'ಕೈ'ನಿಂದ ಪೌರತ್ವ ಕಿಚ್ಚು: ಪಕ್ಷ ತೊರೆದ ನಾಲ್ವರು ನಾಯಕರು!

Suvarna News   | Asianet News
Published : Jan 02, 2020, 07:30 PM IST
'ಕೈ'ನಿಂದ ಪೌರತ್ವ ಕಿಚ್ಚು: ಪಕ್ಷ ತೊರೆದ ನಾಲ್ವರು ನಾಯಕರು!

ಸಾರಾಂಶ

'ಪೌರತ್ವ ತಿದ್ದುಪಡಿ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್ ಅಪಪ್ರಚಾರ'| ಪಕ್ಷ ತೊರೆದ ನಾಲ್ವರು ಗೋವಾ ಕಾಂಗ್ರೆಸ್ ನಾಯಕರು| 'ಸಿಎಎ ಕುರಿತಂತೆ ಕಾಂಗ್ರೆಸ್ ಅಲ್ಪಸಂಖ್ಯಾತರಲ್ಲಿ ಗೊಂದಲ ಸೃಷ್ಟಿಸಿದೆ'| ಸಿಎಎ ಪರ ಧ್ವನಿ ಎತ್ತಿದ ಗೋವಾ ಕಾಂಗ್ರೆಸ್ ನಾಯಕರು|  ಕಾಂಗ್ರೆಸ್ ಕೈಗೊಂಡ ತಪ್ಪು ನಿಲುವನ್ನು ವಿರೋಧಿಸುವುದಾಗಿ ಹೇಳಿದ ನಾಯಕರು| 

ಪಣಜಿ(ಜ.02): ಪೌರತ್ವ ತಿದ್ದುಪಡಿ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ, ಗೋವಾದ ನಾಲ್ವರು ಕಾಂಗ್ರೆಸ್ ನಾಯಕರು ಪಕ್ಷ ತೊರೆದಿದ್ದಾರೆ.  

ಸಿಎಎ ಕುರಿತಂತೆ ಕಾಂಗ್ರೆಸ್ ಅಲ್ಪಸಂಖ್ಯಾತರಲ್ಲಿ ಗೊಂದಲ ಸೃಷ್ಟಿಸಿದೆ ಎಂದು ಆರೋಪಿಸಿ ಪಣಜಿ ಕಾಂಗ್ರೆಸ್ ಬ್ಲಾಕ್ ಸಮಿತಿಯ ಅಧ್ಯಕ್ಷ ಪ್ರಸಾದ್ ಅಮೋಂಕರ್, ಉತ್ತರ ಗೋವಾ ಅಲ್ಪಸಂಖ್ಯಾತರ ಸೆಲ್ ಮುಖ್ಯಸ್ಥ ಜಾವೇದ್ ಶೇಕ್, ಬ್ಲಾಕ್ ಸಮಿತಿ ಕಾರ್ಯದರ್ಶಿ ದಿನೇಶ್ ಕುಬಲ್ ಶಿವರಾಜ್ ತರ್ಕರ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ಪಾಕಿಸ್ತಾನ ಪ್ರಶ್ನಿಸದ ಕಾಂಗ್ರೆಸ್ ನನ್ನನ್ನು ಪ್ರಶ್ನಿಸುತ್ತದೆ: ಮೋದಿ ಗುಡುಗು!

ಈ ನಾಲ್ವರು ನಾಯಕರೂ ಸಿಎಎ ಪರ ಧ್ವನಿ ಎತ್ತಿದ್ದು, ಕಾಂಗ್ರೆಸ್ ಅಲ್ಪಸಂಖ್ಯಾತರ  ದಾರಿ ತಪ್ಪಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ತೊರೆಯುತ್ತಿರುವುದಾಗಿ ಈ ನಾಯಕರು ಸ್ಪಷ್ಟಪಡಿಸಿದ್ದಾರೆ.

ಸಿಎಎ ಮತ್ತು ಎನ್ಆರ್‌ಸಿ ಬಗ್ಗೆ ಕಾಂಗ್ರೆಸ್ ಕೈಗೊಂಡ ತಪ್ಪು ನಿಲುವನ್ನು ನಾವು ವಿರೋಧಿಸುತ್ತೇವೆ. ಪ್ರತಿಪಕ್ಷವಾಗಿ ನಾವು ವಿಮರ್ಶಾತ್ಮಕವಾಗಿರಬೇಕು ಮತ್ತು ವಿರೋಧಿಸುವ ಉದ್ದೇಶದಿಂದ ಏನನ್ನಾದರೂ ವಿರೋಧಿಸಬೇಕಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸ್ವಾಗತಿಸಬೇಕಾಗಿದೆ ಎಂದು ನಾಲ್ವರೂ ನಾಯಕರು ಅಭಿಪ್ರಾಯಪಟ್ಟಿದ್ದಾರೆ. 

ಸಿಎಎ ವಿರುದ್ಧದ ಕೇರಳ ವಿಧಾನಸಭೆ ನಿರ್ಣಯ ಸಂವಿಧಾನ ಬಾಹಿರ ಎಂದ ರಾಜ್ಯಪಾಲ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