Allahabad High Court| ಮಕ್ಕಳ ಜೊತೆ ಮುಖ ಮೈಥುನ ಅಷ್ಟು ಗಂಭೀರವಲ್ಲ: ಹೈಕೋರ್ಟ್‌

By Kannadaprabha News  |  First Published Nov 24, 2021, 5:30 AM IST

* 10 ವರ್ಷದ ಶಿಕ್ಷೆ 7 ವರ್ಷಕ್ಕೆ ಇಳಿಸಿದ ಜಡ್ಜ್‌

* 10 ವರ್ಷದ ಬಾಲಕನೊಬ್ಬನ ಜತೆ ಮುಖಮೈಥುನ ನಡೆಸಿ 10 ವರ್ಷ ಜೈಲು ಶಿಕ್ಷೆಗೆ ಗುರಿ

* ಮಕ್ಕಳ ಜೊತೆ ಮುಖ ಮೈಥುನ ಅಷ್ಟು ಗಂಭೀರವಲ್ಲ: ಹೈಕೋರ್ಟ್‌


ಲಖನೌ(ನ.24): 10 ವರ್ಷದ ಬಾಲಕನೊಬ್ಬನ ಜತೆ ಮುಖಮೈಥುನ (Oral Sex) ನಡೆಸಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನ ಶಿಕ್ಷೆಯನ್ನು ಅಲಹಾಬಾದ್‌ ಹೈಕೋರ್ಟ್‌ (Allahabad High Court) 7 ವರ್ಷಕ್ಕೆ ಇಳಿಸಿದೆ. ಅಷ್ಟುಮಾತ್ರವಲ್ಲ, ‘ಮುಖಮೈಥುನ ಅಷ್ಟು ಗಂಭೀರ ಅಪರಾಧವಲ್ಲ’ ಎಂಬ ಕಾರಣವನ್ನು ತನ್ನ ಈ ಆದೇಶಕ್ಕೆ ಹೈಕೋರ್ಟ್‌ ನೀಡಿದೆ. ನ್ಯಾ| ಅನುಲ್‌ ಕುಮಾರ್‌ ಝಾ ಅವರು ಅಪರಾಧಿ ಸೋನು ಕುಶ್ವಾಹಾ ಎಂಬ ವ್ಯಕ್ತಿಗೆ ನೀಡಿದ್ದ ಶಿಕ್ಷೆಯನ್ನು (Punishment) 10ರಿಂದ 7 ವರ್ಷಕ್ಕೆ ಹಾಗೂ ದಂಡವನ್ನು 5 ಸಾವಿರಕ್ಕೆ ಇಳಿಸಿ ಪ್ರಕಟಿಸಿದ ಈ ಆದೇಶಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕುಶ್ವಾಹಾಗೆ ವಿಶೇಷ ಸತ್ರ ನ್ಯಾಯಾಲಯ 10 ವರ್ಷ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ ಮೊರೆ ಹೋಗಿದ್ದ. ಇದರ ವಿಚಾರಣೆ ನಡೆಸಿದ ನ್ಯಾ| ಝಾ, ‘ಪೋಕ್ಸೋ ಕಾಯ್ದೆಯ (POCSO Act) 6ನೇ ಪರಿಚ್ಛೇದ (ಕೆರಳಿಸಿ ಬಲವಂತಪಡಿಸಿ ಎಸಗುವ ಲೈಂಗಿಕ ದೌರ್ಜನ್ಯ) ಹಾಗೂ ಐಪಿಸಿ ಸೆಕ್ಷನ್‌ 377 (ಅಸಹಜ ಅಪರಾಧ) ಹಾಗೂ 506ರ (ಕ್ರಿಮಿನಲ್‌ ಪ್ರಚೋದನೆ) ಅಡಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗದು. ಬಲವಂತಪಡಿಸಿ ಎಸಗುವ ಲೈಂಗಿಕ ದೌರ್ಜನ್ಯ (Sexual Harassment) ಕುರಿತಾಗಿನ ಪೋಕ್ಸೋ ಕಾಯ್ದೆಯ 4ನೇ ಸೆಕ್ಷನ್‌ ಅಡಿ ಈ ಅಪರಾಧ ಬರುತ್ತದೆ. ಹೀಗಾಗಿ ಮಗುವಿನ ಬಾಯಿಯಲ್ಲಿ ಗುಪ್ತಾಂಗ ಇರಿಸಿದ ಅಪರಾಧಕ್ಕೆ ಸೆಕ್ಷನ್‌ 4 ಅನ್ವಯವಾಗುತ್ತದೆ. ಇದು ಸೆಕ್ಷನ್‌ 6ಕ್ಕಿಂತ ‘ಕಮ್ಮಿ ಅಪರಾಧ’ ಎನ್ನಿಸಿಕೊಳ್ಳುತ್ತವೆ’ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

