ಮದ್ಯದಂಗಡಿಗೆ ಕಲ್ಲು ತೂರಿದ ಮಾಜಿ ಸಿಎಂ ಉಮಾಭಾರತಿ

Suvarna News   | Asianet News
Published : Mar 14, 2022, 10:04 AM ISTUpdated : Mar 14, 2022, 10:09 AM IST
ಮದ್ಯದಂಗಡಿಗೆ ಕಲ್ಲು ತೂರಿದ ಮಾಜಿ ಸಿಎಂ ಉಮಾಭಾರತಿ

ಸಾರಾಂಶ

ಅನಧಿಕೃತ ಮದ್ಯದಂಗಡಿಗಳ ಮೇಲೆ ಕ್ರಮಕ್ಕೆ ಆಗ್ರಹ ಮದ್ಯದಂಗಡಿ ಮೇಲೆ ಕಲ್ಲು ತೂರಿದ ಉಮಾಭಾರತಿ ಉಮಾಭಾರತಿ ಮಧ್ಯಪ್ರದೇಶದ ಮಾಜಿ ಸಿಎಂ, ಬಿಜೆಪಿ ನಾಯಕಿ

ಭೋಪಾಲ್: ರಾಜ್ಯದಲ್ಲಿ ಅನಧಿಕೃತ ಮದ್ಯದಂಗಡಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾಭಾರತಿ ಅವರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಭಾನುವಾರ ಮದ್ಯದಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾಭಾರತಿ ಅವರು ಮದ್ಯದ ಅಂಗಡಿಯೊಂದಕ್ಕೆ ಕಲ್ಲು ಎಸೆಯುವ ವೀಡಿಯೋವೊಂದನ್ನು ಸ್ವತಃ ಅವರೇ ತಮ್ಮ ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಅಲ್ಲದೇ  ಭೋಪಾಲ್‌ನ ಬರ್ಖೇಡಾ ಪಠಾನಿ ಆಜಾದ್ ನಗರದಲ್ಲಿರುವ ಲೇಬರ್ ಕಾಲೋನಿಯಲ್ಲಿನ ಮದ್ಯದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಭೋಪಾಲ್‌ನ (Bhopal) ಬರ್ಖೇಡಾ ಪಠಾನಿ ಆಜಾದ್ ನಗರದ ( Barkheda Pathani Azad Nagar), ಕಾರ್ಮಿಕರ ಕಾಲೋನಿಯಲ್ಲಿ ಮದ್ಯದ ಅಂಗಡಿಗಳ ದೊಡ್ಡ ಸಾಲೇ ಇದ್ದು, ಜನರಿಗೆ ನಿರಂತರ ಮದ್ಯವನ್ನು ಪೂರೈಸುತ್ತಿವೆ. ಇಲ್ಲಿರುವ ಮದ್ಯದಂಗಡಿಗಳು ಸರ್ಕಾರದ ನಿಯಮಕ್ಕೆ ವಿರುದ್ಧವಾಗಿವೆ ಎಂದು ಇಲ್ಲಿನ ನಿವಾಸಿಗಳು ಮತ್ತು ಮಹಿಳೆಯರು ಈ ಅಂಗಡಿಗಳ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲೆಲ್ಲಾ ಆಡಳಿತವು ಪ್ರತಿ ಬಾರಿಯೂ ಮದ್ಯದಂಗಡಿಯನ್ನು ತೆರವು ಮಾಡುವುದಾಗಿಯೂ ಭರವಸೆ ನೀಡಿತ್ತು. ಆದರೆ ಅನೇಕ ವರ್ಷಗಳಿಂದ ತೆರವು ಮಾತ್ರ ಮಾಡಿಲ್ಲ. ಇಂದು ನಾನು ಒಂದು ವಾರದೊಳಗೆ ಈ ಮದ್ಯದಂಗಡಿಳನ್ನು ಮುಚ್ಚುವಂತೆ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದೇನೆ ಎಂದು ಅವರು ಹೇಳಿದರು.

 

ರಾಜ್ಯದಲ್ಲಿ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಉಮಾಭಾರತಿ ಎಚ್ಚರಿಕೆ ನೀಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಈ ಮಾಜಿ ಕೇಂದ್ರ ಸಚಿವೆ (Union Minister) ಜನವರಿ 15 ರೊಳಗೆ ರಾಜ್ಯದಲ್ಲಿ ಮದ್ಯವನ್ನು ನಿಷೇಧಿಸದಿದ್ದರೆ ಬೀದಿಗಿಳಿಯುವುದಾಗಿ ಘೋಷಿಸಿದ್ದರು. ಆದರೆ, ಅವರ ಬೇಡಿಕೆಗೆ ವಿರುದ್ಧವಾಗಿ, ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರವು ಹೊಸ ಅಬಕಾರಿ ನೀತಿಯನ್ನು (excise policy) ಘೋಷಿಸಿತು. ಅಲ್ಲದೇ ಅವರು ನೀಡಿದ ಗಡುವಿನ ಎರಡು ದಿನಗಳ ನಂತರ ರಾಜ್ಯದಲ್ಲಿ ಮದ್ಯವನ್ನು ಅಗ್ಗವಾಗಿಸಿತ್ತು.

28 ವರ್ಷಗಳ ಬಳಿಕ ಬಾಬ್ರಿ ಮಸೀದಿ ಮಹಾತೀರ್ಪು: ಬಿಜೆಪಿ ನಾಯಕರ ಭವಿಷ್ಯ ನಿರ್ಧಾರ

ಎನ್‌ಡಿಟಿವಿ ವರದಿಯ ಪ್ರಕಾರ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ (Shivraj Singh) ಅವರ ಸರ್ಕಾರವು ವಿದೇಶಿ ಮದ್ಯದ (liquor) ಮೇಲಿನ ಅಬಕಾರಿ ಸುಂಕವನ್ನು ರಾಜ್ಯದಲ್ಲಿ ಶೇಕಡಾ 10 ರಿಮದ 13 ರಷ್ಟು ಕಡಿಮೆ ಮಾಡಿದೆ. ರಾಜ್ಯದ ಅಂಗಡಿಗಳು ವಿದೇಶಿ ಮದ್ಯ ಮತ್ತು ದೇಶಿಯ ಮದ್ಯವನ್ನು ಒಟ್ಟಿಗೆ ಮಾರಾಟ ಮಾಡಲು ಸಹ ಅನುಮತಿ ನೀಡಿದೆ. ರಾಜ್ಯದಲ್ಲಿ ದ್ರಾಕ್ಷಿಯ ಜೊತೆಗೆ ಕಪ್ಪು ಪ್ಲಮ್‌ನಿಂದ ವೈನ್ ತಯಾರಿಸಲು ಮತ್ತಷ್ಟು ಮದ್ಯ ಉತ್ಪಾದಕರಿಗೆ ಈಗ ಸರ್ಕಾರವೇ ಅನುಮತಿ ನೀಡಿದೆ. 

"ಬಾಬ್ರಿ ಮಸೀದಿ ಧ್ವಂಸ ಜವಾಬ್ದಾರಿ ಉಮಾಭಾರತಿ ಎಂದಿಗೂ ಹೊತ್ತಿಲ್ಲ"! 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್