ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ ಜೋಶಿ ಸ್ಥಿತಿ ಗಂಭೀರ

Published : May 25, 2023, 07:02 AM IST
ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ ಜೋಶಿ ಸ್ಥಿತಿ ಗಂಭೀರ

ಸಾರಾಂಶ

ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್‌ ಮನೋಹರ ಜೋಶಿ (85) ಅವರ ಸ್ಥಿತಿ ಗಂಭಿರವಾಗಿದೆ. ಮಿದುಳಿನ ರಕ್ತಸ್ರಾವದ ಕಾರಣ ಮಂಗಳವಾರ ಸಂಜೆ ಅವರನ್ನು ಪಿ.ಡಿ. ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್‌ ಮನೋಹರ ಜೋಶಿ (85) ಅವರ ಸ್ಥಿತಿ ಗಂಭಿರವಾಗಿದೆ. ಮಿದುಳಿನ ರಕ್ತಸ್ರಾವದ ಕಾರಣ ಮಂಗಳವಾರ ಸಂಜೆ ಅವರನ್ನು ಪಿ.ಡಿ. ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಅವರ ಸ್ಥಿತಿ ವಿಷಮಿಸಿದ್ದು, ಕೋಮಾ ಅವಸ್ಥೆಗೆ ಜಾರಿದ್ದಾರೆ ಎಂದು ಅವರ ಪುತ್ರ ಉನ್ಮೇಶ್‌ ಜೋಶಿ ಹೇಳಿದ್ದಾರೆ. 

ವೈದ್ಯರು ಕೂಡ ಹೇಳಿಕೆ ನೀಡಿ, ‘ಜೋಶಿ ಪ್ರಜ್ಞಾಹೀನರಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದಿದ್ದಾರೆ. ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹಾಗೂ ಪತ್ಮಿ ರಶ್ಮಿ ಠಾಕ್ರೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಜೋಶಿ ಆರೋಗ್ಯ ವಿಚಾರಿಸಿದರು. 1995ರಲ್ಲಿ ಜೋಶಿ ಅವರು ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿದ್ದರು. ಅವರು ಶಿವಸೇನೆಯ ಮೊದಲ ಮುಖ್ಯಮಂತ್ರಿ ಎನ್ನಿಸಿಕೊಂಡಿದ್ದರು. 1966ರಲ್ಲಿ ಶಿವಸೇನೆ ಸ್ಥಾಪನೆ ಆದಾಗಿನಿಂದಲೇ ಪಕ್ಷದ ಸದಸ್ಯರಾಗಿರುವ ಅವರು ಮಹಾರಾಷ್ಟ್ರ ವಿಪಕ್ಷ ನಾಯಕರಾಗಿ, ಮುಂಬೈ ಮೇಯರ್‌ ಆಗಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಭಾರಿ ಕೈಗಾರಿಕಾ ಸಚಿವರಾಗಿ ಹಾಗೂ ಲೋಕಸಭೆ ಸ್ಪೀಕರ್‌ ಆಗಿ ಕೆಲಸ ಮಾಡಿದ್ದಾರೆ.

ಮಹಿಳೆಯರಿಗೆ ಶೇ.50 ಟಿಕೆಟ್‌ ದರ ಎಫೆಕ್ಟ್‌: ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ ಖಾಲಿ ಖಾಲಿ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಧಾರ್ ಬಯೋಮೆಟ್ರಿಕ್ ಶಿಲ್ಪಿ, ಬೆಂಗಳೂರಿನ ಸರ್ವಂ AI ಕಂಪನಿ ಕಟ್ಟಿದ ವಿವೇಕ್ ರಾಘವನ್ ಈಗ TIME100 AI 2026 ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿ!
ನೇಪಾಳದ ಹೃದಯವಿದ್ರಾವಕ ಘಟನೆ, ಕೆಸರಿನಡಿ ಸಿಲುಕಿದ ಶವ ಮೇಲಕ್ಕೆತ್ತಿ ಚಿನ್ನ ಕದಿಯುತ್ತಿರುವ ಕಟುಕರು