
ನವದೆಹಲಿ (ಸೆ.26) ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಭಾರಿ ಅಕ್ರಮ ನಡೆದಿದೆ. ಕೇಂದ್ರ ಬಿಜೆಪಿ ಸರ್ಕಾರದ ಅಣಿತಿಯಂತೆ ಕೋಟಿ ಕೋಟಿ ಮತದಾರರ ಹೆಸರು ಡಿಲೀಟ್ ಮಾಡಿ ಮತದಾನದ ಹಕ್ಕು ಕಸಿದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪವನ್ನು ಪ್ರತಿಪಕ್ಷಗಳು ಮಾಡಿದೆ. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಗ್ಯಾನೇಶ್ ಕುಮಾರ್ ವಿರುದ್ಧ ಇಂಪೀಚ್‌ಮೆಂಟ್‌ಗೆ ಮುಂದಾಗಿದೆ. ಗ್ಯಾನೇಶ್ ಕುಮಾರ್‌ಗೆ ವಜಾಗೆ ಆಗ್ರಹಿಸಿ ಹೋರಾಟ ತೀವ್ರಗೊಳ್ಳುತ್ತಿದೆ. ಇದರ ನಡುವೆ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಪಕ್ಷಗಳ ಇಂಪೀಚ್‌ಮೆಂಟ್ ಹೋರಾಟಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಜಾಗೆ ಆಗ್ರಹಿಸಿ ಪ್ರತಿಪಕ್ಷಗಳು ನಡೆಸುತ್ತಿರುವವ ಹೋರಾಟಕ್ಕೆ ಯಾವುದೇ ಸಾಂವಿಧಾನಿಕ ಆಧಾರವಿಲ್ಲ ಎಂದು ಮುಕುಲ್ ರೋಹ್ಟಗಿ ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳು ಗಂಭೀರ ಆರೋಪದಲ್ಲಿ ಹಲವು ಲೋಪಗಳಿವೆ. ಮೂವರು ಚುನಾವಣಾ ಆಯುಕ್ತರ ಹೇಳಿಕೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಇದು ಆರೋಗ್ಯಕರ ಪ್ರಜಾಪ್ರಭುತ್ವ ಲಕ್ಷಣವಾಗಿದೆ. ಈ ಭಿನ್ನಾಭಿಪ್ರಾಯ ಮುಂದಿಟ್ಟುಕೊಂಡು ವಜಾಗೆ ಆಗ್ರಹಿಸಲು ಸಾಧ್ಯವಿಲ್ಲ. ಇದಕ್ಕೆ ಸಾಂವಿಧಾನಿಕವಾಗಿ ಯಾವುದೇ ಆಧಾರವೂ ಇಲ್ಲ. ಪ್ರತಿಪಕ್ಷಗಳ ಆರೋಪದಲ್ಲಿ ಹಲವು ಅಸ್ಪಷ್ಟತೆಗಳಿವೆ. ಸತ್ಯಾಂಶಕ್ಕೆ ದೂರವಿದೆ ಎಂದು ಮುಕುಲ್ ರೋಹ್ಟಗಿ ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಎಲೆಕ್ಷನ್ ಕಮಿಷನ್ ಆಯುಕ್ತರಾದ ಸುಖ್‌ಬೀರ್ ಸಂಧು ಹಾಗೂ ವಿವೇಕ್ ಜೋಷಿ 14 ಆಡಳಿತಾತ್ಮಕ ಟಿಪ್ಪಣಿ ಮಾಡಿದ್ದಾರೆ. ಈ ಟಿಪ್ಪಣಿಯನ್ನು ಮುಖ್ಯ ಆಯುಕ್ತರಾದ ಗ್ಯಾನೇಶ್ ಕುಮಾರ್‌ಗೆ ಸಲ್ಲಿಸಿದ್ದಾರೆ. ಈ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದಾರೆ. ಮೂವರು ಆಯುಕ್ತರು ಬೇರೆ ಬೇರೇ ಅಭಿಪ್ರಾಯ ವ್ಯಕ್ತಪಡಿಸಬಹುದು. ಅಂತಿಮವಾಗಿ ಬಹುಮತದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಳಾಗುತ್ತಿದೆ. ಇದರ ನಡುವೆ ಏಕಮತ ಆದೇಶ ಹೊರಡಿಸಿದ್ದರೆ, ಪ್ರಸ್ತಾಪಿಸಿದ ವಿಚಾರಗಳ ಕುರಿತು ಭಿನ್ನಾಭಿಪ್ರಾಯ ಸರಿಪಡಿಸಿ ನಿರ್ಧಾರ ಘೋಷಿಸಲಾಗಿದೆ ಎಂದರ್ಥ ಎಂದು ರೋಹ್ಟಗಿ ಹೇಳಿದ್ದಾರೆ.
ರಾಹುಲ್ ಗಾಂಧಿ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಮುಕುಲ್ ರೋಹ್ಟಗಿ, ರಾಜಕೀಯ ನಾಯಕರು ಆರೋಪ ಮಾಡಲು ಅರ್ಹರಾಗಿದ್ದಾರೆ. ಆದರೆ ಇಲ್ಲಿ ಕಾನೂನಿನ ಪ್ರಕಾರ ಯಾವುದೇ ಆಧಾರವಿಲ್ಲ. ಸಂವಿಧಾನದ 324(5)ಪ್ರಕಾರ ಚುನಾವಣಾ ಮುಖ್ಯ ಆಯುಕ್ತರ ವಜಾಗೊಳಿಸಲು ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡಷ್ಟು ಮತ ಸಿಗಬೇಕು. ಇದು ಸಾಧ್ಯವಾದರೆ ಮಾತ್ರ ವಜಾಗೊಳಿಸಲು ಸಾಧ್ಯ ಎಂದು ಮುಕುಲ್ ರೋಹ್ಟಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