ಮನೆಯಲ್ಲಿದ್ದ ಚಪ್ಪಲಿ ಕಚ್ಚಿದ 4 ಬೀದಿ ನಾಯಿಗೆ ಸಂತಾನಹರಣ ಶಿಕ್ಷೆ ನೀಡಿದ ಮಾಜಿ ಮೇಯರ್!

Published : Jun 14, 2023, 06:48 PM IST
ಮನೆಯಲ್ಲಿದ್ದ ಚಪ್ಪಲಿ ಕಚ್ಚಿದ 4 ಬೀದಿ ನಾಯಿಗೆ ಸಂತಾನಹರಣ ಶಿಕ್ಷೆ ನೀಡಿದ ಮಾಜಿ ಮೇಯರ್!

ಸಾರಾಂಶ

ಮನೆಯ ಮುಂಭಾಗದಲ್ಲಿ ಚಪ್ಪಲಿ ಇಡಲಾಗಿತ್ತು. ಗೇಟ್ ತೆರಿದಿತ್ತು. ಬೀದಿ ನಾಯಿಗಳು ಈ ಚಪ್ಪಲಿಯನ್ನು ಕಚ್ಚಿ ಎಳೆದೊಯ್ದಿದೆ. ಇಷ್ಟಕ್ಕೆ ಮಾಜಿ ಮೇಯರ್ ಪಿತ್ತ ನೆತ್ತಿಗೇರಿದೆ. ತಂಡ ಕರೆಸಿ ನಾಲ್ಕು ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ.  

ಔರಂಗಬಾದ್(ಜೂ.14) ಮಾಜಿ ಮೇಯರ್ ತನ್ನ ಎಲ್ಲಾ ಎಲ್ಲಾ ಅಧಿಕಾರ ಬಳಿಸಿ ಬೀದಿ ನಾಯಿಗಳ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಮನೆಯಲ್ಲಿಟ್ಟಿದ್ದ ಚಪ್ಪಲಿಯನ್ನು ಕಚ್ಚಿ ಎಳೆದೊಯ್ದ ಕಾರಣಕ್ಕೆ ಮೇಯರ್ ಸುತ್ತ ಮುತ್ತಲಿನ ಬೀದಿ ನಾಯಿಗಳನ್ನು ಹಿಡಿದು ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.  ಮಹಾರಾಷ್ಟ್ರದ ಔರಂಗಬಾದ್ ಪಾಲಿಕೆಯ ಮಾಜಿ ಮೇಯರ್ ನಂದಕುಮಾರ್ ಗೊಡೆಲೆ ಈ ಕ್ರಮಕ್ಕೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ.

ನಕ್ಷತ್ರವಾಡಿ ಏರಿಯಾದಲ್ಲಿರುವ ಮಾಜಿ ಮೇಯರ್ ನಂದಕುಮಾರ್ ಮನೆಯ ಗೇಟ್ ತೆರೆದಿತ್ತು. ರಾತ್ರಿ ವೇಳೆ ಬೀದಿ ನಾಯಿಗಳು ಮನೆಯ ವರಾಂಡ ಪ್ರವೇಶಿಸಿದೆ. ಮನೆಯ ಹೊರಗಡೆ ಇದ್ದ ನಂದಕುಮಾರ್ ಹಾಗೂ ಕುಟುಂಬಸ್ಥರ ಚಪ್ಪಲಿಯನ್ನು ಕಚ್ಚಿದೆ. ಇಷ್ಟೇ ಅಲ್ಲ ಕೆಲ ಚಪ್ಪಲಿಯನ್ನು ಎತ್ತಿಕೊಂಡು ಎಳೆದೊಯ್ದಿದೆ. ಬೆಳಗ್ಗೆ ಎದ್ದು ನೋಡಿದಾಗ ಒಂದೊಂದು ಚಪ್ಪಲಿ ಕಾಣೆಯಾಗಿದೆ. 

 