undefined

ಪಾಕಿಸ್ತಾನ, ಬಾಲಕನ ಹತ್ಯೆ ಮಾಡಿ ಶವದ ಮೇಲೆ ಅತ್ಯಾಚಾರ

 

ಕಾಮುಕರು ಯಾವ ರೀತಿ ಅಟ್ಟಹಾಸ ಮರೆದಿದ್ದಾರೆ ಎನ್ನುವುದನ್ನು ಹೇಳಲು ಅಸಾಧ್ಯ.  ಬಾಲಕನ (Boy) ಹತ್ಯೆ (Murder) ಮಾಡಿ ಆತನ ಶವದ ಮೇಲೆ ಅತ್ಯಾಚಾರ (Rape) ಎಸಗಲಾಗಿದೆ. 

 ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ 11 ವರ್ಷದ ಹಿಂದು (Hindu) ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬರ್ಬರವಾಗಿ ಹತ್ಯೆ  ಮಾಡಲಾಗಿದೆ . ಈ ಪ್ರಕರಣವನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಾಲಕನ ಶವ ಖೈರ್‌ಪುರ್ ಮಿರ್ ಪ್ರದೇಶದ ಬಾಬರ್ಲೋಯ್ ಪಟ್ಟಣದಲ್ಲಿನ ಹಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ ಎಂದು ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ. . ಘಟನೆ ಕುರಿತು ಬಾಲಕನ ಸೋದರ ಸಂಬಂಧಿ ರಾಜ್‌ಕುಮಾರ್ ಮಾತನಾಡಿ, ನಮ್ಮ ಕುಟುಂಬ ಗುರುನಾನಕ್ ಜಯಂತಿ ಕಾರ್ಯಕ್ರಮಗಳಲ್ಲಿ  ಬಿಡುವಿಲ್ಲದೆ ತೊಡಗಿಸಿಕೊಂಡಿದ್ದರಿಂದ ಬಾಲಕ ಎಲ್ಲಿದ್ದಾನೆ ಎನ್ನುವುದು ಮೊದಲಿಗೆ ಗೊತ್ತಾಗಲಿಲ್ಲ. ನಂತರ ಕಾಮುಕರು ಪೈಶಾಚಿಕ ಕೃತ್ಯ ಎಸಗಿರುವುದು ಗೊತ್ತಾಯಿತು ಎಂದಿದ್ದಾರೆ.

ಬಾಲಕ  ಐದನೇ ತರಗತಿ ಓದುತ್ತಿದ್ದ, ಅಪ್ರಾಪ್ತ ಬಾಲಕನ ದೇಹದ ಮೇಲೆ ಚಿತ್ರಹಿಂಸೆ ನೀಡಿರುವ ಗುರುತು ಕಂಡುಬಂದಿವೆ ಎಂದು ಮಕ್ಕಳ ರಕ್ಷಣಾ ಪ್ರಾಧಿಕಾರ ಜುಬೇರ್ ಮಹೇರ್ ಹೇಳಿದ್ದಾರೆ. ಇದು  ಈ ಪ್ರಾಂತ್ಯದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಘೋರ ