'ನಿಮ್ಮ ಮನೆಯ ಐರನ್ ಡೋಮ್' ಡೆಂಗ್ಯೂ ತಡೆಯಲು ಆನಂದ್‌ ಮಹೀಂದ್ರಾ ಹೊಸ ಐಡಿಯಾ!

By Santosh Naik  |  First Published Aug 26, 2024, 3:22 PM IST

ಡೆಂಗ್ಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳನ್ನು ಹೊಡೆದು ಹಾಕುವ ಹೊಸ ಕಾನ್ಸೆಪ್ಟ್‌ ಅನ್ನು ಉದ್ಯಮಿ ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದಾರೆ. ಚೀನಾದ ವ್ಯಕ್ತಿಯೊಬ್ಬರು ಸಂಶೋಧನೆ ಮಾಡಿರುವ ಈ ಮಷಿನ್‌, ಮನೆಯಲ್ಲಿರುವ ಸೊಳ್ಳೆಗಳನ್ನು ಹುಡುಕಿ ಕೊಂದು ಹಾಕುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.


ನವದೆಹಲಿ (ಆ.26): ದೇಶದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಏರಿಕೆ ಕಾಣುತ್ತಿವೆ. ಡೆಂಗ್ಯೂ ಜೊತೆಯಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆಗಳಾದ ಮಲೇರಿಯಾ ಕೂಡ ಏರಿಕೆ ಕಾಣುತ್ತಿದೆ. ಸೊಳ್ಳೆಗಳಿಂದ ರಕ್ಷಣೆ ಪಡೆದುಕೊಂಡಷ್ಟು ನೀವು ಈ ಮಾರಣಾಂತಿಕ ಕಾಯಿಲೆಗಳಿಂದ ದೂರವಾಗುತ್ತೀರಿ. ಆದರೆ, ಸೊಳ್ಳೆ ಕಾಯಿಲ್‌, ಸೊಳ್ಳೆ ಬ್ಯಾಟ್‌, ಸೊಳ್ಳೆ ಬತ್ತಿ ಏನೇ ಇದ್ರೂ ಸೊಳ್ಳೆಗಳು ಕಡಿಮೆಯಾಗ್ತಾ ಇಲ್ಲ ಅನ್ನೋರಿಗೆ ಉದ್ಯಮಿ ಆನಂದ್‌ ಮಹೀಂದ್ರಾ ಹೊಸ ಕಾನ್ಸೆಪ್ಟ್‌ಅನ್ನು ಹಂಚಿಕೊಂಡಿದ್ದಾರೆ. ಇದು ಮನೆಯಲ್ಲಿನ ಸೊಳ್ಳೆಗಳನ್ನು ಅತ್ಯಂತ ಕ್ವಿಕ್‌ ಆಗಿ ಹೊಡೆದುಹಾಕುತ್ತದೆ. ಸೊಳ್ಳೆಗಳನ್ನು ಹೊಡೆದುಹಾಕುವ ಈ ಮಷಿನ್‌ಗೆ ಆನಂದ್‌ ಮಹೀಂದ್ರಾ, 'ಮನೆಯ ಐರನ್‌ ಡೋಮ್‌..' ಎಂದು ಹೆಸರಿಟ್ಟಿದ್ದಾರೆ. ಇದರನ್ನು ಚೀನಾದ ವ್ಯಕ್ತಿಯೊಬ್ಬ ಸಂಶೋಧನೆ ಮಾಡಿದ್ದಾಗಿ ಅವರು ಬರೆದುಕೊಂಡಿದ್ದಾರೆ. ಇದು ಜಸ್ಟ್‌ ಮಷೀನ್‌ ಮಾತ್ರವಲ್ಲ, ಮನೆಯಲ್ಲಿರುವ ಸೊಳ್ಳೆಗಳನ್ನು ಹುಡುಕಿ ತಾನಾಗಿಯೇ ಅವುಗಳನ್ನು ಕೊಂದುಹಾಕುತ್ತದೆ.

ಎಕ್ಸ್‌ನಲ್ಲಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸೊಳ್ಳೆಗಳನ್ನು ಹುಡುಕಿ ಅವುಗಳನ್ನು ಕೊಲ್ಲುವ, ಫಿರಂಗಿ ಮಾದರಿಯ ಸಣ್ಣ ಮಷೀನ್‌ಅನ್ನು ತೋರಿಸಿದ್ದಾರೆ. ಈ ವಿಡಿಯೋದ ಜೊತೆ ಬರೆದುಕೊಂಡಿರುವ ಅವರು, 'ಮುಂಬೈನಲ್ಲಿ ಡೆಂಗ್ಯೂ ಹೆಚ್ಚುತ್ತಿರುವ ಕಾರಣ, ಸೊಳ್ಳೆಗಳನ್ನು ಹುಡುಕುವ ಮತ್ತು ನಾಶಪಡಿಸುವ ಚೀನಾದ ವ್ಯಕ್ತಿ ಕಂಡುಹಿಡಿದ ಈ ಸಣ್ಣ ಫಿರಂಗಿಯನ್ನು ಹೇಗೆ ಪಡೆಯುವುದು ಎಂದು ನಾನು ಲೆಕ್ಕಾಚಾರ ಮಾಡಲು ಪ್ರಯತ್ನಿಸುತ್ತಿದ್ದೇನೆ! ನಿಮ್ಮ ಮನೆಗೆ ಇದು ಐರನ್ ಡೋಮ್‌.' ಎಂದು ಅವರು ಬರೆದುಕೊಂಡಿದ್ದಾರೆ.

