BMW ಬದಲು ತನ್ನ ಏಕೈಕ ಕಾರು ಮಾರುತಿ 800 ಮೇಲೆ ಇನ್ನಿಲ್ಲದ ಪ್ರೀತಿ: ಸರಳತೆ ನೆನೆದ ಮಾಜಿ ಭದ್ರತಾ ಸಿಬ್ಬಂದಿ

By Anusha Kb  |  First Published Dec 27, 2024, 4:47 PM IST

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರಳತೆ ಮತ್ತು ಮಾರುತಿ ಕಾರಿನ ಮೇಲಿನ ಪ್ರೀತಿಯನ್ನು ಅವರ ಮಾಜಿ ಭದ್ರತಾ ಅಧಿಕಾರಿ ಅರುಣ್ ಅಸ್ಸಿಂ ಸ್ಮರಿಸಿದ್ದಾರೆ. ಐಷಾರಾಮಿ BMW ಕಾರನ್ನು ಬಿಟ್ಟು ಮಾರುತಿ 800 ಕಾರನ್ನೇ ಬಳಸಲು ಇಷ್ಟಪಡುತ್ತಿದ್ದ ಸಿಂಗ್, ಸಾಮಾನ್ಯರೊಂದಿಗಿನ ತಮ್ಮ ಸಂಪರ್ಕವನ್ನು ಪ್ರತಿಬಿಂಬಿಸುತ್ತಿದ್ದರು.


ಮಾಜಿ ಪ್ರಧಾನಿ ದೇಶ ಕಂಡ ಮಹಾನ್ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ನಿನ್ನೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಅನೇಕ ಗಣ್ಯರು ಶೋಕ ವ್ಯಕ್ತಪಡಿಸುತ್ತಿದ್ದು, ಕೆಲವರು ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡು ಭಾವುಕರಾಗುತ್ತಿದ್ದಾರೆ. ಅದೇ ರೀತಿ ಈಗ ಅವರ ಮಾಜಿ ಭದ್ರತಾ ಅಧಿಕಾರಿ ಹಾಗೂ ಐಪಿಎಸ್ ಅಧಿಕಾರಿಯಾಗಿರುವ ಅರುಣ್ ಅಸ್ಸಿಂ ಅವರು ಮಾಜಿ ಪ್ರಧಾನಿಯೊಂದಿಗಿನ ಒಡನಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು  ಗೌರವ ನಮನ ಸಲ್ಲಿಸಿದ್ದಾರೆ.     

ದೇಶದ ಪ್ರಧಾನಿಯಾಗಿದ್ದರೂ ಕೂಡ ಡಾ.  ಮನಮೋಹನ್ ಸಿಂಗ್ ಅವರು ವಿನಮ್ರವಾದ ನಡವಳಿಕೆ ಹಾಗೂ ಸರಳತೆಗೆ ಹೆಸರಾದವವರು. ಇಂತಹ ನಾಯಕ ಲಕ್ಸುರಿ  ಬಿಎಂಡ್ಬ್ಲ್ಯು ಕಾರಿನ ಬದಲು ಸಾಮಾನ್ಯವಾದ ಮಾರುತಿ ಸುಜುಕಿ -800 ಕಾರನ್ನೇ ಬಹಳ ಇಷ್ಟಪಡುತ್ತಿದ್ದರಂತೆ. ಪ್ರಸ್ತುತ ಉತ್ತರ ಪ್ರದೇಶ ಕನೌಜ್‌ನ ಶಾಸಕರಾಗಿ ಸಚಿವರಾಗಿರುವ ಅರುಣ್ ಅಸ್ಸಿಂ ಅವರು ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಮೂರು ವರ್ಷಗಳ ಕಾಲ ಅವರ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರಿಗ ಮನಮೋಹನ್ ಸಿಂಗ್ ಅವರ ಸರಳತೆ ಬಗ್ಗೆ ಮಾತನಾಡಿದ್ದಾರೆ.

