ಮಾಜಿ ಸಂಸದ ಸೇರಿ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆ, 2027ರ ಚುನಾವಣೆಗೂ ಮುನ್ನ ಬಿಗ್ ಟ್ವಿಸ್ಟ್

Published : Sep 26, 2026, 03:12 PM IST
Rahul Gandhi, Mallikarjun Kharge

ಸಾರಾಂಶ

ಮಾಜಿ ಸಂಸದ ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. 2027ರ ವಿಧಾನಸಭಾ ಚುನಾವಣೆಗೂ ಮುನ್ನ ನಾಯಕರ ಕಾಂಗ್ರೆಸ್ ಸೇರ್ಪಡೆ ರಾಜಕೀಯ ಹೊಸ ಲೆಕ್ಕಾಚಾರದ ಚರ್ಚೆಗೆ ಕಾರಣವಾಗಿದೆ.

ಲಖನೌ (ಸೆ.26) ದೇಶದಲ್ಲಿ ರಾಜಕೀಯ ಕೋಲಾಹಲಗಳ ನಡುವೆ ಪಕ್ಷ ಸೇರ್ಪಡೆಗಳು ನಡೆಯುತ್ತಿದೆ. ಇದೀಗ ಕಾಂಗ್ರೆಸ್ ಪಕ್ಷ ಬಲಪಡಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಮಾಜಿ ಸಂಸದ ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. 2027ರ ಉತ್ತರ ಪ್ರದೇಶ ಚುನಾವಣೆ ಬೆನ್ನಲ್ಲೇ ನಾಯಕರ ಕಾಂಗ್ರೆಸ್ ಸೇರ್ಪಡೆ ಲೆಕ್ಕಾಚಾರ ಬಿಗಿಗೊಳಿಸಿದೆ. ಮಾಜಿ ಸಂಸದ ಅಮಿರ್ ಅಲಂ ಖಾನ್ ಹಾಗೂ ಪುತ್ರ ನವಾಜಿಶ್ ಅಲಂ ಖಾನ್ ಇಬ್ಬರು ಉತ್ತರ ಪ್ರದೇಶ ಕಾಂಗ್ರೆಸ್ ಸೇರಿಕೊಂಡಿದ್ದಾರೆ.ಇದರ ಜೊತೆಗೆ ಜಿಲ್ಲಾ ಮುಖಂಡರು ಸೇರಿದಂತೆ ಸ್ಥಳೀಯ ನಾಯಕರು ಕಾಂಗ್ರೆಸ್ ಸೇರಿಕೊಂಡಿದ್ದಾರೆ.

ಪ್ರಮುಖ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ

ಅಸಾದುದ್ದೀನ್ ಒವೈಸಿಯ ಎಐಎಂಐಎಂ, ಅಜಾದ್ ಸಮಾಜ್ ಪಾರ್ಟಿ, ಆಮ್ ಆದ್ಮಿ ಪಾರ್ಟಿ, ರಾಷ್ಟ್ರೀಯ ಲೋಕ ಅದಾಲತ್ ಪಾರ್ಟಿಯ ನಾಯಕರು ಇದೀಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಈ ಪೈಕಿ ಮಾಜಿ ಸಂಸದ ಅಮಿರ್ ಅಲಂ ಖಾನ್ ಕಳೆದ ಒಂದು ದಶಕದಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಲೋಕಸಭೆ ಸಂಸದನಾಗಿಯೂ ಆಯ್ಕೆಯಾಗಿದ್ದಾರೆ. ಕೈರಾನ ಲೋಕಸಭಾ ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿರುವ ಅಮಿರ್ ಅಲಂ ಖಾನ್ ಇದೀಗ ಉತ್ತರ ಪ್ರದೇಶ ಕಾಂಗ್ರೆಸ್ ಸೇರ್ಪಡೆಯಿಂದ ಹೊಸ ಲೆಕ್ಕಾಚಾರಗಳು ಶುರುವಾಗಿದೆ.

