ರೇಪ್ ಕೇಸ್‌ ವಿಚಾರಣೆ ವೇಳೆ ನಕ್ಕ ಪಶ್ಚಿಮ ಬಂಗಾಳ ಸರ್ಕಾರ ಪರ ವಕೀಲ ಸಿಬಲ್‌ಗೆ ತುಷಾರ್ ಮೆಹ್ತಾ ಕ್ಲಾಸ್‌

By Anusha Kb  |  First Published Aug 22, 2024, 4:25 PM IST

ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದು, ಈ ವೇಳೆ ಸಿಬಿಐ ಪರ ವಕೀಲ ಹಾಗೂ ಸಾಲಿಸಿಟರ್ ಜನರಲ್  ತುಷಾರ್ ಮೆಹ್ತಾ ಹಾಗೂ ಪಶ್ಚಿಮ ಬಂಗಾಳದ ಸರ್ಕಾರ ಪರ ವಕೀಲ ಕಪಿಲ್ ಸಿಬಲ್ ಮಧ್ಯೆ ಬಿರುಸಿನ ವಾಗ್ವಾದ ನಡೆಯಿತು.


ನವದೆಹಲಿ: ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದು, ಈ ವೇಳೆ ಸಿಬಿಐ ಪರ ವಕೀಲ ಹಾಗೂ ಸಾಲಿಸಿಟರ್ ಜನರಲ್  ತುಷಾರ್ ಮೆಹ್ತಾ ಹಾಗೂ ಪಶ್ಚಿಮ ಬಂಗಾಳದ ಸರ್ಕಾರ ಪರ ವಕೀಲ ಕಪಿಲ್ ಸಿಬಲ್ ಮಧ್ಯೆ ಬಿರುಸಿನ ವಾಗ್ವಾದ ನಡೆಯಿತು. ಸಿಬಿಐ ಪರ ವಕೀಲ ತುಷಾರ್ ಮೆಹ್ತಾ ಅವರು ಈ ರೇಪ್ ಹಾಗೂ ಕೊಲೆ ಪ್ರಕರಣದ ಬಗ್ಗೆ ಎಫ್‌ಐಆರ್‌ ದಾಖಲಿಸಲು ಪೊಲೀಸರು ಮಾಡಿದ ವಿಳಂಬ ಬಗ್ಗೆ ಗಮನಸೆಳೆದಾಗ ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ಅವರು ನಕ್ಕಿದ್ದಾರೆ ಎನ್ನಲಾಗಿದ್ದು,  ಈ ವೇಳೆ ಸಿಟ್ಟಾದ ತುಷಾರ್ ಮೆಹ್ತಾ,  ಯಾರೋ ಒಬ್ಬರು ತಮ್ಮ ಜೀವವನ್ನೇ ಕಳೆದುಕೊಂಡಿದ್ದರೆ, ಕನಿಷ್ಠ ನಗದೇ ಇರಿ ಎಂದು ಹೇಳಿದ್ದಾರೆ. 

ಕೋಲ್ಕತಾದ ಸರ್ಕಾರಿ ಆರ್‌ಜಿ ಕರ್ ಆಸ್ಪತ್ರೆಯಲ್ಲಿ  ನಡೆದ 31 ವರ್ಷದ ವೈದ್ಯೆಯ ರೇಪ್‌ & ಮರ್ಡರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಸುಪ್ರೀಂಕೋರ್ಟ್‌ಗೆ ವಾಸ್ತವ ಸ್ಥಿತಿ ಹಾಗೂ ತನಿಖಾ ಪ್ರಗತಿಯ ಬಗ್ಗೆ ವರದಿ ನೀಡಿದೆ. ಇದೇ ವೇಳೆ ತನಿಖಾ ಸಂಸ್ಥೆ ಹಲವು ಮಿಸ್ಸಿಂಗ್ ಲಿಂಕ್‌ಗಳನ್ನು ಪತ್ತೆ ಮಾಡಿದೆ.

Tap to resize

Latest Videos

 ಕೋಲ್ಕತ್ತಾ ವೈದ್ಯೆಯ ಕೊಂದವ ಆರ್‌ಜಿ ಕರ್ ಆಸ್ಪತ್ರೆಯ ಬಾಸ್‌ ಸಂದೀಪ್ ಘೋಷ್ ಶಿಷ್ಯ!

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆ ವೇಳೆ ಸಿಬಿಐ ವರದಿ ನೀಡಿದ್ದು, ಅಪರಾಧ ನಡೆದ ಸ್ಥಳವನ್ನು ಬದಲಾಯಿಸಲಾಗಿದೆ. ಸಂತ್ರಸ್ತೆಯ ಕುಟುಂಬಕ್ಕೆ ಮಗಳ ಸಾವಿನ ಬಗ್ಗೆ ದಾರಿತಪ್ಪುವಂತಹ ಮಾಹಿತಿ ನೀಡಲಾಗಿದೆ. ವೈದ್ಯೆಯ ಕುಟುಂಬಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೊದಲಿಗೆ ಮಾಹಿತಿ ನೀಡಲಾಯ್ತು. ಅಲ್ಲದೇ ಎಫ್‌ಐಆರ್ ದಾಖಲಾಗುವುದು ಕೂಡ ತುಂಬಾ ವಿಳಂಬವಾಯ್ತು ಎಂಬುದನ್ನು ಸಾಲಿಸಿಟರ್ ಜನರಲ್ ಕೋರ್ಟ್‌ ಗಮನಕ್ಕೆ ತಂದರು. 

