ಮನ್‌ ಕಿ ಬಾತ್: ನದಿಗಳ ಮಹತ್ವ ತಿಳಿಸಿದ ಮೋದಿ, ಖಾದಿ ಬಳಕೆಗೂ ಕರೆ!

By Suvarna News  |  First Published Sep 26, 2021, 2:25 PM IST

* ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾರತ ತಲುಪಿದ ಪ್ರಧಾನಿ ನರೇಂದ್ರ ಮೋದಿ

* ಮನ್‌ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮೋದಿ ಮಾತು

* ಮನ್‌ ಕೀ ಬಾತ್‌ ಸರಣಿಯ 81ನೇ ಸಂಚಿಕೆಯಲ್ಲಿ ಮಾತನಾಡಿದ ಪಿಎಂ ಮೋದಿ

* ನದಿಗಳ ಮಹತ್ವ ತಿಳಿಸಿದ ಪ್ರಧಾನಿ, ಖಾದಿ ಬಳಕೆಗೂ ಕರೆ


ನವದೆಹಲಿ(ಸೆ.26) ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾರತ ತಲುಪಿದ ಪ್ರಧಾನಿ ನರೇಂದ್ರ ಮೋದಿ(Narendra Modi), ಭಾನುವಾರ ಮನ್‌ ಕಿ ಬಾತ್(Mann Ki Baat) ಕಾರ್ಯಕ್ರಮದ ಮೂಲಕ ದೇಶವನ್ನುದ್ದೆಶಿಸಿ ಮಾತನಾಡಿದ್ದಾರೆ. ಭಾನುಲಿ ಕಾರ್ಯಕ್ರಮ ಮನ್‌ ಕೀ ಬಾತ್‌ ಸರಣಿಯ 81ನೇ ಸಂಚಿಕೆಯಲ್ಲಿ ಮಾತನಾಡಿದ ಪಿಎಂ ಮೋದಿ ವಿಶ್ವ ನದಿಗಳ ದಿನವನ್ನು(World River Day) ನೆನಪಿಸಿ, ನದಿಗಳ ಮಹತ್ವದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ. ಇದೇ ವೇಳೆ ದೇಶದ ಜನತೆಗೆ ಖಾದಿ ಬಳಕೆಗೂ ಕರೆ ನೀಡಿದ್ದಾರೆ.

ಸೆಪ್ಟೆಂಬರ್ ತಿಂಗಳು ಅತ್ಯಂತ ಮಹತ್ವದ ತಿಂಗಳಾಗಿದೆ. ಈ ತಿಂಗಳಿನಲ್ಲಿ ನಾವು ವಿಶ್ವ ನದಿಗಳ ದಿನ ಆಚರಣೆ ಮಾಡುತ್ತೇವೆ ಎಂದರು. ನದಿಗಳು ನಮಗೆ ನಿಸ್ವಾರ್ಥವಾಗಿ ನೀರನ್ನು ಕೊಡುತ್ತೆವೆ. ನಾವು ಅದನ್ನು ಸ್ಮರಿಸಿಕೊಳ್ಳಬೇಕು. ಹನಿ ಹನಿ ನೀರು ಸಹ ಬಹಳ ಮುಖ್ಯವಾದದ್ದು. ನದಿಗಳ ದಂಡೆಯ ಮೇಲೆ ವಾಸಿಸುವ ಜನರು ವರ್ಷಕ್ಕೆ ಒಮ್ಮೆ ನದಿ ಉತ್ಸವ ಆಚರಣೆ ಮಾಡಬೇಕು ಎಂದು ಮೋದಿ ಹೇಳಿದ್ದಾರೆ.