Tap to resize

Latest Videos

undefined

ಈ ವಿಡಿಯೋದ ಕೊನೆಯಲ್ಲಿ ಒಂದು ನೋಟ್‌ಬುಕ್‌ ಕೂಡ ಬರಲಿದ್ದು, ಅದರಲ್ಲಿ, ಸತ್ತ ಸೊಳ್ಳೆಗಳನ್ನು ಅಂಟಿಸಲಾಗಿದ್ದು, ಅದು ಯಾವ ಸಮಯಕ್ಕೆ ಸಾವು ಕಂಡಿದೆ ಎನ್ನುವ ಮಾಹಿತಿಯನ್ನೂ ನೀಡಲಾಗಿದೆ. ಆ ಮೂಲಕ ಮಷೀನ್‌ ಎಷ್ಟು ಪರ್ಫೆಕ್ಟ್‌ ಆಗಿ ಕೆಲಸ ಮಾಡುತ್ತದೆ ಅನ್ನೋದನ್ನೂ ತೋರಿಸುವ ಪ್ರಯತ್ನ ಮಾಡಲಾಗಿದೆ. ಮುಂಬೈನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ನಿಭಾಯಿಸುವ ಕಲ್ಪನೆಯನ್ನು ನೆಟಿಜನ್‌ಗಳು ಶ್ಲಾಘಿಸಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ಎದುರಿಸಲು ಯಂತ್ರವನ್ನು ಸ್ವಾಧೀನಪಡಿಸಿಕೊಳ್ಳಲು ಅನೇಕರು ಆಸಕ್ತಿಯನ್ನು ವ್ಯಕ್ತಪಡಿಸುವುದರೊಂದಿಗೆ ಈ ವಿನೂತನ ಪರಿಹಾರವು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಯನ್ನು ಪಡೆದಿದೆ.

ಬಿಎಸ್‌ಎ ಗೋಲ್ಡ್ ಸ್ಟಾರ್ 650 ಬೈಕ್ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?

ಪೋಸ್ಟ್‌ನಲ್ಲಿ ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಬರೆದಿದ್ದು,  ಆ ಫಿರಂಗಿಗಿಂತ ಹೆಚ್ಚಾಗಿ ಆತನ ಲಾಗ್‌ಬುಕ್‌ಅನ್ನು ಪಡೆಯಬೇಕು ಎನ್ನುವ ಆಸಕ್ತಿಯೇ ನನಗೆ ಹೆಚ್ಚಾಗಿದೆ. ಇನ್ನೊಂದಷ್ಟು ಶತಮಾನಗಳ ಬಳಿಕ ಉತ್ಖನನದ ವೇಳೆ ಇದು ಸಿಕ್ಕಾಗ ಎಂಥಾ ಸಂಪನ್ಮೂಲವಾಗಬಹುದು ಎಂದು ಊಹಿಸಿ. ನಮ್ಮ ಕಾಲದ ಸಮಸ್ಯೆಗಳು ಹಾಗೂ ನಮ್ಮ ದಿನಗಳನ್ನು ಇವುಗಳು ತಿಳಿಸಬಹುದು ಎಂದಿದ್ದಾರೆ. ಆವಿಷ್ಕಾರದ ವಿಚಾರ ಬಂದರೆ, ಚೀನಾ ವಿಶ್ವದ ಎಲ್ಲಾ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಚೀನಾ ವ್ಯಕ್ತಿ ನಾನಾ ಪಾಟೇಕರ್‌ ಅವರನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಮಳೆಗೆ ಛತ್ರಿ ಹಿಡಿಯುವ ಬದಲು ಧರಿಸಿ, ಹೊಸ ಐಡಿಯಾ ನೀಡಿದ ಆನಂದ್ ಮಹೀಂದ್ರ ವಿಡಿಯೋ!

With dengue on the rise in Mumbai, I’m trying to figure out how to acquire this miniature cannon, invented by a Chinese man, which can seek out & destroy mosquitoes!

An Iron Dome for your Home…

pic.twitter.com/js8sOdmDsd

— anand mahindra (@anandmahindra)
click me!