
ಜೈಪುರ: ಜೈನ ಕುಟುಂಬದ ಎಲ್ಲಾ ನಾಲ್ವರು ಸದಸ್ಯರು ಸನ್ಯಾಸತ್ವವ ತೆಗೆದುಕೊಳ್ಳಲು ಮುಂದಾಗಿದೆ. ಮೂಲತಃ ಇವರು ಜವಳಿ ಉದ್ಯಮಿಯಾಗಳಿದ್ದು, ಕುಟುಂಬದ ವಾರ್ಷಿಕ ಆದಾಯ ಸುಮಾರು 15 ಕೋಟಿ ರೂಪಾಯಿ ಎಂದು ವರದಿಯಾಗಿದೆ. ರಾಜಸ್ಥಾನದ ಉದಯಪುರದ ನಿವಾಸಿಗಳು, ಇವರಾಗಿದ್ದು ಇಬ್ಬರು ಮಕ್ಕಳೊಂದಿಗೆ ದಂಪತಿಗಳು ದೀಕ್ಷೆಯನ್ನು ಪಡೆದುಕೊಳ್ಳಲಿದ್ದಾರೆ.
47 ವರ್ಷದ ದಿಲೀಪ್ ಭಾಯ್ ಭೋಗರ್, ಪತ್ನಿ 45 ವರ್ಷದ ಜ್ಯೋತಿ ಬೆನ್ ಮತ್ತು ಪುತ್ರಿ 22 ವರ್ಷದ ಛವಿ ಮತ್ತು 14 ವರ್ಷದ ಚಾರ್ವಿ ಸನ್ಯಾಸತ್ವ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಇದೇ ಫೆಬ್ರವರಿ 8, 2027 ರಂದು ಸೂರತ್ನಲ್ಲಿ ಜೈನ ಸನ್ಯಾಸಿ ಜೀವನಕ್ಕೆ ದೀಕ್ಷೆ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ದಿಲೀಪ್ ಭಾಯ್ ಭೋಗರ್ ಅವರ ಹಿರಿಯ ಮಗಳು ಶೈಲಿ ಅವರು 2023ರಲ್ಲಿಯೇ ಜೈನ ದೀಕ್ಷೆಯನ್ನು ಸ್ವೀಕರಿಸಿದ್ದುರು. ಇಂದು ಶೈಲಿಯವರನ್ನು ಸಾಧ್ವಿ ದರ್ಶಿತಾ ಎಂದು ಕರೆಯಲಾಗುತ್ತದೆ.
ದಿಲೀಪ್ ಭಾಯ್ ಭೋಗರ್ ಅವರು ಉದಯಪುರ ಜಿಲ್ಲೆಯ ಜಸ್ವಂತ್ಗಢ ಗ್ರಾಮದಿಂದ ಸೂರತ್ಗೆ ಸ್ಥಳಾಂತರಗೊಂಡರು ಸಣ್ಣ ಬಟ್ಟೆ ಅಂಗಡಿಯಿಂದ ತಮ್ಮ ವ್ಯಾಪಾರ ಆರಂಭಿಸಿದ್ದರು. ಇಂದು ದಿಲೀಪ್ ವ್ಯವಹಾರ 15 ಕೋಟಿ ರೂಪಾಯಿಗೆ ತಲುಪಿದೆ. ಒಂದು ಮಳಿಗೆಯಿಂದ ಎರಡು, ನಂತರ ಯಂತ್ರೋಪಕರಣ ಖರೀದಿಗೆ ಹೀಗೆ ಹಂತ ಹಂತವಾಗಿ ವ್ಯಾಪಾರವನ್ನು ವಿಸ್ತರಣೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ಕುಟುಂಬದ ಎಲ್ಲಾ ಸದಸ್ಯರು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ.
ದಿಲೀಪ್ ಅವರು ತಮ್ಮ ಜವಳಿ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಯೋಜಿಸುತ್ತಿದ್ದಾಗ ಜೈನ ಆಚಾರ್ಯರೊಬ್ಬರನ್ನು ಭೇಟಿಯಾಗಿದ್ದರು. ಈ ಭೇಟಿಯು ದಿಲೀಪ್ ಅವರ ಜೈನ ಧರ್ಮದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿ ಸನ್ಯಾಸಿ ಜೀವನದ ಕಡೆಗೆ ಸೆಳೆಯಿತು. 2026ರಲ್ಲಿ ಮಗಳು ಶೈಲಿ ಸನ್ಯಾಸತ್ವ ಸ್ವೀಕರಿಸಿದ ನಂತರ ದಿಲೀಪ್ ಅವರ ಜೀವನಶೈಲಿಯೇ ಹಂತ ಹಂತವಾಗಿ ಬದಲಾಗಲು ಆರಂಭವಾಯ್ತು. ಹಾಗೆಯೇ ವ್ಯವಹಾರದಲ್ಲಿನ ಆಸಕ್ತಿಯನ್ನು ಸಹ ಕಳೆದುಕೊಂಡಿದ್ದಾರೆ. ಇದೀಗ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ್ದಾರೆ.
ದಿಲೀಪ್ ಮಗಳು ಛವಿ, ಬಿಬಿಎ ಪದವೀಧರೆಯಾಗಿದ್ದು, ಕರಕುಶಲ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಉದ್ಯಮಿಯಾಗುವತ್ತ ಹೆಜ್ಜೆ ಇರಿಸಿದ್ದರು. ತಂದೆ ಸನ್ಯಾಸತ್ವದ ಮುಖ ಮಾಡಿದ ಬೆನ್ನಲ್ಲೇ ಕಳೆದ ನಾಲ್ಕು ತಿಂಗಳಿನಿಂದ ವ್ಯವಹಾರದಿಂದ ದೂರ ಉಳಿದುಕೊಂಡಿದ್ದಾರೆ. ಇನ್ನು ಚಾರ್ವಿ 9 ನೇ ತರಗತಿ ಬಳಿಕ ಶಾಲೆಯಿಂದ ಹೊರ ಬಂದಿದ್ದಾರೆ. ಸೂರತ್ನಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ಫುಟ್ಬಾಲ್ ತಂಡದಲ್ಲಿ ಚಾರ್ವಿ ಆಡಿದ್ದರು.
ದೀಕ್ಷೆ ಪಡೆಯುವ ಮುನ್ನ, ನಾಲ್ವರು ಜೈನ ತಪಸ್ವಿಗಳೊಂದಿಗೆ ವಾಸಿಸುತ್ತಾ ಸಮಯ ಕಳೆದಿದ್ದಾರೆ. ಈ ವೇಳೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುವುದು, ಆಹಾರ ಮತ್ತು ದೈನಂದಿನ ನಡವಳಿಕೆಯ ನಿಯಮಗಳನ್ನು ಪಾಲಿಸುವುದು ಮತ್ತು ಸನ್ಯಾಸಿ ಜೀವನದ ಅವಶ್ಯಕತೆಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿತುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