ಬ್ರೆಡ್​ಗಾಗಿ ಅಂಗಡಿಗೆ ಹೋದಾಕೆ ವಾಪಸಾದಾಗ ಅದೇ ಕಂಪೆನಿಗೆ ಬ್ರ್ಯಾಂಡ್​ ಅಂಬಾಸಿಡರ್​! ಬಾಲೆಯ ರೋಚಕ ಕಥೆ ಕೇಳಿ

By Suchethana D  |  First Published Sep 25, 2024, 4:42 PM IST

ಒಂದೇ ಒಂದು ಫೋಟೋ ಬಡ ಕುಟುಂಬದ ಬದುಕನ್ನೇ ಬದಲಿಸಿದೆ. ಬ್ರೆಡ್​ ತರಲು ಅಂಗಡಿಗೆ ಹೋದ ಬಾಲಕಿಯ ರೋಚಕ ಕಥೆ ಇಲ್ಲಿದೆ!  
 


ಒಂದು ಫೋಟೋ ಸಾವಿರ ಶಬ್ದಗಳಿಗೆ ಸಮ ಎನ್ನುವ ಮಾತಿದೆ. ಅದರಂತೆಯೇ ಒಂದೇ ಒಂದು ಫೋಟೋ ಅಥವಾ ಈಗಿನ ಕಾಲದಲ್ಲಿ ವಿಡಿಯೋ ಒಬ್ಬರ ಬಾಳನ್ನೇ ಬದಲಿಸಬಲ್ಲದು. ಅದು ಒಳ್ಳೆಯದ್ದೇ ಆಗಿರಬಹುದು, ಕೆಟ್ಟದ್ದೇ ಆಗಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಶೇರ್​ ಆಗುವ ಒಂದೇ ಒಂದು ವಿಡಿಯೋಗಳಿಂದ ಹಲವಾರು ಮಂದಿ ಒಳ್ಳೊಳ್ಳೆ ಆಫರ್​ ಪಡೆದುಕೊಂಡಿದ್ದಿದೆ. ಬಾಲಿವುಡ್​ನಲ್ಲಿ ಗಾಯಕಿಯಾಗಿ ಮಿಂಚಿದ್ದ ರಾಣು ಮಂಡಲ್​ ಇದಕ್ಕೆ ಸಾಕ್ಷಿ. ಇವರೊಬ್ಬರೇ ಅಲ್ಲದೇ ಇನ್ನೂ ಕೆಲವು ಇಂಥ ಉದಾಹರಣೆಗಳು ಇವೆ. ಇದು ವಿಡಿಯೋ ಮಾತಾದರೆ, ಒಂದೇ ಒಂದು ಫೋಟೋ ಬಾಲಕಿಯ ಇಡೀ ಜೀವನವನ್ನೇ ಬದಲಿಸಬಲ್ಲುದು ಎಂದರೆ ನಂಬುವಿರಾ? 

ಈ ಚಿತ್ರದಲ್ಲಿರುವ ಪುಟಾಣಿಯ ನಗುವನ್ನು ಒಮ್ಮೆ ಗಮನಿಸಿ. ಎಂಥವರ ಮೊಗದಲ್ಲಿಯೂ ಒಮ್ಮೆ ನಗು ಮೂಡಿಸುವ ಮುಗ್ಧ ನಗು ಈ ಬಾಲಕಿಯದ್ದು, ನಿಷ್ಕಲ್ಮಷವಾಗಿರುವ ಈ ಮುದ್ದು ಮೊಗದ, ಮುಗ್ಧ ನಗುವಿಗೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಈಕೆ ದಕ್ಷಿಣ ಆಫ್ರಿಕಾದವಳು. ನಾಲ್ಕು ವರ್ಷದ ಬಾಲಕಿ ಈಕೆ. ಅಪ್ಪ ಇಲ್ಲ. ಅಮ್ಮನೇ ಎಲ್ಲಾ. ಒಂಟಿ ಪೋಷಕಿಯಾಗಿ ಅಮ್ಮ ಈ ಮಗಳನ್ನು ಸಲಹುತ್ತಿದ್ದಾಳೆ. ಆದರೆ, ಇವಳು ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಾಳೆ. ಇವಳ ಫೋಟೋ ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈಕೆಯ ನಗುವನ್ನು ಕಂಡವರು ಒಮ್ಮೆ ಏನು ವಿಷಯ ಎಂದು ತಿಳಿದುಕೊಳ್ಳದೇ ಹೋಗಲಾರರು. ಕೈಯಲ್ಲಿ ಬ್ರೆಡ್​ ಪ್ಯಾಕೆಟ್​ ಹಿಡಿದ ಪುಟಾಣಿಯೀಗ ಆಲ್ಬನಿ ಹೆಸರಿನ ಅದೇ ಬ್ರೆಡ್​ ಕಂಪೆನಿಗೆ ಬ್ರಾಂಡ್​ ಅಂಬಾಸಿಡರ್​ ಅಂದರೆ ರಾಯಭಾರಿಯಾಗಿದ್ದಾಳೆ ಎನ್ನಲಾಗಿದೆ!

