'ಐಟಿ'ಯಲ್ಲಿ ಪಾಕ್‌ ಪರಿಣತ: ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ IT ಯಾವುದು?

By Kannadaprabha NewsFirst Published Oct 2, 2022, 12:50 PM IST
Highlights

ವಿದೇಶಿ ವೇದಿಕೆಗಳಲ್ಲಿ ಭಾರತವನ್ನು, ಭಾರತದ ನೀತಿಗಳನ್ನು ಸಮರ್ಥವಾಗಿ ಸಮರ್ಥಿಸಿಕೊಂಡು ಭಾರತೀಯರ ಹೆಮ್ಮೆಗೆ ಪಾತ್ರರಾಗಿರುವ ವಿದೇಶಾಂಗ ಸಚಿವ ಜೈ ಶಂಕರ್ ಈಗ ತಮ್ಮ ಮತ್ತೊಂದು ಕಾಮೆಂಟ್‌ಗಳ ಮೂಲಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಡೋದರ: ವಿದೇಶಿ ವೇದಿಕೆಗಳಲ್ಲಿ ಭಾರತವನ್ನು ಸಮರ್ಥವಾಗಿ ಸಮರ್ಥಿಸಿಕೊಂಡು ಭಾರತೀಯರ ಹೆಮ್ಮೆಗೆ ಪಾತ್ರರಾಗಿರುವ ವಿದೇಶಾಂಗ ಸಚಿವ ಜೈ ಶಂಕರ್ ಈಗ ತಮ್ಮ ಮತ್ತೊಂದು ಕಾಮೆಂಟ್‌ಗಳ ಮೂಲಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ದೇಶಗಳು ಎರಡೂ ಸಹ ‘ಐಟಿ’ಯಲ್ಲಿ ಪರಿಣಿತರೆಂದು ಕರೆದಿರುವ ವಿದೇಶಾಂಗ ಸಚಿವ ಜೈ ಶಂಕರ್‌, ಭಾರತ ಮಾಹಿತಿ ತಂತ್ರಜ್ಞಾನ (ಐಟಿ)ದಲ್ಲಿ ಪರಿಣಿತಿ ಸಾಧಿಸಿದ್ದರೆ, ಪಾಕಿಸ್ತಾನ ಅಂತಾರಾಷ್ಟ್ರೀಯ ಭಯೋತ್ಪಾದನೆ (ಐಟಿ)ಯಲ್ಲಿ ಪರಿಣಿತಿ ಸಾಧಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ವಡೋದರದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು ಈ ಮಾತನ್ನಾಡಿದರು. ಹಿಂದಿನ ಕಾಲಕ್ಕೆ ಹೋಲಿಸಿದರೆ ಭಯೋತ್ಪಾದನೆಯ ಬಗ್ಗೆ ಜಗತ್ತಿನ ತಿಳುವಳಿಕೆ ಉತ್ತಮವಾಗಿದೆ. ಈಗ ಯಾವ ದೇಶಗಳೂ ಸಹ ಭಯೋತ್ಪಾದನೆಗೆ ಬೆಂಬಲ ಸೂಚಿಸುವುದಿಲ್ಲ. ಹಾಗಾಗಿ ಭಯೋತ್ಪಾದನೆಯನ್ನು ಬಳಸುವ ದೇಶಗಳು ಒತ್ತಡದಲ್ಲಿವೆ. ಭಾರತ ಉಗ್ರವಾದದ ವಿರುದ್ಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಆದರೆ ಜಗತ್ತಿನ ಮೇಲೆ ಅದರ ಪರಿಣಾಮವನ್ನು ಅರ್ಥಮಾಡಿಸಲು ಇತ್ತೀಚಿಗೆ ಹೆಚ್ಚು ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದರು.

‘‘Pak ನಾಯಕರಿಗೆ ಕಾಫಿ, ಬಿಸ್ಕತ್ತು; ಕೇಂದ್ರ ಸಚಿವ Jaishankarಗೆ ಅಮೆರಿಕ ಸರ್ಕಾರ ಡಿನ್ನರ್‌’’

ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಭಾರತದ ರಾಜತಾಂತ್ರಿಕ ನೀತಿಯನ್ನು ಶ್ಲಾಘಿಸಿದರು. ಪ್ರಧಾನಿಯ ರಾಜತಾಂತ್ರಿಕ ನೀತಿಗಳನ್ನು ಹಲವು ಸಮಯದ ಅವಧಿಯವರೆಗೆ  ಬದಲಾಯಿಸುವ ಅಗತ್ಯವಿಲ್ಲ ಎಂದು ಆಶಿಸುತ್ತೇವೆ ಎಂದು ಅವರು ಹೇಳಿದರು. ನೆರೆಯ ಪಾಕಿಸ್ತಾನದಂತೆ ಬೇರಾವ ದೇಶವೂ ಭಯೋತ್ಪಾದನೆ ನಡೆಸುವುದಿಲ್ಲ. ಆದರೆ ಪ್ರಧಾನಿ ಮೋದಿಯವರ ರಾಜತಾಂತ್ರಿಕತೆಯು ಇತರ ದೇಶಗಳು ಭಯೋತ್ಪಾದನೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ ಎಂದರು. 