ಬೀದಿ ನಾಯಿಗಳ ದಾಳಿಗೆ 11 ವರ್ಷದ ವಿಶೇಷಚೇತನ ಬಾಲಕ ಬಲಿ: ಕೇರಳ ಸರ್ಕಾರದ ವಿರುದ್ದ ಟೀಕೆ

ಚಪ್ಪಲಿ ಕಾಣೆಯಾದ ಕಾರಣ ನಂದಕುಮಾರ್ ಆಕ್ರೋಶಗೊಂಡಿದ್ದಾರೆ. ಹತ್ತಿರದ ಸಿಸಿಟಿವಿ ಪರಿಶೀಲಿಸಲು ಸೂಚಿಸಿದ್ದಾರೆ. ಇದರಂತೆ ಸಿಸಿಟಿವಿ ಪರೀಶೀಲನೆ ವೇಳೆ ಬೀದಿ ನಾಯಿಗಳು ಮನೆಯತ್ತ ನುಗ್ಗಿ ಚಪ್ಪಲಿ ಕಚ್ಚಿ ಎಳೆದೊಯ್ದಿರುವುದು ಪತ್ತೆಯಾಗಿದೆ. ಇದು ಮಾಜಿ ಮೇಯರ್ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ತಮ್ಮ ಎಲ್ಲಾ ಅಧಿಕಾರ ಬಳಸಿ ಪಾಲಿಕೆಗೆ ಕರೆ ಮಾಡಿದ್ದಾರೆ. ನಂದಕುಮಾರ್ ಕರೆ ಬೆನ್ನಲ್ಲೇ ಮರುದಿನ ಬೆಳಗ್ಗೆ ನಾಯಿ ಹಿಡಿಯುವ ತಂಡ ನಕ್ಷತ್ರವಾಡಿ ಏರಿಯಾಗೆ ಹಾಜರಾಗಿದೆ.

ನಾಯಿ ಹಿಡಿಯುವ ತಂಡ ಮಾಜಿ ಮೇಯ್ ನಂದಕುಮಾರ್ ಮನೆಯ ಸುತ್ತಮುತ್ತಲಿನ ಬೀದಿ ನಾಯಿಗಳನ್ನು ಹಿಡಿದಿದೆ. ಇದರಲ್ಲಿ ಚಪ್ಪಲಿ ಕಚ್ಚಿದ ನಾಲ್ಕು ನಾಯಿಗಳನ್ನು ಪತ್ತೆ ಹಚ್ಚಿ ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮಾಹಿತಿ ಹೊರಬರುತ್ತಿದ್ದಂತೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಪಾಲಿಕೆ ಅದಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸ ನೀಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ. ಇತ್ತ ಮಾಜಿ ಮೇಯರ್ ನಂದಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 

ಬೀದಿನಾಯಿಗಳ ಭೀಕರ ದಾಳಿಗೆ ವೃದ್ಧ ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಾರ್ವಜನಿಕ ವಲಯದಲ್ಲಿ ಪರ ವಿರೋಧಗಳು ವ್ಯಕ್ತವಾಗಿದೆ. ಬೀದಿ ನಾಯಿಗಳು ಚಪ್ಪಲಿ ಕಚ್ಚುತ್ತಿದೆ ಎಂದರೆ ನಾಳೆ ಮಕ್ಕಳ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿದೆ. ಹಲವೆಡೆ ಬೀದಿ ನಾಯಿ ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿರುವುದು ಸರಿ ಎಂದಿದ್ದಾರೆ. ಬೀದಿ ನಾಯಿಗಳ ಉಪಟಳ ಹೆಚ್ಚಾಗುವ ಮುನ್ನವೇ ಕ್ರಮ ಕೈಗೊಂಡಿದ್ದಾರೆ. ಇದರ ಹಿಂದಿನ ಕಾರಣ ಏನೇ ಇರಬಹುದು. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿದೆ.

ಇತ್ತ ವಿರೋಧಗಳು ವ್ಯಕ್ತವಾಗಿದೆ. ಚಪ್ಪಲಿ ಕಚ್ಚಿದೆ ಅನ್ನೋ ಕಾರಣಕ್ಕೆ ಬೀದಿ ನಾಯಿಗಳಿಗೆ ಶಿಕ್ಷೆ ನೀಡುವುದು ಎಷ್ಟು ಸರಿ. ಮಾಜಿ ಮೇಯರ್ ತನ್ನ ಅಧಿಕಾರ ಬಳಸಿ ನಾಯಿಗಳ ಸಂತಾನಹರಣ ಚಿಕಿತ್ಸೆ ನೀಡಿದ್ದಾರೆ. ಮಾಜಿ ಮೇಯರ್‌ ಚಪ್ಪಲಿ ಕಚ್ಚಿದ ಕಾರಣಕ್ಕೆ ಈ ರೀತಿಯ ಶಿಕ್ಷೆ ನೀಡಲಾಗಿದೆ. ಆದರೆ ಸಾಮಾನ್ಯ ಜನರಿಗೆ ನಾಯಿ ಕಚ್ಚಿದರೆ ಕ್ರಮ ಕೈಗೊಳ್ಳಲು ವರ್ಷಗಳೇ ಹಿಡಿಯುತ್ತಿರುವುದು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್