ವಿದೇಶದಲ್ಲಿ ಕೆಲಸ ಬಿಟ್ಟು ಊರು ಸೇರಿದರು; ಈಗ ಕೋಟಿ ಕೋಟಿ ಸಂಪಾದನೆ, ಆಪ್ತಮಿತ್ರರ ಬದುಕು ಬದಲಿಸಿತು 'ಬಿಸಾಡುವ ಬಾಳೆ ದಿಂಡು'

Published : Nov 09, 2026, 02:11 PM IST
3 Bihar friends turn banana waste into everyday products, build Rs 2.5 crore business

ಸಾರಾಂಶ

ಆಪ್ತ ಮಿತ್ರರು ಸೇರಿ ಕೋಟಿ ಕೋಟಿ ಹಣ ಗಳಿಸೋದನ್ನು ಕಲಿತ ಸ್ಟೋರಿ ಇದು. ನೂರಾರು ಯುವಕರ ಕನಸಿಗೆ ಸ್ಫೂರ್ತಿಯಾಗಿ ನಿಲ್ಲಬಲ್ಲ ಕತೆ ಇದೆ. ನೀವೇನಾದರೂ ಸ್ವಂತ ಉದ್ಯೋಗದ ಕನಸು ಕಾಣುತ್ತಿದ್ದರೆ ಮಿಸ್ ಮಾಡದೇ ಈ ಸ್ಟೋರಿ ಓದಿ..

ಕಸದಿಂದ ರಸ ಅಂತಾರಲ್ಲ, ಹಾಗೆ. ಈ ಸ್ಟೋರಿ ಕೂಡ ಅದಕ್ಕೆ ಸಂಬಂಧಿಸಿದ್ದಾಗಿದೆ. ಬಾಳೆ ಮರ ಹಣ್ಣು ನೀಡಿದ ಮೇಲೆ ಅದನ್ನು ರೈತ ಕಟ್ ಮಾಡಿ, ಹೊಲದಲ್ಲೇ ಬೀಸಾಡುತ್ತಾನೆ. ಈಗ ಅದೇ ಬಾಳೆ ದಿಂಡಿನಿಂದ ಮೂವರು ಸ್ನೇಹಿತರು ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಕಸವೆಂದು ಹೊಲದಲ್ಲಿ ಬಿಸಾಡಿದ್ದ ದಿಂಡಿನಿಂದ ಕೋಟ್ಯಾಂತರ ರೂಪಾಯಿ ಆದಾಯಗೊಳಿಸಿದ್ದು ಹೇಗೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಗೆಳೆಯರ ಸ್ಫೂರ್ತಿದಾಯಕ ಸ್ಟೋರಿ

ಬಿಹಾರದ ಜಗತ್ ಕಲ್ಯಾಣ್, ನಿತೀಶ್ ಕುಮಾರ್ ವರ್ಮಾ ಮತ್ತು ಸತ್ಯಂ ಕುಮಾರ್ ಮೂವರು ಸ್ನೇಹಿತರು. ಒಟ್ಟಿಗೆ ಎಂಬಿಎ ಓದಿದರು. ಓದುವಾಗ ಗಳಸ್ಯ ಕಂಠಸ್ಯ ಸ್ನೇಹ. ಓದು ಮುಗಿಯುತ್ತಿದ್ದಂತೆಯೇ ವಿದೇಶಗಳಿಂದ ಕೆಲಸ ಹುಡುಕಿಬಂತು. ವಿದೇಶಗಳಿಂದಲೂ ಕೆಲಸ ಹುಡುಕಿಕೊಂಡು ಬಂದಿತ್ತು. ಆದರೆ ಕೊರೊನಾ ಸಂದರ್ಭದಲ್ಲಿ ಅವರ ಆಲೋಚನೆಯೇ ಬದಲಾಯಿತು. ನಾವು ಕಷ್ಟಪಟ್ಟು ಕೆಲಸ ಮಾಡುವುದಾದರೆ ಬೇರೆಯವರಿಗಾಗಿ ಏಕೆ ಮಾಡಬೇಕು? ನಮ್ಮ ನೆಲದಲ್ಲೇ ಏನಾದರೂ ಹೊಸತು ಸೃಷ್ಟಿಸಿ, ಇಲ್ಲಿನ ಜನರಿಗೆ ಉದ್ಯೋಗ ನೀಡೋಣ ಎಂಬ ದೃಢ ಸಂಕಲ್ಪ ಮಾಡಿದರು.

