ಏಕಾಏಕಿ ಕೆಲಸ ಬಿಟ್ಟು 15 ದಿನ ಮಾಯವಾದ ಗೆಳೆಯ, ಗೂಗಲ್‌ನಿಂದ ಬಂತು ಅಚ್ಚರಿಯ ಸುದ್ದಿ!

Published : Apr 14, 2026, 07:05 PM IST
viral video

ಸಾರಾಂಶ

ಕೆಲಸ ಬಿಟ್ಟು ಇದ್ದಕ್ಕಿದ್ದಂತೆ ಮಾಯವಾದ ಸ್ನೇಹಿತನೊಬ್ಬ, 15 ದಿನಗಳ ನಂತರ ಗೂಗಲ್ ಆಫೀಸ್ ಮುಂದೆ ನಿಂತ ಫೋಟೋ ಕಳುಹಿಸಿ ಸರ್‌ಪ್ರೈಸ್ ನೀಡಿದ್ದಾನೆ. ಗೂಗಲ್‌ನಲ್ಲಿ ಕೆಲಸ ಪಡೆದ ತನ್ನ ಗೆಳೆಯನ ಯಶಸ್ಸನ್ನು ಸ್ನೇಹಿತರು ಸಂಭ್ರಮಿಸಿದ್ದು, ಈ ಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿಮ್ಮ ಫ್ರೆಂಡ್ ಒಬ್ಬ ಇದ್ದಕ್ಕಿದ್ದಂತೆ ಕೆಲಸ ಬಿಟ್ಟು, ಯಾರಿಗೂ ಏನೂ ಹೇಳದೆ ಮಾಯವಾದರೆ ಹೇಗಿರುತ್ತೆ? ಎಲ್ಲಿ ಹೋದ, ಏನಾದ ಅಂತ ತಿಳಿಯದೆ ಬೇಜಾರಾಗುತ್ತೆ ಅಲ್ವಾ? ಈಗ ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೇ ಒಂದು ಸ್ಟೋರಿ ವೈರಲ್ ಆಗಿದೆ. 

ಇಲ್ಲಿ ಮಾಯವಾದ ಫ್ರೆಂಡ್, ದೊಡ್ಡ ಸರ್‌ಪ್ರೈಸ್‌ನೊಂದಿಗೆ ವಾಪಸ್ ಬಂದಿದ್ದಾನೆ. ಅನಿಕೇತ್ ತಾಂಬೆ ಅನ್ನೋರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಗೆಳೆಯನಿಗೆ ಗೂಗಲ್‌ನಲ್ಲಿ ಕೆಲಸ ಸಿಕ್ಕಿದ್ದನ್ನು ಈ ಯುವಕರು ಸಖತ್ ಖುಷಿಯಿಂದ ವಿಡಿಯೋದಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಫೋನ್ ರಿಸೀವ್ ಮಾಡಿಲ್ಲ, ಮೆಸೇಜ್ ಕೂಡ ಮಾಡಲಿಲ್ಲ

ವಿಡಿಯೋದಲ್ಲಿರೋ ಪ್ರಕಾರ, ಇವರ ಆಪ್ತ ಗೆಳೆಯ ಇದ್ದಕ್ಕಿದ್ದಂತೆ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದ. ಆಮೇಲೆ ಸುಮಾರು 10-15 ದಿನಗಳ ಕಾಲ ಆತನ ಬಗ್ಗೆ ಯಾವುದೇ ಸುಳಿವೇ ಇರಲಿಲ್ಲ. ಫೋನ್ ಮಾಡಿದ್ರೂ ಎತ್ತುತ್ತಿರಲಿಲ್ಲ, ಮೆಸೇಜ್‌ಗೂ ರಿಪ್ಲೈ ಇರಲಿಲ್ಲ. ಇದರಿಂದ ಗೆಳೆಯರೆಲ್ಲಾ ಗಾಬರಿಯಾಗಿದ್ದರು. 'ನಮ್ಮ ಫ್ರೆಂಡ್ ಒಬ್ಬ ಇದ್ದ... ಅವನು ಕೆಲಸ ಬಿಟ್ಟು ನಮ್ಮನ್ನೆಲ್ಲಾ ಗೋಸ್ಟ್ ಮಾಡಿದ (ಯಾವುದೇ ಸಂಪರ್ಕಕ್ಕೆ ಸಿಗದೆ ಮಾಯವಾದ)' ಅಂತ ವಿಡಿಯೋದಲ್ಲಿ ಒಬ್ಬ ಹೇಳೋದನ್ನು ಕೇಳಬಹುದು. 

