ಎರಡು ದಿನಗಳ ಹಿಂದಷ್ಟೇ ಸೇನಾ ನೆಲೆಯಲ್ಲಿ ಒಂದು ಇನ್ಸಾಸ್ ರೈಫಲ್ ಹಾಗೂ 28 ಸುತ್ತು ಗುಂಡುಗಳು ಕಾಣೆಯಾಗಿದ್ದವು. ಅದಕ್ಕೂ ಈ ಘಟನೆಗೂ ಸಂಬಂಧವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ. ಘಟನೆ ನಡೆದ ತಕ್ಷಣ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಿ ಎಲ್ಲರನ್ನೂ ಖಾಲಿ ಮಾಡಿಸಲಾಗಿದೆ ಎಂದು ಸೇನೆಯ ನೈಋತ್ಯ ಕಮಾಂಡ್ ತಿಳಿಸಿದೆ.
ಬಠಿಂಡಾ/ನವದೆಹಲಿ (ಏಪ್ರಿಲ್ 13, 2023): ಇಬ್ಬರು ಮುಸುಕುಧಾರಿಗಳು ಬುಧವಾರ ಮುಂಜಾನೆ ಪಂಜಾಬ್‌ನ ಬಠಿಂಡಾದಲ್ಲಿರುವ ಸೇನಾ ನೆಲೆಯಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ತಲಾ ಇಬ್ಬರು ಯೋಧರು ಬಲಿಯಾಗಿದ್ದಾರೆ. ಘಟನೆ ಬಳಿಕ ಮುಸುಕುಧಾರಿಗಳು ನಾಪತ್ತೆಯಾಗಿದ್ದಾರೆ.
ಮೃತ ಯೋದರನ್ನು ಬಾಗಲಕೋಟೆ ಜಿಲ್ಲೆ ಬದಾಮಿ ತಾಳೂಕಿನ ಇನಾಂ ಹನುಮನೇರಿ ಗ್ರಾಮದ ಸಂತೋಷ್ ನಾಗರಾಳ (25) ಹಾಗೂ ಕರ್ನಾಟಕದ ಸಾಗರ್ ಬನ್ನೆ (25). ತಮಿಳುನಾಡಿನ ಯೋಗೇಶ್ ಕುಮಾರ್ (24), ಮತ್ತು ಕಮಲೇಶ್ ಆರ್ ಎಂದು ಗುರುತಿಸಲಾಗಿದೆ. ಈ ನಡುವೆ ಘಟನಾ ಸ್ಥಳದ ಸಮೀಪದಲ್ಲೇ, 2 ದಿನಗಳ ಹಿಂದಷ್ಟೇ ಸೇನಾ ನೆಲೆಯಿಂದ ನಾಪತ್ತೆಯಾಗಿದ್ದ 1 ಇನ್ಸಾಸ್ ರೈಫಲ್ ಹಾಗೂ ಸುತ್ತು ಗುಂಡು ಪತ್ತೆಯಾಗಿವೆ. ಹೀಗಾಗಿ ಸೇನಾ ಶಸ್ತ್ರಾಸ್ತ್ರ ಬಳಸಿಕೊಂಡೇ ಕೃತ್ಯ ನಡೆಸಿರುವ ಶಂಕೆ ಇದೆ.
ಇದನ್ನು ಓದಿ: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ಬಾಲಕಿ
ಏನಾಯ್ತು?
ಬುಧವಾರ ಬೆಳಗಿನ ಜಾವ 4.30ರ ಸಮಯದಲ್ಲಿ ಬಠಿಂಡಾ ಸೇನಾ ನೆಲೆಯಲ್ಲಿ ಭಾರಿ ಗುಂಡಿನ ಸದ್ದು ಕೇಳಿಬಂದಿದೆ. ಕೂಡಲೇ ಕ್ಷಿಪ್ರ ಪಡೆಯನ್ನು ಸನ್ನದ್ಧಗೊಳಿಸಿ ಬ್ಯಾರಕ್ ಬಳಿ ಕಳುಹಿಸಲಾಗಿದೆ. ಈ ವೇಳೆ ಒಂದು ಕೊಠಡಿಯಲ್ಲಿ ಎರಡು ಮತ್ತು ಇನ್ನೊಂದು ಕೊಠಡಿಯಲ್ಲಿ ಎರಡು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಯೋಧರ ದೇಹ ಪತ್ತೆಯಾಗಿದೆ.