ತರುವರ್ ಆಗ್ರೋ ಆರಂಭ

ಅಂದುಕೊಂಡಂತೆಯೇ 2021ರಲ್ಲಿ Taruwar Agro ಎಂಬ ಸ್ಟಾರ್ಟ್‌ಅಪ್ ಆರಂಭಿಸಿದರು. ಬಾಳೆ ಕಟಾವಿನ ರೈತರಿಗೆ ಬೇಡವಾಗಿದ್ದ ದಿಂಡುಗಳನ್ನ ಖರೀದಿಸಲು ಪ್ರಾರಂಭಿಸಿದರು. ಯಂತ್ರಗಳ ಸಹಾಯದಿಂದ ಆ ದಿಂಡುಗಳಿಂದ ನಾರನ್ನು ಹೊರತೆಗೆದು ಯೋಗ ಮ್ಯಾಟ್‌ಗಳು, ಕಚೇರಿಯ ಫೈಲ್ ಫೋಲ್ಡರ್‌ಗಳು, ಸುಂದರವಾದ ಬುಟ್ಟಿಗಳು ಮತ್ತು ಪ್ರಾರ್ಥನಾ ಮ್ಯಾಟ್‌ಗಳನ್ನು ತಯಾರಿಸಲು ಶುರು ಮಾಡಿಯೇ ಬಿಟ್ಟರು. ಕೇವಲ ನಾರು ತಯಾರಿಸುವುದು ಮಾತ್ರವಲ್ಲದೇ.. ನಾರು ತೆಗೆದ ನಂತರ ಉಳಿಯುವ ತಿರುಳಿನಿಂದ ಉತ್ಕೃಷ್ಟ ದರ್ಜೆಯ ಎರೆಹುಳು ಗೊಬ್ಬರ ಮತ್ತು ಗಿಡಗಳಿಗೆ ಪೋಷಕಾಂಶ ನೀಡುವ ದ್ರವ ಗೊಬ್ಬರ ತಯಾರಿಸಿ ಮಾರಾಟ ಮಾಡಿದರು.

20 ಲಕ್ಷ ಹೂಡಿಕೆ, 2.5 ಕೋಟಿ ವಹಿವಾಟು

ಆರಂಭದಲ್ಲಿ ಸುಮಾರು 20 ಲಕ್ಷ ರೂಪಾಯಿ ಬಂಡವಾಳ ಹೂಡಿದ ಇವರು, ನಂತರ ಯಾವುದೇ ಹೂಡಿಕೆ ಮಾಡಲಿಲ್ಲ. ಯಾಕೆಂದರೆ ಪರಿಶ್ರಮಕ್ಕೆ ತಕ್ಕಂತೆ ಪ್ರಿಫಲ ಸಿಕ್ಕಿತು. FY26 ರಲ್ಲಿ ಕಂಪನಿಯ ವಹಿವಾಟು ₹2.5 ಕೋಟಿ ದಾಟಿತು. ಕೇವಲ ಲಾಭವಷ್ಟೇ ಅಲ್ಲದೆ.. ಸಾಮಾಜಿಕ ಕಳಕಳಿಯನ್ನೂ ಮೆರೆದಿರುವ ಈ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ಶೇಕಡಾ 60ರಷ್ಟು ಗ್ರಾಮೀಣ ಮಹಿಳೆಯರಿದ್ದಾರೆ. ಜೊತೆಗೆ ಕಸವೆಂದು ಬೀಸಾಡುತ್ತಿದ್ದ ದಿಂಡಿನಿಂದ ಎರೆಹುಳು ಗೊಬ್ಬರ ತಯಾರಿಸಿ ಹೆಚ್ಚುವರಿ ಆದಾಯಗಳಿಸುತ್ತಿದ್ದಾರೆ.

ಭಾರೀ ಬೇಡಿಕೆ

ಅಮೆಜಾನ್, ಫ್ಲಿಪ್‌ಕಾರ್ಟ್, ಮೀಶೋ ಹಾಗೂ ತಮ್ಮ ಸ್ವಂತ ವೆಬ್‌ಸೈಟ್ ಮೂಲಕ ಇವರ ಪರಿಸರಸ್ನೇಹಿ ಉತ್ಪನ್ನಗಳು ದೇಶಾದ್ಯಂತ ಮಾರಾಟ ಮಾಡಲಾಗುತ್ತಿದೆ. ಫ್ರಾನ್ಸ್ ಮತ್ತು ಫಿಲಿಪೈನ್ಸ್‌ನಂತಹ ವಿದೇಶಗಳಿಗೂ ಇವರು ಉತ್ಪನ್ನಗಳ ಸ್ಯಾಂಪಲ್ ಕಳುಹಿಸಿದ್ದಾರೆ. ಆ ಮೂಲಕ ಜಾಗತಿಕ ಮಾರುಕಟ್ಟೆಯನ್ನ ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಸ್ವಂತ ಉದ್ಯೋಗ ಮಾಡಬೇಕು, ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಕಂಡು ತಿರುಗಾಡುವ, ಕಷ್ಟಪಡುವ ಶ್ರಮಿಕ ಯುವಕರಿಗೆ ಈ ಆಪ್ತರ ಮಿತ್ರರ ಕತೆ ಸ್ಫೂರ್ತಿದಾಯಕವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಅಂಗಡಿಗೆ ಹೊತ್ತಿಕೊಂಡ ಬೆಂಕಿ, ಕಾಂಗ್ರೆಸ್ ಕೌನ್ಸಿಲರ್ ಹಾಗೂ ಪತಿ ಸಾವು
'16 ವರ್ಷ ಓದಿದ್ರೂ ಇಷ್ಟು ಚಂದ ಮಾತಾಡೋಕೆ ಬರಲ್ಲ': ಆಟೋ ಡ್ರೈವರ್ ಯಾದವ್ ಚಾಚಾ ಇಂಗ್ಲಿಷ್ ಜ್ಞಾನಕ್ಕೆ ಸೋಶಿಯಲ್ ಮೀಡಿಯಾ ಫಿದಾ