Breaking: ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಏಮ್ಸ್‌ ಆಸ್ಪತ್ರೆಗೆ ದಾಖಲು!

By Santosh Naik  |  First Published Dec 26, 2024, 8:58 PM IST

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ದೆಹಲಿಯ ಏಮ್ಸ್‌ನ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ. 91 ವರ್ಷದ ನಾಯಕನಿಗೆ ತುರ್ತು ವೈದ್ಯಕೀಯ ಆರೈಕೆ ಅಗತ್ಯವಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.


ನವದೆಹಲಿ (ಡಿ.26): ನರೇಂದ್ರ ಮೋದಿಗೂ ಮುನ್ನ ಎರಡು ಅವಧಿಗಳ ಕಾಲಕ್ಕೆ ದೇಶದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದ ಮನ್‌ಮೋಹನ್‌ ಸಿಂಗ್‌ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದ 92 ವರ್ಷದ ನಾಯಕನನ್ನು ತುರ್ತು ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮನಮೋಹನ್ ಸಿಂಗ್ ಅವರ ಆರೋಗ್ಯ ಗುರುವಾರ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್‌ನ ತುರ್ತು ವಿಭಾಗಕ್ಕೆ ಗುರುವಾರ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. 92 ವರ್ಷದ ಸಿಂಗ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆದರೆ, ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಕಾರಣ ಇನ್ನೂ ತಿಳಿದುಬಂದಿಲ್ಲ. 2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನ್‌ಮೋಹನ್‌ ಸಿಂಗ್‌, ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. 33 ವರ್ಷಗಳ ಹಿಂದೆ, 1991 ರಲ್ಲಿ, ಸಿಂಗ್ ಅವರು ರಾಜ್ಯಸಭೆಯಲ್ಲಿ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದರು. ಮೇಲ್ಮನೆಯಲ್ಲಿ ನಾಲ್ಕು ತಿಂಗಳು ಕಳೆದ ಬಳಿಕ ಅವರು ಜೂನ್‌ನಲ್ಲಿ ಪಿವಿ ನರಸಿಂಹರಾವ್ ಸರ್ಕಾರದ ಅಡಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಅದ್ಭುತವಾದ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದ ಮನ್‌ಮೋಹನ್‌ ಸಿಂಗ್‌, BA ಮತ್ತು MA ಎರಡರಲ್ಲೂ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಟಾಪ್‌ ಸ್ಥಾನ ಪಡೆದಿದ್ದರು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬಳಿಕ ಅವರು ಕೇಂಬ್ರಿಡ್ಜ್‌ಗೆ ತೆರಳಿದ್ದಲ್ಲದೆ, ಅಂತಿಮವಾಗಿ ಆಕ್ಸ್‌ಫರ್ಡ್‌ನಿಂದ ಡಿಫಿಲ್ ಪಡೆದರು . ಮನ್‌ಮೋಹನ್‌ ಸಿಂಗ್ ಭಾರತವನ್ನು ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದತ್ತ ಮುನ್ನಡೆಸಿದ ನಾಯಕರಾಗಿದ್ದಾರೆ.

Tap to resize

Latest Videos

undefined

ಯಾವ ಪ್ರಧಾನಿಯೂ ಇಷ್ಟೊಂದು ಸುಳ್ಳು, ದ್ವೇಷದ ಭಾಷಣ ಮಾಡಿಲ್ಲ: ಮೋದಿ ವಿರುದ್ಧ ಮನಮೋಹನ್ ಸಿಂಗ್ ವಾಗ್ದಾಳಿ

ಪಕ್ಷ ಬದ್ಧತೆ ಸಮರ್ಪಣೆಗೆ ಹೆಸರುವಾಸಿಯಾಗಿರುವ ಮನಮೋಹನ್ ಸಿಂಗ್ ಅವರನ್ನು ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಗಳಿದ್ದರು, ಅವರು ಮನ್‌ಮೋಹನ್‌ ಸಿಂಗ್ "ಗಾಲಿಕುರ್ಚಿಯಲ್ಲೂ ಕೆಲಸ ಮಾಡಿದರು" ಎಂದು ಹೇಳಿದ್ದರು. 'ನನಗಿನ್ನೂ ನೆನಪಿದೆ ಇನ್ನೊಂದು ಸದನದಲ್ಲಿ ವೋಟಿಂಗ್‌ ನಡೆಯುವ ಸಮಯ. ಅವರಿಗೂ ಗೊತ್ತಿತ್ತು. ಆಡಳಿತ ಪಕ್ಷ ಗೆಲ್ಲುತ್ತದೆ ಎಂದು. ಹಾಗಿದ್ದರೂ ಅವರು ವೀಲ್‌ಚೇರ್‌ನಲ್ಲಿ ಬಂದು ತಮ್ಮ ಮತ ಚಲಾಯಿಸಿದ್ದರು' ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದರು. ಸಂಸತ್ತಿನಲ್ಲಿ ತಮ್ಮ ಕೊನೆಯ ಭಾಷಣದಲ್ಲಿ, ಸಿಂಗ್ ನೋಟು ಅಮಾನ್ಯೀಕರಣವನ್ನು ಟೀಕಿಸಿದರು, ಇದನ್ನು "ಸಂಘಟಿತ ಲೂಟಿ ಮತ್ತು ಕಾನೂನುಬದ್ಧ ಲೂಟಿ" ಎಂದು ಕರೆದಿದ್ದರು.

ವೀಲ್‌ಚೇರ್‌ನಲ್ಲೂ ದೇಶಕ್ಕಾಗಿ ಸೇವೆ ಸಲ್ಲಿಸಿದ ನಾಯಕ, ಮನ್‌ಮೋಹನ್ ಸಿಂಗ್ ಶ್ಲಾಘಿಸಿದ ಮೋದಿ!

click me!