ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಟಿಕೆಟ್‌ಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸುತ್ತದೆ. ಇದು ಆಟೋ ಅಪ್‌ಗ್ರೇಡೇಶನ್ ಸೌಲಭ್ಯವಾಗಿದ್ದು, ಉಚಿತ ಸೌಲಭ್ಯದ ಬಗ್ಗೆ ಕೂಡ ತಿಳಿದುಕೊಳ್ಳಲೇಬೇಕು.
ನವದೆಹಲಿ (ಆ.22): ಭಾರತದಲ್ಲಿ ಅತೀ ಹೆಚ್ಚು ಜನ ಬಳಕೆ ಮಾಡುವ ಸಂಚಾರ ಸಾರಿಗೆ ಅಂದರೆ ಅದು ರೈಲು. ಹಲವು ಬಾರಿ ರೈಲಿನಲ್ಲಿ ನಾವು ಬಯಸುವ ಬೋಗಿಯಲ್ಲಿ ಟಿಕೆಟ್ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಈಗ ಭಾರತೀಯ ರೈಲ್ವೆ ಹೊಸ ಯೋಜನೆಯನ್ನು ತಂದಿದೆ. ಇದರಲ್ಲಿ ಪ್ರಯಾಣಿಕರಿಗೆ ಆಟೋ ಅಪ್‌ಗ್ರೇಡೇಶನ್ ಆಯ್ಕೆ ಸಿಗುತ್ತದೆ. ಈ ಸೇವೆಯಲ್ಲಿ ಪ್ರಯಾಣಿಕರು ತಮ್ಮ ಟಿಕೆಟ್ ವರ್ಗವನ್ನು ಅಪ್‌ಗ್ರೇಡ್ ಮಾಡಬಹುದು. ಅಂದರೆ ಪ್ರಯಾಣಿಕರು ಸ್ಲೀಪರ್ ಕ್ಲಾಸ್ ಟಿಕೆಟ್ ಪಡೆದರೆ, ಆ ಟಿಕೆಟ್ ಅನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಥರ್ಡ್ AC ಗೆ ಅಪ್‌ಗ್ರೇಡ್ ಮಾಡಬಹುದು. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಲಭ್ಯವಿದೆ.
ಆಟೋ ಅಪ್‌ಗ್ರೇಡೇಶನ್ ಸೌಲಭ್ಯ: ಆಟೋ ಅಪ್‌ಗ್ರೇಡ್‌ನಲ್ಲಿ, ಥರ್ಡ್ AC, ಸೆಕೆಂಡ್ AC ಮತ್ತು AC ಫಸ್ಟ್ ಕೋಚ್‌ಗಳಲ್ಲಿ ಸೀಟುಗಳು ಲಭ್ಯವಿದ್ದರೆ, ನೀವು ಅದನ್ನು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಅಪ್‌ಗ್ರೇಡ್ ಮಾಡಬಹುದು. ಇದರಲ್ಲಿ ಪ್ರಯಾಣಿಕರು ಉಚಿತ ಮತ್ತು ಶುಲ್ಕದೊಂದಿಗೆ ಈ ಸೌಲಭ್ಯವನ್ನು ಪಡೆಯಬಹುದು.
ಈ ಸೌಲಭ್ಯ ಯಾವಾಗ ಉಚಿತವಾಗಿರುತ್ತದೆ: ನೀವು ಈಗಾಗಲೇ ಪ್ರಯಾಣದಲ್ಲಿದ್ದರೆ ಮತ್ತು ಟಿಕೆಟ್ ಅನ್ನು ಅಪ್‌ಗ್ರೇಡ್ ಮಾಡಲು ಬಯಸಿದರೆ, ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ನೀವು ಟಿಕೆಟ್ ಬುಕ್ ಮಾಡುವಾಗ ಮತ್ತು ಆಟೋ ಅಪ್‌ಗ್ರೇಡೇಶನ್ ಆಯ್ಕೆ ಲಭ್ಯವಿದ್ದರೆ, ನೀವು ಉಚಿತವಾಗಿ ಟಿಕೆಟ್ ಅನ್ನು ಅಪ್‌ಗ್ರೇಡ್ ಮಾಡಬಹುದು. ರೈಲಿನಲ್ಲಿ ಸೀಟು ಲಭ್ಯವಿದ್ದರೆ ಮಾತ್ರ ಸೀಟು ಅಪ್‌ಗ್ರೇಡ್ ಆಗುತ್ತದೆ.
ಎಣ್ಣೆ ಪ್ರಿಯರಿಗೆ ಸಂತಸದ ಸುದ್ದಿ, ಸೆ.1ರಿಂದ ಮದ್ಯದ ದರ ಇಳಿಸಿದ ಕರ್ನಾಟಕ ಸರ್ಕಾರ!
2006 ರಿಂದ ಆಟೋ ಅಪ್‌ಗ್ರೇಡೇಶನ್ ಸೌಲಭ್ಯ ಲಭ್ಯವಿದೆ: ಭಾರತೀಯ ರೈಲ್ವೆ 2006 ರಲ್ಲಿ ಆಟೋ ಅಪ್‌ಗ್ರೇಡೇಶನ್ ಯೋಜನೆಯನ್ನು ಪ್ರಾರಂಭಿಸಿತು. ಪ್ರಯಾಣಿಕರಿಗೆ ಮೀಸಲು ನಮೂನೆಯ ಮೇಲ್ಭಾಗದಲ್ಲಿ ಆಟೋ ಅಪ್‌ಗ್ರೇಡೇಶನ್ ಆಯ್ಕೆಯನ್ನು ನೀಡಲಾಗುತ್ತದೆ. ಇದು IRCTC ಅಪ್ಲಿಕೇಶನ್ ಮತ್ತು ಆನ್‌ಲೈನ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಚಾರ್ಟ್ ತಯಾರಿಸಿದ ನಂತರ, ರೈಲ್ವೆ ಟಿಕೆಟ್ ಅಪ್‌ಗ್ರೇಡ್ ಮಾಡುವ ಬಗ್ಗೆ ಪರಿಗಣಿಸುತ್ತದೆ.