Tap to resize

Latest Videos

undefined

ಮನಮೋಹನ್ ಸಿಂಗ್ ಅವರ ಬಳಿ ಇದ್ದಿದ್ದುಒಂದೇ ಒಂದು ಕಾರು ಅದು ಮಾರುತಿ 800, ಪ್ರಧಾನಿಯವರಿಗೆ ಸರ್ಕಾರದಿಂದ ನೀಡಿದ ಐಷಾರಾಮಿ ಬಿಎಂಡಬ್ಲ್ಯು ಕಾರಿನ ಹಿಂದೆ ನಿಲ್ಲಿಸಿದ್ದ ಈ ಮಾರುತಿ 800 ಕಾರನ್ನು ಅವರು ಯಾವಾಗಲೂ ಕಾತುರದಿಂದಲೇ ನೋಡುತ್ತಿದ್ದರು. 

ನಾವು ಅದರ ಮೂಲಕ ಹಾದು ಹೋದಾಗಲೆಲ್ಲಾ, ಅವರು ಅದನ್ನು ತನಗೆ ಸೇರಿದ್ದು ಎಂಬ ಭಾವನೆಯಿಂದಲೇ ನೋಡುತ್ತಿದ್ದರು. ಅವರು ನನಗೆ ಆಗಾಗ್ಗೆ ಅದರ ಬಗ್ಗೆ ಹೇಳುತ್ತಿದ್ದರು, 'ಅಸಿಮ್, ನನಗೆ ಈ ಕಾರಿನಲ್ಲಿ [BMW] ಪ್ರಯಾಣಿಸಲು ಇಷ್ಟವಿಲ್ಲ; ಅದು (ಮಾರುತಿ) ನನ್ನ ಕಾರು ಎಂದು ಹೇಳುತ್ತಿದ್ದರು'. ಆಗ ನಾನು ಅವರಿಗೆ ವಿವರಿಸುತ್ತಿದೆ.  BMW ಕಾರು ಐಷಾರಾಮಕ್ಕೆ ಅಲ್ಲ, ಆದರೆ SPG ಆಯ್ಕೆ ಮಾಡಿದ ಭದ್ರತಾ ಕಾರಣಗಳಿಗಾಗಿ ಅದನ್ನು ನಿಮ್ಮ ಪ್ರಯಾಣಕ್ಕೆ ಬಳಸಲಾಗುತ್ತಿದೆ ಎಂದು ಹೇಳುತ್ತಿದ್ದೆ.  ಆದರೆ ಅವರು ಮಾತ್ರ ಮಾರುತಿಯೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು. 'ನಾನು ಮಧ್ಯಮ ವರ್ಗದ ವ್ಯಕ್ತಿ, ಮತ್ತು ಜನಸಾಮಾನ್ಯರನ್ನು ನೋಡಿಕೊಳ್ಳುವುದು ನನ್ನ ಕೆಲಸ ಎಂದು ಹೇಳುತ್ತಿದ್ದರು ಎಂದು ಅರುಣ್ ಅಸ್ಸಿಂ ಅವರು ಮಾಜಿ ಪ್ರಧಾನಿಗೆ ಮಾರುತಿ 800 ಕಾರಿನ ಮೇಲಿದ್ದ ಪ್ರೀತಿಯನ್ನು ನೆನಪು ಮಾಡಿಕೊಂಡಿದ್ದಾರೆ.

