
ಕರ್ಣವತಿ (ಗುಜರಾತ್) (ಮಾ.14): ಸ್ವದೇಶಿ ಹಾಗೂ ಸ್ವಾವಲಂಬಿ ದೇಶದ ನಿರ್ಮಾಣಕ್ಕಾಗಿ ಇಡೀ ಸಮಾಜವೇ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೈಜೋಡಿಸಬೇಕು ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರತಿನಿಧಿ ಸಭೆ ಕರೆ ನೀಡಿದೆ.
ರಾಷ್ಟೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಗುಜರಾತಿನ ಕರ್ಣವತಿಯಲ್ಲಿ 3 ದಿನಗಳ ವಾರ್ಷಿಕ ಅಖಿಲ ಭಾರತ ಪ್ರತಿನಿಧಿ ಸಭೆಯನ್ನು ಆಯೋಜಿಸಿತ್ತು. ಸಭೆಯಲ್ಲಿ ಆರ್ಥಿಕತೆಯನ್ನು ಸದೃಢಗೊಳಿಸಲು ‘ಭಾರತೀಯ ಮಾದರಿ’ಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಯಿತು. ‘ಭಾರತೀಯ ಮಾದರಿ’ಯೆಂದರೆ ಮಾನವ ಕೇಂದ್ರಿತ, ಪ್ರಕೃತಿ ಸ್ನೇಹಿ ಹಾಗೂ ಕೃಷಿ, ಗ್ರಾಮಾಧಾರಿತ ಕೈಗಾರಿಕೋದ್ಯಮ ಹಾಗೂ ವ್ಯಾಪಾರಕ್ಕೆ ಒತ್ತು ನೀಡುವುದಾಗಿದೆ.
ಅಲ್ಲದೇ ಗ್ರಾಮೀಣ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಮಹಿಳೆಯರಿಗೆ ಉದ್ಯೋಗ ಹಾಗೂ ಒಟ್ಟಾರೆ ಆರ್ಥಿಕ ವ್ಯವಸ್ಥೆಯಲ್ಲಿ ಅವರ ಭಾಗವಹಿಸುವ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಯಿತು. ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮಾಡಿ ವಿದೇಶಿ ಆಮದಿಗಳನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಸರ್ಕಾರದೊಂದಿಗೆ ಶಿಕ್ಷಣ ತಜ್ಞರು, ಉದ್ಯಮಿಗಳು, ಸಮುದಾಯ ಮುಖಂಡರು, ಸಾಮಾಜಿಕ ಸಂಸ್ಥೆಗಳು ತನ್ನೊಂದಿಗೆ ಕೈಜೋಡಿಸಬೇಕು ಎಂದು ಎಬಿಪಿಎಸ್ ಕರೆ ನೀಡಿದೆ.
RSS Mohan Bhagwat: ಕೇಂದ್ರ ಸರ್ಕಾರಕ್ಕೆ ಭಾಗವತ್ ಗಂಭೀರ ಸಲಹೆ, ನಮ್ಮ ಕಾಶ್ಮೀರ ವಾಪಸ್ ಪಡೆಯಿರಿ
ಈ ವೇಳೆ ಮಾತನಾಡಿದ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ‘ಭಾರತೀಯ ಸಮಾಜವನ್ನು ಒಂದು ರಾಷ್ಟ್ರವಾಗಿ ರೂಪಿಸುವ ಮತ್ತು ಭವಿಷ್ಯದ ಬಿಕ್ಕಟ್ಟುಗಳಿಂದ ರಾಷ್ಟ್ರವನ್ನು ರಕ್ಷಿಸುವ ಸಂಕಲ್ಪದೊಂದಿಗೆ ‘ಸ್ವ’ ಆಧಾರಿತ ಜೀವನದ ದೃಷ್ಟಿಕೋನವನ್ನು ಮರುಸ್ಥಾಪಿಸಲು ಸ್ವಾತಂತ್ರ್ಯ 75 ನೇ ಅಮೃತ ಮಹೋತ್ಸವವು ಒಂದು ಸುವರ್ಣಾವಕಾಶವಾಗಿದೆ’ ಎಂದರು. ‘ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ದೇಶಾಭಿವೃದ್ಧಿ ಕಾರ್ಯದಲ್ಲಿ ತೊಡಗಿಸುವ ಮೂಲಕ ಭಾರತವನ್ನು ಮತ್ತೆ ವಿಶ್ವಗುರು ಮಾಡುವ ಸಂಕಲ್ಪ ಮಾಡೋಣ’ ಎಂದು ಕರೆ ನೀಡಿದರು.
