ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ: ಈಜುಕೊಳದಲ್ಲಿ ಮುಳುಗಿ ಯುವಕ ಸಾವು

Published : Mar 31, 2026, 06:30 PM IST
Young man dies after drowning in swimming pool

ಸಾರಾಂಶ

ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಘಾತಕಾರಿ ಸಂಗತಿ ಎಂದರೆ, ಸ್ನೇಹಿತರು ಜೊತೆಯಲ್ಲಿದ್ದರೂ ಆತ ಮುಳುಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ, ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.

ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಯುವಕ ಸಾವು

ಇದು ಬೇಸಿಗೆ ಸಮಯ ಮಕ್ಕಳಿಗೆ ರಜಾ ಸಮಯ ಬೇಸಿಗೆಯ ಈ ರಜಾ ಸಮಯದಲ್ಲೇ ಮಕ್ಕಳು ದಣಿವಾರಿಸಿಕೊಳ್ಳಲು, ಬೇಸಿಗೆಯ ಬಿಸಲು ಧಗೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನೀರಿನ ಮೂಲಗಳಲ್ಲಿ ಈಜಾಡ್ತಾರೆ. ಆದರೆ ಹೀಗೆ ಈಜಾಡಲು ಹೋಗಿ ಮಕ್ಕಳು ಮೃತಪಟ್ಟ ಹಲವು ಪ್ರಕರಣಗಳು ಕೆಲ ದಿನಗಳಿಂದ ನಿರಂತರ ವರದಿಯಾಗ್ತಿದೆ. ಅದೇ ರೀತಿ ಇಲ್ಲೊಂದು ಕಡೆ ಬೇಸಿಗೆಯ ಉರಿಯಿಂದ ಪಾರಾಗಲು ಸಮೀಪದ ಸ್ವಿಮ್ಮಿಂಗ್ ಪೂಲ್‌ಗೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ವಿಚಿತ್ರ ಎಂದರೆ ಈ ವೇಳೆ ಈತನ ಸ್ನೇಹಿತರು ಕೂಡ ಜೊತೆಯಲ್ಲೇ ಇದ್ದು, ಯಾರಿಗೂ ಕೂಡ ಆತ ನೀರಿನಲ್ಲಿ ಮುಳುಗಿ ಮೇಲೆ ಬರುವುದಕ್ಕೆ ಕಷ್ಟಪಡುತ್ತಿರುವುದು ಗಮನಕ್ಕೆ ಬಂದಿಲ್ಲ, ಈ ಆಘಾತಕಾರಿ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಗೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಬಿಹಾರದ ನಳಂದಾ ದೇಗುಲದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಭಾರಿ ಕಾಲ್ತುಳಿತ: 9 ಜನರು ಸಾವು

ಗುಜರಾತ್‌ನ ಸೂರತ್‌ನಲ್ಲಿ ಈ ಘಟನೆ ನಡೆದಿದೆ. ಮಾರ್ಚ್‌ 23ರಂದ ಘಟನೆ ನಡೆದಿದ್ದು, ಸುತ್ತಲೂ ಅಷ್ಟೊಂದು ಜನರಿದ್ದರೂ ಆತ ಮೇಲೇಳುವುದಕ್ಕೆ ಕಷ್ಟಪಡುತ್ತಿರುವುದನ್ನು ಯಾರೂ ಗಮನಿಸದೇ ತಮ್ಮದೇ ಆಟಗಳಲ್ಲಿ ತೊಡಗಿರುವುದರಿಂದಾಗಿ ಈ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ. ಸ್ನೇಹಿತರಿಗೆ ಆತ ಮುಳಗಿದ್ದಾನೆ ಎಂಬ ವಿಚಾರ ತಿಳಿದು ಆತನನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ. ಸೂರತ್‌ನ ರೆಸಾರ್ಟ್‌ವೊಂದರ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈ ಘಟನೆ ನಡೆದಿದೆ. ಮುಂದೇನಾಗಲಿದೆ ಎಂಬ ಬಗ್ಗೆ ಅರಿವಿಲ್ಲದೇ ಯುವಕ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ್ದಾನೆ. ಆದರೆ ನೀರಿಗೆ ಬಿದ್ದ ಕೆಲ ಸೆಕೆಂಡ್‌ಗಳಲ್ಲಿ ಆತ ಮೇಲೇಳುವುದಕ್ಕೆ ಪರದಾಡಿದ್ದಾನೆ. ಆದರೆ ಆತನ ಈ ಕಷ್ಟ ಯಾರ ಗಮನಕ್ಕೂ ಬಂದಿಲ್ಲ, ಎಲ್ಲರೂ ತಮ್ಮ ಲೋಕದಲ್ಲಿ ಎಂಜಾಯ್ ಮಾಡೋದ್ರಲ್ಲಿ ಮಗ್ನರಾಗಿದ್ದಾರೆ. ಮೃತನನ್ನು ಪುರುಷೋತ್ತಮ್ ಚೌಧರಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹಿಮಾಚಲದ ಗಾಳಿಯನ್ನು ಬಾಟಲ್‌ನಲ್ಲಿ ತುಂಬಿಸಿ ತಂದು ದೆಹಲಿಯಲ್ಲಿ ಮಾರಾಟ ಮಾಡಿದ ಯುವಕ: ವೀಡಿಯೋ ಭಾರಿ ವೈರಲ್

ಪುರುಷೋತ್ತಮ್ ಚೌಧರಿ ಸ್ನೇಹಿತರ ಜೊತೆಗೆ ಸೂರತ್‌ನ ರೆಸಾರ್ಟ್‌ಗೆ ಆಗಮಿಸಿದ್ದರು. ಆತ ಮುಳುಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಸ್ನೇಹಿತರು ಆತನ ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಸಮಯ ಕೈ ಮೀರಿದ್ದು, ಆಸ್ಪತ್ರೆಗೆ ಕರೆತರುತ್ತಲೇ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓಲ್ಪಾಡ್ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಧಿಕಾರಿಗಳು ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ರೆಸಾರ್ಟ್‌ನಲ್ಲಿ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್‌ ಸಿಲಿಂಡರ್ ಬೇಡವೇ ಬೇಡ! ವೇಸ್ಟ್ ಎಂಜಿನ್ ಆಯಿಲ್‌ನಲ್ಲೇ ಜಿಲೇಬಿ ಸುಡುವ 'ಮ್ಯಾಜಿಕ್ ಸ್ಟೌವ್' ಕಂಡುಹಿಡಿದ ವ್ಯಾಪಾರಿ
ಬಿಹಾರದ ನಳಂದಾ ದೇಗುಲದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಭಾರಿ ಕಾಲ್ತುಳಿತ: 9 ಜನರು ಸಾವು