕ ಬಿಜೆಪಿ ಮೈತ್ರಿ ತೊರೆದ ನಾಯ್ಡು, ಬಹುತೇಕ ಎಲ್ಲಾ ಕಡೆ ಬಿಜೆಪಿ ವಿರುದ್ದ ಗುಡುಗಿದ್ದರು. ಇದೀಗ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇತ್ತ ಪವನ್ ಕಲ್ಯಾಣ್ ನೇೃತ್ವದ ಜನಸೇನಾ ಪಕ್ಷದ ಜೊತೆಗೆ ಸ್ಥಳೀಯ ಮೈತ್ರಿಗೂ ಮುಂದಾಗಿದ್ದಾರೆ. ಇತ್ತ ಪವನ್ ಕಲ್ಯಾಣ್ ಈಗಾಗಲೇ ಮೈತ್ರಿಗೆ ಆಸಕ್ತಿ ತೋರಿಸಿದ್ದರು. ಮುಂಬರುವ ಚುನಾವಣೆಯಲ್ಲಿ ಸಾಮರ್ಥ್ಯ ಸಾಬೀತುಪಡಿಸಲು ಬಿಜೆಪಿ ಹೊಸ ಟಾಸ್ಕ್ ನೀಡಿದೆ. ಆದರೆ ಚಂದ್ರಬಾಬು ನಾಯ್ಡುಗೆ ತೆಲಂಗಾಣ ಬಿಜೆಪಿಯಿಂದ ತೀವ್ರ ವಿರೋಧ ಎದುರಾಗುತ್ತಿದೆ. ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್, ಟಿಡಿಪಿ ಜೊತೆಗಿನ ಮೈತ್ರಿಯನ್ನು ಬಲವಾಗಿ ವಿರೋಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