ಕಾಂಗ್ರೆಸ್ ತೊರೆದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ರುಪ್‌ಜ್ಯೋತಿ BJP ಸೇರಲು ರೆಡಿ!

By Suvarna NewsFirst Published Jun 18, 2021, 3:32 PM IST
Highlights
  • ಅಸ್ಸಾಂ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ ನೀಡಿದ ಶಾಸಕ ರುಪ್‌ಜ್ಯೋತಿ
  • ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ರಾಹುಲ್ ವಿರುದ್ಧ ವಾಗ್ದಾಳಿ
  • ಬಿಜೆಪಿ ಸೇರಲು ಸಜ್ಜಾದ ರುಪ್‌ಜ್ಯೋತಿ ಕುರ್ಮಿ

ಅಸ್ಸಾಂ(ಜೂ.18):  ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅಸ್ಸಾಂನಲ್ಲಿ ಅಧಿಕಾರದ ಕನಸು ನುಚ್ಚುನೂರಾಗುತ್ತಿದ್ದಂತೆ ಸ್ಥಳೀಯ ನಾಯಕರ ಭಿನ್ನಮತವೇ ಇದಕ್ಕೆ ಕಾರಣ ಎಂದು ಸೋಲಿನ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದರು. ಪರಿಣಾಮ ಅಸ್ಸಾಂ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಾಹುಲ್ ಗಾಂಧಿ ನಾಯಕತ್ವ ಕುರಿತು ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕ ರುಪ್‌ಜ್ಯೋತಿ ಕುರ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟೇ ಅಲ್ಲ ತಾನೂ ಬಿಜೆಪಿ ಸೇರಿಕೊಳ್ಳುವುದಾಗಿ ಘೋಷಿಸಿದ್ದಾರೆ.

ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಯೋಜನೆ ಅನುಸರಿಸಿ; ವಲಸೆ ಮುಸ್ಲಿಮರಿಗೆ ಅಸ್ಸಾಂ ಸಿಎಂ ಸೂಚನೆ!

ಮರಿಯಾನಿ ಕ್ಷೇತ್ರದ ಶಾಸಕ ಕುರ್ಮಿ ರಾಜೀನಾಮೆ ಬೆನ್ನಲ್ಲೇ ಅಸ್ಸಾಂ ಕಾಂಗ್ರೆಸ್ ಮತ್ತೊಂದು ತಲೆನೋವು ಶುರುವಾಗಿದೆ. AICC ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಸ್ಸಾಂ ವಿಧಾನಸಭಾ ಸ್ವೀಕರ್ ಬಿಸ್ವಜಿತ್ ಡೈಮರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಕುರ್ಮಿ, ಹೊಸ ಬಾಂಬ್ ಸಿಡಿಸಿದ್ದಾರೆ. 

ನಾನು ಕಾಂಗ್ರೆಸ್‌ನಿಂದ ಹೊರಬಂದಿದ್ದೇನೆ. ನನ್ನ ಬೆನ್ನಲ್ಲೇ ಮತ್ತಷ್ಟು ನಾಯಕುರ ಅಸ್ಸಾಂ ಕಾಂಗ್ರೆಸ್‌ನಿಂದ ಹೊರಬರಲಿದ್ದಾರೆ. ರಾಹುಲ್ ಗಾಂಧಿ ನಾಯಕತ್ವ, ಅಸ್ಸಾಂ ಕಾಂಗ್ರೆಸ್ ನಾಯಕರ ಭಿನ್ನಮತ ರಾಜೀನಾಮೆಗೆ ಕಾರಣ ಎಂದು ಕುರ್ಮಿ ಹೇಳಿದ್ದಾರೆ. ಇದೇ ಜೂನ್ 21 ರಂದು ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

ಧ್ವಂಸಗೊಂಡ, ದಿಕ್ಕಿಲ್ಲದ ಟೈಟಾನಿಕ್‌ ಮುಳುಗಲಾರಂಭಿಸಿದೆ: ಕೈಗೆ ಬಿಜೆಪಿ ನಾಯಕನ ಪೆಟ್ಟು!

ಅಸ್ಸಾಂ ರಾಜ್ಯ ಚಹಾ ಬೆಳೆಗಾರ ಸಮುದಾಯದ ಪ್ರಬಲ ನಾಯಕನಾಗಿರುವ ರುಪ್‌ಜ್ಯೋತಿ, ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇತ್ತ ಕುರ್ಮಿ ರಾಜೀನಾಮೆ ಅಚ್ಚರಿ ತಂದಿಲ್ಲ ಎಂದು ಅಸ್ಸಾಂ ಕಾಂಗ್ರೆಸ್ ಹೇಳಿದೆ. ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆ ಕಾರಣ ಕುರ್ಮಿಯನ್ನು ಕಾಂಗ್ರೆಸ್ ಉಚ್ಚಾಟಿಸಿದೆ. ಇದೀಗ ರಾಜೀನಾಮೆ ಕಾಂಗ್ರೆಸ್‌ನಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ಪಕ್ಷ ಹೇಳಿದೆ.

click me!