ಗೂಗಲ್ ಆಫೀಸ್‌ ಮುಂದೆ ನಿಂತಿರೋ ಫೊಟೋ

ಆದ್ರೆ, ಕೆಲವು ದಿನಗಳ ನಂತರ ಒಂದು ಬೆಳಗ್ಗೆ ನೋಡಿದ್ರೆ, ಈ ಫ್ರೆಂಡ್ ಎಲ್ಲರಿಗೂ ಒಂದು ಮೆಸೇಜ್ ಕಳಿಸಿದ್ದ. ಗೂಗಲ್ ಆಫೀಸ್ ಮುಂದೆ ನಿಂತಿರೋ ತನ್ನ ಫೋಟೋವನ್ನು ಆತ ಕಳಿಸಿದ್ದ. ಅದರ ಜೊತೆಗೆ 'ಗೂಗಲ್‌ನಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಅಪ್ರೆಂಟಿಸ್‌ಶಿಪ್' ಅಂತ ಬರೆದಿದ್ದನು. ಇದನ್ನು ನೋಡಿದ ಗೆಳೆಯರು ಭಾರೀ ಖುಷಿಯಾಗಿದ್ದರು.

 

 

ಗೆಳೆಯನ ಸಾಧನೆ ಸಂಭ್ರಮಿಸಿದ ಸ್ನೇಹಿತರು

'ಅವನು ನಮಗೆ ನಿಜವಾಗ್ಲೂ ಶಾಕ್ ಕೊಟ್ಟ' ಅಂತ ಗೆಳೆಯರು ಹೇಳ್ತಾರೆ. 'ಈ ಗೆಲುವು ವೈಯಕ್ತಿಕವಾಗಿ ಖುಷಿ ಕೊಡುತ್ತಿದೆ' ಅಂತ ವಿಡಿಯೋಗೆ ಕ್ಯಾಪ್ಶನ್ ಹಾಕಲಾಗಿದೆ. ತಮ್ಮ ಫ್ರೆಂಡ್ ತುಂಬಾ ಪ್ರತಿಭಾವಂತ ಮತ್ತು ಕಷ್ಟಪಟ್ಟು ದುಡಿಯೋ ವ್ಯಕ್ತಿ ಅಂತ ವಿಡಿಯೋದಲ್ಲಿರೋರು ಹೇಳ್ತಾರೆ. ಅಷ್ಟೇ ಅಲ್ಲ, ಅವನು ಯಾವಾಗಲೂ ಬೇರೆಯವರಿಗೆ ಸಹಾಯ ಮಾಡೋಕೆ ಮುಂದೆ ಬರ್ತಿದ್ದ, ತನ್ನ ಗುರಿಗಳನ್ನು ಯಾವತ್ತೂ ಬಿಟ್ಟುಕೊಡುತ್ತಿರಲಿಲ್ಲ ಅಂತಾನೂ ಹೇಳಿದ್ದಾರೆ. ಒಟ್ಟಿನಲ್ಲಿ, ತಮ್ಮ ಗೆಳೆಯನ ಯಶಸ್ಸನ್ನು ತಮ್ಮದೇ ಸಾಧನೆ ಅನ್ನೋ ಹಾಗೆ ಸಂಭ್ರಮಿಸುತ್ತಿರುವ ಈ ಗೆಳೆಯರ ಗ್ಯಾಂಗ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯುವತಿಯನ್ನು ಮದ್ವೆಯಾದ 2 ಮಕ್ಕಳ ಅಮ್ಮ! ರೀಲ್ಸ್​ ಮಾಡುತ್ತಲೇ ಶುರುವಾಯ್ತು ಲವ್​- ವಿಚಿತ್ರ ಪ್ರೇಮ ಕಥೆ ಹೀಗಿದೆ
ಒಡಿಶಾ ಕಾಡಿನಲ್ಲಿ ನಿಗೂಢವಾಗಿ ಪತ್ತೆಯಾದ ವಿದೇಶಿ ಒರಾಂಗುಟಾನ್ ಮರಿಗಳಿಗೆ ಆತಂಕ ದೂರ ಮಾಡಲು ' ಮ್ಯೂಸಿಕ್ ಥೆರಪಿ'