ಕಾಂಗ್ರೆಸ್ ಹೊಸ ಲೆಕ್ಕಾಚಾರ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಬಲಗೊಳಿಸಲು ನಿರಂತರ ಕೆಲಸ ಮಾಡುತ್ತಿದೆ. 2023ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಉತ್ತಮ ನಿರ್ವಹಣೆ ತೋರಿತ್ತು. ಇಂಡಿಯಾ ಒಕ್ಕೂಟದ ಮೂಲಕ ಸಮಾಜವಾದಿ ಪಾರ್ಟಿ ಬಿಜೆಪಿ ಮತ ಸೆಳೆದು ಪ್ರಮುಖ ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಸಾಥ್ ನೀಡಿತ್ತು. ಇದೇ ವಿಶ್ವಾಸದಲ್ಲಿರುವ ಕಾಂಗ್ರೆಸ್ ಈ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತಗಳನ್ನು ವಿಭಜನೆ ಮಾಡುವಲ್ಲಿ ಯಶಸ್ವಿಯಾದರೆ ಸಮಾಜವಾದಿ ಅಥವಾ ಇತರ ಪ್ರಾದೇಶಿಕ ಪಕ್ಷಗಳ ಜೊತೆ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದರೆ ದೆಹಲಿಯಲ್ಲಿ ಅಧಿಕಾರಿ ಹಿಡಿಯುವುದು ಸುಲಭದ ಮಾತು ಎಂಬುದು ಕಾಂಗ್ರೆಲ್ ಲೆಕ್ಕಾಚಾರ.

ಆಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ನಾಯಕ ಅವಧೇಶ್ ಪ್ರಸಾದ್ ಗೆಲುವು ಬಿಜೆಪಿ ತೀವ್ರ ಹಿನ್ನಡೆ ತಂದಿತ್ತು. ಜೊತೆಗೆ ಈ ಬಾರಿ ಆಯೋಧ್ಯೆ ಹುಂಡಿ ಕಳವು ಪ್ರಕರಣ ಮುಂದಿಟ್ಟುಕೊಂಡು ಆಯೋಧ್ಯೆ ಲೋಕಸಭಾ ವ್ಯಾಪ್ತಿಯಲ್ಲಿ ಬರವು ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಸೆಳೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ನಾಯಕರ ಸೇರ್ಪಡೆ ಪ್ರಮುಖ ಘಟ್ಟವಾಗಿದೆ.

2027ರಲ್ಲಿ ಉತ್ತರ ಪ್ರದೇಶ ಗೆಲ್ಲಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಯುಪಿ ಗೆದ್ದರೆ ಮಾತ್ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವುದು ಮಾತ್ರವಲ್ಲ, ದೆಹಲಿಯಲ್ಲಿ ಅಧಿಕಾರ ಹಿಡಿಯಲು ಸಾಧ್ಯ ಎಂದು ಕಾಂಗ್ರೆಸ್ ಭಾರಿ ಲೆಕ್ಕಾಚಾರ ಹಾಕುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಪಕ್ಷಗಳ ಗ್ಯಾನೇಶ್ ಕುಮಾರ್ ಇಂಪೀಚ್‌ಮೆಂಟ್ ಹೋರಾಟಕ್ಕೆ ಹಿನ್ನಡೆ, Ex ಅಟಾರ್ನಿ ಸ್ಫೋಟಕ ಹೇಳಿಕೆ
ಬಾಗೇಶ್ವರ ಧಾಮ ಧೀರೇಂದ್ರ ಶಾಸ್ತ್ರಿ ವಿರುದ್ಧ ‘ಪುತ್ರಯೋಗ’ ವಂಚನೆ ಆರೋಪ, ನಾಲ್ಕನೇ ಬಾರಿಯೂ ಹೆಣ್ಣು ಮಗು ಜನನ!