ಕೇವಲ 43 ದಿನ ಜೊತೆಗಿದ್ದ ವೈದ್ಯ ದಂಪತಿಗೆ 22 ವರ್ಷದ ಬಳಿಕ ವಿಚ್ಛೇದನ ನೀಡಿದ ಸುಪ್ರೀಂಕೋರ್ಟ್‌

ತುಂಬಾ ಆಘಾತಕಾರಿ ವಿಚಾರವೆಂದರೆ ವೈದ್ಯರ ಅಂತ್ಯಸಂಸ್ಕಾರ ಮಾಡಿದ ನಂತರ ರಾತ್ರಿ 11.45ರ ಸುಮಾರಿಗೆ ಎಫ್‌ಐಆರ್ ದಾಖಲಿಸಲಾಯ್ತು.ಪೋಷಕರಿಗೆ ಆತ್ಮಹತ್ಯೆ ಎಂದು ತಿಳಿಸಲಾಯ್ತು. ಇದಾದ ನಂತರ ವೈದ್ಯೆಯ ಸ್ನೇಹಿತರು ವೀಡಿಯೋಗ್ರಾಫಿಗೆ ಒತ್ತಾಯಿಸಿದರು, ಜೊತೆಗೆ ಘಟನೆಯಲ್ಲಿ ಏನೂ ಮಿಸ್ ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಎಂದು ಚಂದ್ರಾಚೂಡ್ ಅವರಿದ್ದ ಬೆಂಚ್ ಮುಂದೆ ಮೆಹ್ತಾ ಹೇಳಿದ್ದಾರೆ. 

ಈ ಪ್ರಕರಣದಲ್ಲಿ ಕೋಲ್ಕತ್ತಾ ಪೊಲೀಸರು ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಿದ್ದರಿಂದ ತುಂಬಾ ತೊಂದರೆಯಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದ ಸುಪ್ರೀಂಕೋರ್ಟ್ ಇದೇ ವೇಳೆ ಪ್ರತಿಭಟನೆ ನಡೆಸುತ್ತಿರುವ ವೈದ್ಯರಿಗೆ ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿತ್ತು.  ಅಲ್ಲದೇ ಸೇವೆಗೆ ಮತ್ತೆ ಹಾಜರಾಗುವ ವೇಳೆ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ  ಎಂದು ಭರವಸೆ ನೀಡಿತ್ತು. 

ಹಾಸಿಗೆ ಹಿಡಿದ ಪತಿಯ ವೀರ್ಯ ಸಂಗ್ರಹಕ್ಕೆ ಪತ್ನಿಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್‌

ಅಸಹಜ ಸಾವು ಎಂದು ಪ್ರಕರಣ ದಾಖಲಿಸುವ ಮೊದಲೇ ಆಗಸ್ಟ್ 9 ರಂದು ಸಂಜೆ 6.10ರಿಂದ 7.10ರ ನಡುವೆ ಮರಣೋತ್ತರ ಪರೀಕ್ಷೆ ನಡೆಸಿದ್ದು ತುಂಬಾ ಅಚ್ಚರಿಯಿಂದ ಕೂಡಿದೆ. ಆಗಸ್ಟ್ 9ರ ರಾತ್ರಿ 11.30ರ ವೇಳೆಗೆ ತಲಾ ಪೊಲೀಸ್‌ ಠಾಣೆಗೆ ಅಸಹಜ ಸಾವಿನ ಮಾಹಿತಿ ಹೋಗುತ್ತದೆ. ಹೀಗಿರುವಾಗ ಸಂಜೆ 6.10ರ ಸುಮಾರಿಗೆ ಪೋಸ್ಟ್‌ಮಾರ್ಟಂ ಹೇಗೆ ಮಾಡಿದ್ರು? ಇದು ಸಂಪೂರ್ಣ ಗೊಂದಲಕಾರಿಯಾಗಿದೆ ಎಂದು ಹೇಳಿದರು. ಇದೇ ವೇಳೆ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಮೊದಲ ಬಾರಿ ಕೇಸ್ ದಾಖಲಿಸಿಕೊಂಡ ಕೋಲ್ಕತಾ ಪೊಲೀಸ್ ಅಧಿಕಾರಿಗೆ ಮುಂದಿನ ವಿಚಾರಣೆ ವೇಳೆ ಹಾಜರಿದ್ದು, ಎಂಟ್ರಿ ಟೈಮ್‌ ವಿವರ ತಿಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.  ಅಲ್ಲದೇ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆ ಮಾಡಿತ್ತು.

“Somebody has lost their life. Don’t at least laugh,” says Solicitor General Tushar Mehta to Weat Bengal Govt counsel Kapil Sibal in Supreme Court just now: pic.twitter.com/W9LIcXDYPB

— Shiv Aroor (@ShivAroor)

 

 

click me!