ಈ ನಡುವೆ ಘಟನೆ ನಡೆದ ಕೆಲ ಕ್ಷಣಗಳಲ್ಲೇ ಜುಬ್ಬಾ, ಪೈಜಾಮಾ ಧರಿಸಿದ್ದ ಇಬ್ಬರು ಮುಸುಕುಧಾರಿಗಳು ಬ್ಯಾರಕ್‌ನಿಂದ ಹೊರಬಂದಿದ್ದನ್ನು ನೋಡಿದ್ದಾಗಿ ಸೇನಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಈ ಪೈಕಿ ಒಬ್ಬ ಕೈಯಲ್ಲಿ ಇನ್ಸಾಸ್ ರೈಫಲ್ ಹಿಡಿದುಕೊಂಡಿದ್ದರೆ, ಮತ್ತೊಬ್ಬ ಕೈಯಲ್ಲಿ ಚಾಕು ಹಿಡಿದುಕೊಂಡಿದ್ದ ಎಂದು ಸ್ಥಳೀಯ ಠಾಣೆಯಲ್ಲಿ ಸೇನಾ ಸಿಬ್ಬಂದಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಆಸ್ತಿಗಾಗಿ ಅತ್ತೆ - ಮಾವನನ್ನೇ ಕೊಲೆ ಮಾಡಿದ ರಾಕ್ಷಸಿ ಸೊಸೆ: ಬಾಯ್‌ಫ್ರೆಂಡ್ ನೆರವಿನಿಂದ ಹತ್ಯೆ!
ಈ ಘಟನೆಯಲ್ಲಿ ಬೇರೆ ಯಾರೂ ಗಾಯಗೊಂಡಿಲ್ಲ ಅಥವಾ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗಿಲ್ಲ. ‘ಇದು ಭಯೋತ್ಪಾದಕ ದಾಳಿಯಲ್ಲ ಅಥವಾ ಹೊರಗಿನ ಯಾರೂ ನಡೆಸಿದ ದಾಳಿಯಲ್ಲ. ಯೋಧರ ನಡುವೆಯೇ ನಡೆದ ಕಾಳಗವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ’ ಎಂದು ಪಂಜಾಬ್ ಪೊಲೀಸರು ಘಟನೆ ಬೆನ್ನಲ್ಲೇ ಮಾಹಿತಿ ನೀಡಿದ್ದರು.
ಆದರೆ ಬಳಿಕ ಘಟನೆ ಕುರಿತು ಇನ್ನೂ ಯಾವುದೇ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಇದರ ಬೆನ್ನಲ್ಲೇ ಘಟನೆ ಕುರಿತು ಸೇನಾ ತನಿಖೆಗೂ ಆದೇಶಿಸಲಾಗಿದೆ. ಜೊತೆಗೆ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ, ಘಟನೆ ಕುರಿತು ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕುಡುಕ ಪತಿ ಕಾಟಕ್ಕೆ ಬೇಸತ್ತು 3 ಮಕ್ಕಳನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ..!
ಎರಡು ದಿನಗಳ ಹಿಂದಷ್ಟೇ ಸೇನಾ ನೆಲೆಯಲ್ಲಿ ಒಂದು ಇನ್ಸಾಸ್ ರೈಫಲ್ ಹಾಗೂ 28 ಸುತ್ತು ಗುಂಡುಗಳು ಕಾಣೆಯಾಗಿದ್ದವು. ಅದಕ್ಕೂ ಈ ಘಟನೆಗೂ ಸಂಬಂಧವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ. ಘಟನೆ ನಡೆದ ತಕ್ಷಣ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಿ ಎಲ್ಲರನ್ನೂ ಖಾಲಿ ಮಾಡಿಸಲಾಗಿದೆ ಎಂದು ಸೇನೆಯ ನೈಋತ್ಯ ಕಮಾಂಡ್ ತಿಳಿಸಿದೆ.
ಇದನ್ನೂ ಓದಿ: ದೇವಸ್ಥಾನದ ಬಳಿ ಬಿರುಗಾಳಿಗೆ ಉರುಳಿದ ಬೃಹತ್ ಮರ: 7 ಭಕ್ತರು ಬಲಿ, 20 ಕ್ಕೂ ಹೆಚ್ಚು ಮಂದಿಗೆ ಗಾಯ