Speaking on a wide range of topics in . Tune in. https://t.co/FNJDiv7Tvc

— Narendra Modi (@narendramodi)

Latest Videos

ಇದೇ ವೇಳೆ ನಮಾಮಿ ಗಂಗೆ ಯೋಜನೆ ಬಗ್ಗೆ ಮಾತನಾಡಿದ ಮೋದಿ, ದೇಶದ ಪವಿತ್ರ ನದಿ ಗಂಗೆಯನ್ನು ಸ್ವಚ್ಛಗೊಳಸುವ ನಮಾಮಿ ಗಂಗೆ(Namami ganga) ಯೋಜನೆ ಯಶಸ್ಸು ಕಾಣುತ್ತಿದೆ. ಜನರೂ ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನದಿಗಳ ಜೊತೆ ನಮ್ಮ ಜೀವನ ಕ್ರಮ ಸೇರಿಕೊಂಡಿದೆ. ಪ್ರತಿ ದಿನ ನಾವು ನದಿಗಳನ್ನು ನೆನಪು ಮಾಡಿಕೊಳ್ಳಬೇಕು ಎಂದು ಹಿರಿಯರು ಪ್ರತಿದಿನ ಸ್ನಾನದ ಸಮಯದಲ್ಲಿ 'ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು' ಎಂದು ಶ್ಲೋಕ ಅಭ್ಯಾಸ ಮಾಡಿಸುತ್ತಿದ್ದರು. ವಿಶ್ವ ನದಿಗಳ ದಿನಾಚರಣೆಯಂದು ನಾವು ಇದನ್ನು ನೆನಪಿಸಿಕೊಳ್ಳೋಣ ಎಂದರು.

ಇ-ಹರಾಜಿನ ಉಲ್ಲೇಖ

ಈಗ ದೇಶದಲ್ಲಿ ಇಂದು ಇ-ಹರಾಜು ನಡೆಯುತ್ತಿದೆ. ದೇಶದ ಹಲವು ಜನರಿಗೆ ಇದು ತಿಳಿದಿದೆ. ಯುವಕರಿಗೆ ಖಂಡಿತವಾಗಿ ತಿಳಿದಿರುತ್ತದೆ. ವಿವಿಧ ಸಮಯದಲ್ಲಿ ನಾನು ಸ್ವೀಕರಿಸಿದ ಉಡುಗೊರೆಯನ್ನು ಹರಾಜು ಹಾಕಲಾಗುತ್ತಿದೆ. ಇದರಿಂದ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸೆ.25 ಮಹತ್ವದ ದಿನ

ನಿನ್ನೆ ಸೆಪ್ಟೆಂಬರ್​ 25 ತುಂಬ ಮಹತ್ವದ ದಿನವಾಗಿದೆ. ಈ ದೇಶದ ಹೆಮ್ಮೆಯ ಪುತ್ರ ಪಂಡಿತ್​ ದೀನ್​ ದಯಾಳ್​ ಉಪಾಧ್ಯಾಯ ಅವರ ಜನ್ಮ ದಿನ ಮತ್ತು ಮೂರು ವರ್ಷಗಳ ಹಿಂದೆ ಇದೇ ದಿನ ನಮ್ಮ ದೇಶದಲ್ಲಿ ಆಯುಷ್ಮಾನ್​ ಭಾರತ್​ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲಾಯಿತು. ಇದು ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ಭಾಗ್ಯ ಯೋಜನೆಯಾಗಿದೆ ಎಂದು ಮೋದಿ ನೆನಪಿಸಿದರು. 

ಅಲ್ಲದೇ ಸಾಲು ಸಾಲು ಹಬ್ಬಗಳ ಆಚರಣೆ ಆರಂಭವಾಗುತ್ತದೆ. ಆದರೆ ಜನರು ಕೊರೋನಾ ಸಾಂಕ್ರಾಮಿಕದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕೊರೋನಾ ನಿಯಂತ್ರಣದ ಸುರಕ್ಷಾ ಚಕ್ರ ಶಿಷ್ಟಾಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದೂ ಹೇಳಿದರು.

ಇದೇ ವೇಳೆ ಖಾದಿ ಬಳಕೆಗೂ ಕರೆ ಕೊಟ್ಟ ಮೋದಿ, ಖಾದಿ ಬಟ್ಟೆ ಬಳಕೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಕರೆ ನೀಡಿದ್ದಾರೆ. 

click me!