ಧರ್ಮ ಸಂಸದ್‌ನಲ್ಲಿ ಕೊಟ್ಟ ಹೇಳಿಕೆಗಳು ಹಿಂದೂಗಳ ಮಾತಲ್ಲ: ರಾಷ್ಟ್ರೀಯ ಸ್ವಯಂಸೇವಕ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ 'ಧರ್ಮ ಸಂಸದ್' ಎಂಬ ಕಾರ್ಯಕ್ರಮದಲ್ಲಿ ನೀಡಿದ ಕೆಲವು ಹೇಳಿಕೆಗಳ ಬಗ್ಗೆ ಕಿಡಿ ಕಾರಿದ್ದು, ಇದು "ಹಿಂದೂಗಳ ಮಾತುಗಳು" ಅಲ್ಲ ಮತ್ತು ಹಿಂದುತ್ವವನ್ನು ಅನುಸರಿಸುವ ಜನರು ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದರು. ಲೋಕಮತದ ನಾಗ್ಪುರ ಆವೃತ್ತಿಯ ಸುವರ್ಣ ಮಹೋತ್ಸವದ ನಿಮಿತ್ತ ಲೋಕಮತ್ ಮೀಡಿಯಾ ಗ್ರೂಪ್ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ‘ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ’ ವಿಷಯದ ಕುರಿತು ಅವರು ಮಾತನಾಡಿದರು.
RSS Chief Mohan Bhagwat: ಆರೆಸ್ಸೆಸ್ ಜಿಮ್, ಸೇನಾ ಸಂಘಟನೆಯಲ್ಲ, ಕೌಟುಂಬಿಕ ವಾತಾವರಣ ಹೊಂದಿರುವ ಗುಂಪು!
ನಾನು ಎಂದಾದರೂ ಕೋಪದಿಂದ ಏನಾದರೂ ಹೇಳಿದರೆ ಅದು ಹಿಂದುತ್ವವಲ್ಲ, ಧರ್ಮ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಮಾತಲ್ಲ ಎಂದು ಭಾಗವತ್ ಹೇಳಿದ್ದಾರೆ. ವೀರ್ ಸಾವರ್ಕರ್ ಕೂಡ ಹಿಂದೂ ಸಮುದಾಯ ಒಗ್ಗಟ್ಟಾದರೆ ಭಗವದ್ಗೀತೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಯಾರನ್ನೂ ನಾಶಪಡಿಸುವ ಅಥವಾ ಹಾನಿ ಮಾಡುವ ಬಗ್ಗೆ ಅಲ್ಲ ಎಂದು ಹೇಳಿದ್ದರು ಎಂದು ಸಂಘದ ಮುಖ್ಯಸ್ಥರು ಹೇಳಿದ್ದಾರೆ. ದೇಶವು 'ಹಿಂದೂ ರಾಷ್ಟ್ರ'ವಾಗುವ ಹಾದಿಯನ್ನು ಅನುಸರಿಸುತ್ತಿರುವ ಬಗ್ಗೆ ಭಾಗವತ್, "ಇದು ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಬಗ್ಗೆ ಅಲ್ಲ. ನೀವು ನಂಬಿದರೂ ನಂಬದಿದ್ದರೂ ಇದು ಹಿಂದೂ ರಾಷ್ಟ್ರ. ನಾವು ಈ ಹಿಂದುತ್ವವನ್ನು ಅನುಸರಿಸುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