ಮನಮೋಹನ್ ಸಿಂಗ್‌ ಅವರಿಗೆ ಮಾರುತಿ ಕೇವಲ ವಾಹನಕ್ಕಿಂತ ಹೆಚ್ಚಾಗಿತ್ತು. ಇದು ಜನರಿಗೆ ಸೇರಿದ ವ್ಯಕ್ತಿಯಾಗಿ ಅವರ ಗುರುತಿನ ಸಂಕೇತವಾಗಿತ್ತು.  ಬಿಎಂಡಬ್ಲ್ಯು ಅದರ ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ, ಅವರ ಪ್ರಧಾನ ಮಂತ್ರಿ ಕಚೇರಿಯ ವೈಭವವನ್ನು ಸಾಕಾರಗೊಳಿಸಿದರೆ, ಇತ್ತ ಸಿಂಗ್ ಅವರ ಹೃದಯ ಮಾತ್ರ ನಿಗರ್ವಿಯಾದ ಮಾರುತಿಗೆ ದೃಢವಾಗಿ ಲಂಗರು ಹಾಕಿತು. ಇದು ಸರಳತೆ ಮತ್ತು ಸಾಮಾನ್ಯ ನಾಗರಿಕರ ಜೊತೆಗಿನ ಅವರ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ ಎಂದು ಅರುಣ್ ಅಸ್ಸಿಂ ಸ್ಮರಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಶಿಸ್ತು ಹಾಗೂ ಸಮಯಪಾಲನೆಯನ್ನು ನೆನೆದ ಅರುಣ್‌, ಸಿಂಗ್ ಅವರು ಅಧಿಕೃತ ನಿಗದಿಯಾದ ಕಾರ್ಯಕ್ರಮಗಳಗೆ ಮುಂಚೆಯೇ ಹೊರಟು ಹೋಗುವಂತಹ ವ್ಯಕ್ತಿಯಾಗಿದ್ದರು. ನನಗಾಗಿ ಯಾರು ಕಾಯಬಾರದು ಎಂಬ ಮನಸ್ಥಿತಿ ಅವರದಾಗಿತ್ತು.ಅವರು ತಮ್ಮ ವೇಳಾಪಟ್ಟಿಯಲ್ಲಿ ಅಧ್ಯಯನಕ್ಕೆ ಸಮಯ ಮೀಸಲಿಟ್ಟಿದ್ದರು.  ಯಾವಾಗಲೂ ಜ್ಞಾನಕ್ಕಾಗಿ ಕಾದಿರುವ ವಿದ್ಯಾರ್ಥಿಯಂತೆ ಹಾತೊರೆಯುತ್ತಿದ್ದರು. ಯಾವಾಗಲೂ ಓದುವುದು ಅಧ್ಯಯನ ನಡೆಸುವುದು ಮಾಡುತ್ತಿದ್ದರು. ವಿದ್ಯಾರ್ಥಿಗಳಂತೆ ಪೇಪರ್ ಹಿಡಿದುಕೊಂಡು ನೋಟ್ ಮಾಡಿಕೊಳ್ಳುತ್ತಿದ್ದರು. ಸದಾ ವಿದ್ಯಾರ್ಥಿ ಮೂಡ್‌ನಲ್ಲಿರುತ್ತಿದ್ದರು ಎಂದು ಅರುಣ್ ಅಸಿಮ್  ನೆನಪು ಮಾಡಿಕೊಂಡಿದ್ದಾರೆ. 

ಅರುಣ್ ಅಸ್ಸಿಂ ಅವರು 2022ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡು ರಾಜಕೀಯ ಪ್ರವೇಶಿಸಿದ್ದು, ಪ್ರಸ್ತುತ ಉತ್ತರ ಪ್ರದೇಶದಲ್ಲಿ ಸಚಿವರಾಗಿದ್ದಾರೆ. 

मैं 2004 से लगभग तीन साल उनका बॉडी गार्ड रहा। एसपीजी में पीएम की सुरक्षा का सबसे अंदरुनी घेरा होता है - क्लोज़ प्रोटेक्शन टीम जिसका नेतृत्व करने का अवसर मुझे मिला था। एआईजी सीपीटी वो व्यक्ति है जो पीएम से कभी भी दूर नहीं रह सकता। यदि एक ही बॉडी गार्ड रह सकता है तो साथ यह बंदा… pic.twitter.com/468MO2Flxe

— Asim Arun (@asim_arun)

 

click me!