
ಜಮ್ಮು(ನ.19): ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ವಿದ್ವಂಸಕ ಕೃತ್ಯ ಎಸಗಲು ಭಾರಿ ತಯಾರಿ ಮಾಡಿಕೊಂಡಿದ್ದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ವಾದಕರನ್ನು ಭಾರತೀಯ ಸೇನೆ ನರಕಕ್ಕೆ ಕಳುಹಿಸಿದೆ. ಪುಲ್ವಾಮಾ ರೀತಿಯಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ಮಾಡಲು ಹಾಗೂ ಜಮ್ಮ ಮತ್ತು ಕಾಶ್ಮೀರದ ಶಾಂತಿ ಕದಡುವ ಪ್ರಯತ್ನದಲ್ಲಿದ್ದ ನಾಲ್ವರು ಉಗ್ರರನ್ನು ಸೇನೆ ಗುಂಡಿಕ್ಕ ಹತ್ಯೆ ಮಾಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿಗೆ ಬಿಗ್ ಪ್ಲಾನ್, ಇಬ್ಬರು 'ಕಸಬ್' ಅರೆಸ್ಟ್!.
ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ಬಳಿ ಉಗ್ರರ ಜೊತೆ ಸೇನೆ ಕಾಳ ನಡೆಸಿದೆ. ಟ್ರಕ್‌ನಲ್ಲಿ ಸಾಮಾಗ್ರಿಗಳನ್ನು ತುಂಬಿಕೊಂಡು ಸರಕು ಸಾಗಣೆ ಸೋಗಿನಲ್ಲಿ ನಾಲ್ವರು ಭಯೋತ್ಪಾದರು ಅಡಗಿ ಕುಳಿತಿದ್ದರು. ಟೋಲ್ ಪ್ಲಾಜಾ ಬಳಿ ಟ್ರಕ್ ನಿಲ್ಲಿಸಿದಾಗ ಜಮ್ಮ ಮತ್ತು ಕಾಶ್ಮೀರ ಪೊಲೀಸರ ಮೇಲೆ ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ಗ್ರೆನೇಡ್ ಎಸೆದಿದ್ದಾರೆ.
ಹಿಜ್ಬುಲ್‌ನ ಕಾಶ್ಮೀರ ಬಾಸ್ ಹತ್ಯೆ: ಭದ್ರತಾ ಪಡೆಗಳಿಗೆ ಭರ್ಜರಿ ಯಶಸ್ಸು!
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಭಾರತೀಯ ಸೇನೆ ಕೂಡ ಕಾರ್ಯಚರಣೆಗೆ ಕೈಜೋಡಿಸಿದೆ. ಸೇನೆ ಮಿಂಚಿನ ಕಾರ್ಯಚರಣ ನಡೆಸಿ ಗುಂಡಿನ ದಾಳಿ ನಡೆಸಿದೆ. ಇದಕ್ಕೂ ಮುನ್ನ ಶಸ್ತ್ರಾಸ್ತ್ರ ತ್ಯಜಿಸಿ ಟ್ರಕ್‌ನಿಂದ ಹೊರಬನ್ನಿ, ನಿಮಗೆ ಏನೂ ಆಗದಂತೆ ನಾವು ನೋಡಿಕೊಳ್ಳುುತ್ತೇವೆ ಎಂದು ಮೈಕ್ ಮೂಲಕ ಕೂಗಿ ಹೇಳಲಾಯಿತು.
ಅಲ್-ಖೈದಾ ಜತೆ ಸೇರಿ ವಿಧ್ವಂಸಕ ಕೃತ್ಯಕ್ಕೆ ಹೊಂಚುಹಾಕಿದ್ದ ಮದರಸಾ ಶಿಕ್ಷಕ ಅರೆಸ್ಟ್
ಆದರೆ ಯಾವ ಮಾತಿಗೂ ಬಗ್ಗದ ಭಯೋತ್ಪಾದರು ಪ್ರತಿದಾಳಿಗೆ ಮುಂದಾಗಿದ್ದಾರೆ. ಇತ್ತ ಸೇನೆ ಪ್ರಬಲ ಅಸ್ತ್ರ ಪ್ರಯೋಗಿಸಿ ಅಡಗಿದ್ದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ. ಸೇನಾ ಗುಂಡಿಗೆ ಬಲಿಯಾದ ನಾಲ್ವರು ಉಗ್ರರನ್ನು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರೆಂದು ಗುರಿತಿಸಲಾಗಿದೆ.
ಕಾರ್ಯಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರ ಕತ್ತಿನ ಭಾಗಗಕ್ಕೆ ಗಾಯಗೊಳಾಗಿವೆ. ಜಮ್ಮುವಿನ GMC ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಿನ ಜಾವ 5 ಗಂಟೆಗೆ ಗುಂಡಿನ ಚಕಮಕಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