ರೈಸಿಂಗ್ ಇಂಡಿಯಾ ಅಂಡ್ ದಿ ವರ್ಲ್ಡ್: ಫಾರಿನ್ ಪಾಲಿಸಿ ಇನ್ ಮೋದಿ ಎರಾ ಎಂಬ ಸಂವಾದ ಕಾರ್ಯಕ್ರಮದಲ್ಲಿ ಜೈ ಶಂಕರ್ ಮಾತನಾಡುತ್ತಿದ್ದರು. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯೂ ಆಗಿರುವ ಜೈಶಂಕರ್, ಪಾಕಿಸ್ಥಾನ ಈ ಎಲ್ಲಾ ಸಮಯದಲ್ಲಿ ಭಯೋತ್ಪಾದನೆಯನ್ನು ಹೇಗೆ ಉತ್ತೇಜಿಸುತ್ತಿದೆ ಎಂಬುದನ್ನು ಸಾಬೀತುಪಡಿಸಲು ಹಲವು ಉದಾಹರಣೆ ನೀಡಿದರು. 

ಇದೇ ವೇಳೆ ಆಪರೇಷನ್ ಗಂಗಾ ಮತ್ತು ವಂದೇ ಭಾರತ್‌ನ ಉದಾಹರಣೆಗಳನ್ನು ಉಲ್ಲೇಖಿಸಿದ ಜೈಶಂಕರ್, ಸಿದ್ಧಾಂತ ಮತ್ತು ನಂಬಿಕೆಗಳು ಮುಖ್ಯ ಆದರೆ ಪ್ರಧಾನಿ ಮೋದಿ ಪ್ರತಿನಿಧಿಸುವ ಚಿಂತನೆಯು ರಾಷ್ಟ್ರೀಯ ಚಿಂತನೆಯ ದೊಡ್ಡ ಭಾಗವಾಗಿದೆ ಎಂದು ಹೇಳಿದರು.
ಅಮೆರಿಕ ನೆಲದಲ್ಲಿ ನಿಂತು, ಯುಎಸ್‌-ಪಾಕ್‌ ಸಂಬಂಧದ 'ಮೌಲ್ಯ' ಪ್ರಶ್ನೆ ಮಾಡಿದ ಜೈಶಂಕರ್!

ಪಾಕ್ ಸರ್ಕಾರದ ಟ್ವಿಟ್ಟರ್ ಖಾತೆ ದೇಶದಲ್ಲಿ ಬ್ಯಾನ್

ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆ @GovtofPakistan ಅನ್ನು ದೇಶದಲ್ಲಿ ಬ್ಯಾನ್ ಮಾಡಲಾಗಿದೆ. ದೇಶದಲ್ಲಿ ನಿಷೇಧಕ್ಕೊಳಗಾದ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ (ಪಿಎಫ್‌ಐ) ಈ ಟ್ವಿಟ್ಟರ್ ಖಾತೆಯಿಂದ ಬೆಂಬಲ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ  ಭಾರತ ಸರ್ಕಾರ ಆ ಖಾತೆಯನ್ನು ದೇಶದಲ್ಲಿ ಬ್ಯಾನ್ ಮಾಡುವಂತೆ ಟ್ವಿಟ್ಟರ್‌ಗೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಇನ್ನು ಮುಂದೆ ಪಾಕಿಸ್ತಾನ ಸರ್ಕಾರಕ್ಕೆ ಸೇರಿದ ಟ್ವಿಟ್ಟರ್ ಖಾತೆ ಬಳಕೆದಾರರಿಗೆ ಸಿಗುವುದಿಲ್ಲ. ವ್ಯಾಂಕೋವರ್‌ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯು ಪಿಎಫ್ಐ ನಿಷೇಧದ ವಿರುದ್ಧ ಟ್ವಿಟ್ ಮಾಡಿ ವಿಶ್ವಸಂಸ್ಥೆ ಹಾಗೂಯುರೋಪ್ ದೇಶಗಳಿಗೆ ಟ್ಯಾಗ್ ಮಾಡಿತ್ತು. 

click me!