ಭಾರತಕ್ಕೆ ಬಂದಿರುವ ವಿದೇಶಿ ಮಹಿಳೆ, ಭಾರತೀಯರಂತೆ ಕೆಂಪು ಲೆಹೆಂಗಾ, ದೊಡ್ಡದಾದ ದುಪ್ಪಟ್ಟ ಹಿಡಿದುಕೊಂಡು ತಾಜ್ ಮಹಲ್ ಮುಂದೆ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ನವದೆಹಲಿ: ಭಾರತದ ಸುಂದರ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ವಿದೇಶಿ ಪ್ರವಾಸಿಗರು ಹಿಂದೂಸ್ತಾನಕ್ಕೆ ಬರುತ್ತಾರೆ. ಭಾರತದ ಪ್ರವಾಸಿ ಸ್ಥಾನಗಳನ್ನು ಕಣ್ತುಂಬಿಕೊಂಡು, ಇಲ್ಲಿಯ ಸಂಸ್ಕೃತಿ, ಇತಿಹಾಸ ಮತ್ತು ಬಗೆ ಬಗೆಯ ಆಹಾರಗಳ ಬಗ್ಗೆ ಕೊಂಡಾಡುತ್ತಾರೆ. ಜಗತ್ತಿನ ಅತ್ಯದ್ಭುತಗಳಲ್ಲಿ ಒಂದಾಗಿರುವ ತಾಜ್‌ಮಹಲ್‌ಗೆ ಭೇಟಿ ನೀಡಿದ ವಿದೇಶಿ ಮಹಿಳೆ ಭಾರತೀಯರಂತೆ ಲಹೆಂಗಾ ಧರಿಸಿ, ಕೈಯಲ್ಲಿ ದುಪ್ಪಟ್ಟಾ ಹಿಡಿದು ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು, ಭಾರತಕ್ಕೆ ಬರಬೇಡಿ ಎಂದು ಬರೆದುಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ವಿದೇಶಿ ಮಹಿಳೆಯ ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಗ್ರಾದ ಯಮುನಾ ನದಿಯ ದಡದಲ್ಲಿರುವ ತಾಜ್ ಮಹಲ್ ನೋಡಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಪ್ರೇಮಸೌಧ ನೋಡುತ್ತಿದ್ದಂತೆ ಎಲ್ಲರೂ ವಾವ್ ತಾಜ್ ಎಂದು ಉದ್ಗರಿಸುತ್ತಾರೆ. ಇಂತಹ ಅದ್ಭುತ ಪ್ರವಾಸಿ ತಾಣದ ಮುಂದೆ ನಿಂತು ರೀಲ್ಸ್ ಮಾಡಿದ ವಿದೇಶಿ ಮಹಿಳೆಯ ವಿಡಿಯೋಗೆ ಹಲವು ಕಮೆಂಟ್‌ಗಳು ಬರುತ್ತಿವೆ. ಜನರು ಸಹ ವಿದೇಶಿ ಮಹಿಳೆಯ ವಿಡಿಯೋ ಹಾಗೂ ಆಕೆಯ ಮಾತಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಜೂನ್ 21ರಂದು naw.aria ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೈರಲ್ ಆಗಿರುವ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಮೂರು ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ.
ದಟ್ಟಾರಣ್ಯದಲ್ಲಿರೋ ಆದಿವಾಸಿಗಳ ಭೇಟಿಗೆ ಹೋದ ಆಸ್ಟ್ರೇಲಿಯಾ ಯೂಟ್ಯೂಬರ್‌ಗೆ ಆಯ್ತು ವಿಚಿತ್ರ ಅನುಭವ
ವಿದೇಶಿ ಮಹಿಳೆ ಜೀವನದಲ್ಲಿ ಸಾಹಸಕ್ಕೆ ನೀವು ಸಿದ್ಧರಿಲ್ಲದಿದ್ದರೆ ಭಾರತಕ್ಕೆ ಪ್ರಯಾಣಿಸಬೇಡಿ ಎಂದು ಹೇಳುವ ಮೂಲಕ ಇಲ್ಲಿ ಹಲವು ಸುಂದರ ಸ್ಥಳಗಳಿವೆ. ಹಾಗಾಗಿ ಭಾರತಕ್ಕೆ ಬರೋದಾದ್ರೆ ಇಲ್ಲಿ ಸೌಂದರ್ಯವನ್ನು ಸವಿಯಬೇಕು ಎಂದು ಮಹಿಳೆ ಹೇಳಿದ್ದಾಳೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದೊಂದು ಸುಂದರವಾದ ಸ್ಥಳವಾಗಿದ್ದು, ನೋಡುತ್ತಾ ಕುಳಿತರೇ ದಿನವಿಡೀ ಇಲ್ಲಿಯೇ ಇರಬೇಕೆಂದು ಅನ್ನಿಸುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಹಲವರು ಭಾರತದಲ್ಲಿರುವ ಸುಂದರ ಸ್ಥಳಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಆರಿಯಾ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮತ್ತು ಟ್ರಾವೆಲ್ ವ್ಲಾಗರ್ ಆಗಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಆರಿಯಾ, ಅಲ್ಲಿಯ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಾಗೆ ಭಾರತದ ರಸ್ತೆಬದಿ ಮಾರುಕಟ್ಟೆ ಮತ್ತು ಇಲ್ಲಿಯ ರುಚಿಕರವಾದ ತಿಂಡಿಗಳ ಬಗ್ಗೆಯೂ ಆರಿಯಾ ಬರೆದುಕೊಂಡಿದ್ದು, 65 ಸಾವಿರಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ವಿದೇಶದಲ್ಲಿ 58 ಸಾವಿರ ರೂಪಾಯಿ ದಂಡ ಪಾವತಿಸಿ ಕ್ಷಮೆ ಕೇಳಿದ ಫ್ಲೈಯಿಂಗ್ ಪಾಸ್‌ಪೋರ್ಟ್ ದಂಪತಿ