Latest Videos

undefined

ಸ್ನಾನದ ವೀಡಿಯೋ ಪೋಸ್ಟ್ ಮಾಡಿದ ಸೀತಾರಾಮ ಸೀತಾಗೆ ಈಗ ಮನೆಯಲ್ಲಿರೋ ಇರುವೆ ಚಿಂತೆ!

ಬ್ರೆಡ್​ ತರಲು ಮಗಳನ್ನು ಅಮ್ಮ ಅಂಗಡಿಗೆ ಕಳಿಸಿದ್ದಳು ಅಷ್ಟೇ. ವಾಪಸಾಗುವ ಹೊತ್ತಿಗೆ ಈಕೆ ಫೋಟೋಗ್ರಾಫರ್​ ಒಬ್ಬರ ಕಣ್ಣಿಗೆ ಬಿದ್ದಿದ್ದಾಳೆ. ಕೈಯಲ್ಲಿ ಬ್ರೆಡ್​, ಮೊಗದಲ್ಲಿ ಮುಗ್ಧ ನಗು, ಆ ಮಗುವಿನ ನಗುವಿಗೆ ಮನಸೋತ ಛಾಯಾಚಿತ್ರಕಾರ ಮಗುವಿನ ಫೋಟೋ ಕ್ಲಿಕ್​ ಮಾಡಿದ್ದಾನೆ. ಅದನ್ನು ತನ್ನ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾನೆ. ಅಷ್ಟೇ. ಈ ಫೋಟೋ ಅದ್ಯಾವ ಪರಿಯಲ್ಲಿ ವೈರಲ್​ ಆಯಿತು ಎಂದರೆ, ಇದನ್ನು ನೋಡಿದ ಜನರು ಆ ಬ್ರೆಡ್​ ಕಂಪೆನಿಗೆ ಪತ್ರ ಬರೆದು ಈಕೆಯನ್ನು ನಿಮ್ಮ ಕಂಪೆನಿಗೆ ರಾಯಭಾರಿ ಮಾಡಿ ಎಂದು ಕೇಳಿಕೊಂಡರಂತೆ. ಜನರ ಒತ್ತಾಸೆ ಹಾಗೂ ಮಗುವಿನ ಮುಗ್ಧತೆಗೆ ಮನಸೋತ ಕಂಪೆನಿ ಆಕೆಯನ್ನು ಬ್ರಾಂಡ್​ ಅಂಬಾಸಿಡರ್​ ಮಾಡಿ ನೇಮಕ ಮಾಡಿದೆ ಎನ್ನಲಾಗಿದೆ.

ಅಷ್ಟೇ ಅಲ್ಲ,  ಈ ಬಾಲಕಿಯ  ಫೋಟೋ ಈಗ ದಕ್ಷಿಣ ಆಫ್ರಿಕಾದಾದ್ಯಂತ ಬ್ರೆಡ್ ಜಾಹೀರಾತು  ಫಲಕಗಳಲ್ಲಿದೆ. ಸೂರನ್ನೇ ಕಾಣದ ಈ ಕುಟುಂಬಕ್ಕೆ ಇದೇ ಬ್ರೆಡ್​ ಕಂಪೆನಿ  ಎರಡು ಕೋಣೆಗಳ ಮನೆ ಕಟ್ಟಿಸಿಕೊಟ್ಟಿದೆ.  ಪದವಿಯವರೆಗಿನ ಹುಡುಗಿಯ ಶಿಕ್ಷಣದ ವೆಚ್ಚವನ್ನು ತಾನೇ ಭರಿಸಲಿರುವುದಾಗಿ ಕಂಪೆನಿ ಹೇಳಿದೆ. ಹೀಗೆ ಆಗತ್ತೆ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ ಅಲ್ವಾ? ಅಂದಹಾಗೆ ಈ ಫೋಟೋ ಕ್ಲಿಕ್​ ಮಾಡಿದ್ದು,  ಶ್ವಾನೆ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಉದಯೋನ್ಮುಖ ವಾಣಿಜ್ಯ ಫೋಟೋಗ್ರಾಫರ್​  ಲುಂಗಿಸಾನಿ ಮ್ಜಾಜಿ.  (ಮೇಲಿರುವ ಫೋಟೋದಲ್ಲಿ ಇರುವ ಚಿತ್ರ)

ಗಂಡಂದಿರನ್ನು ಹೀಗಾ ಮೂದಲಿಸೋದು ಫ್ಲಿಪ್‌ಕಾರ್ಟ್? ಹಕ್ಕಿಗಾಗಿ ಪುರುಷರಿಂದ ಪ್ರತಿಭಟನೆ!

 
 
 
 
 
 
 
 
 
 
 
 
 
 
 

A post shared by Abraham Jacob (@cookurry)

click me!