ಕೇರಳದ ದೇಗುಲಗಳಲ್ಲಿಇನ್ನು ಕಣಗಲೆ ಹೂವು ಬಳಕೆಗೆ ನಿಷೇಧ ಜಾರಿ: ಕಾರಣವೇನು?

Published : May 10, 2024, 11:35 AM IST
ಕೇರಳದ ದೇಗುಲಗಳಲ್ಲಿಇನ್ನು ಕಣಗಲೆ ಹೂವು ಬಳಕೆಗೆ ನಿಷೇಧ ಜಾರಿ: ಕಾರಣವೇನು?

ಸಾರಾಂಶ

ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧೀನದಲ್ಲಿರುವ ದೇಗುಲಗಳು ಇನ್ನು ಮುಂದೆ ನೈವೇದ್ಯ ಮತ್ತು ಪ್ರಸಾದದಲ್ಲಿ ಕಣಗಿಲೆ ಹೂವು ಬಳಕೆ ಮಾಡಬಾರದು ಎಂದು ಆದೇಶಿಸಲಾಗಿದೆ. 

ತಿರುವನಂತಪುರ (ಮೇ.10): ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧೀನದಲ್ಲಿರುವ ದೇಗುಲಗಳು ಇನ್ನು ಮುಂದೆ ನೈವೇದ್ಯ ಮತ್ತು ಪ್ರಸಾದದಲ್ಲಿ ಕಣಗಿಲೆ ಹೂವು ಬಳಕೆ ಮಾಡಬಾರದು ಎಂದು ಆದೇಶಿಸಲಾಗಿದೆ. ಕಣಗಿಲೆ (ಗಣಗಲೆ, ಕರವೀರ) ಹೂವುಗಳಲ್ಲಿ ಕೆಲವೊಂದು ನಂಜಿನ ಅಂಶಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಡಿಬಿ ಅಧ್ಯಕ್ಷ ಪ್ರಶಾಂತ್‌, ‘ಅಲಪ್ಪುಳ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡಿದ ಕಣಗಿಲೆ ಹೂ ಸೇವಿಸಿ ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ಬೆಳಕಿಗೆ ಬಂದಿದೆ. ಅದೇ ರೀತಿ ಪಟ್ಟಣಂತಿಟ್ಟದಲ್ಲೂ ಇದೇ ರೀತಿಯ ಘಟನೆಗಳು ನಡೆದಿವೆ. ಆದ್ದರಿಂದ ಕಣಗಿಲೆ ಹೂವನ್ನು ದೇಗುಲಗಳಲ್ಲಿ ಬಳಸಬಾರದು ಎಂದು ಟಿಡಿಬಿ ತೀರ್ಮಾನಿಸಿದೆ. ಇದರ ಬದಲಾಗಿ ಗುಲಾಬಿ, ತುಳಸಿ, ತೇಚಿ, ದಾಸವಾಳ, ಮಲ್ಲಿಗೆ ಹೂಗಳನ್ನು ಬಳಸಬಹುದು ಎಂದು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪ: ಸಿಸಿಟೀವಿ ದೃಶ್ಯ ತೋರಿಸಿದ ಬಂಗಾಳ ಗೌರ್ನರ್‌

ಅರಳಿ ಹೂವುಗಳು ಹೆಚ್ಚು ವಿಷಕಾರಿ: ತಜ್ಞರು ಕಣಗಿಲೆ ಹೂವಿನ ವಿಷತ್ವದ ಬಗ್ಗೆ ಅಧ್ಯಯನ ನಡೆಸಿರುವ ಡಾ.ಬೆನಿಲ್ ಕೊಟ್ಟಕ್ಕಲ್, ಹೂವಿನಲ್ಲಿರುವ ಆಲ್ಕಲಾಯ್ಡ್‌ಗಳು ಕಾರ್ಡಿಯಾಕ್ ಗ್ಲೈಕೋಸೈಡ್‌ಗಳ ವರ್ಗದಲ್ಲಿ ಬರುತ್ತವೆ ಎಂದು ಹೇಳಿದ್ದಾರೆ. ನೆರಿಯಮ್ ಒಲಿಯಾಂಡರ್‌ನಲ್ಲಿರುವ ಈ ಆಲ್ಕಲಾಯ್ಡ್‌ಗಳು ನೇರವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತವೆ. ಕಾಂಡದೊಳಗೆ ಕಂಡುಬರುವ ಲ್ಯಾಟೆಕ್ಸ್‌ನಲ್ಲಿ ಆಲ್ಕಲಾಯ್ಡ್‌ಗಳ ಉಪಸ್ಥಿತಿಯು ತುಂಬಾ ಹೆಚ್ಚಾಗಿದೆ. ಹೆಚ್ಚು ಹೂ ಬಿಡಲು ಅಭಿವೃದ್ಧಿಪಡಿಸಿದ ಹೊಸ ತಳಿಯ ಕಣಗಿಲೆ ಗಿಡಗಳಲ್ಲಿ ಈ ವಿಷಾಂಶ ಹೆಚ್ಚಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಅದನ್ನು ಇನ್ನೂ ವೈಜ್ಞಾನಿಕವಾಗಿ ದೃಢಕರಿಸಿಲ್ಲಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್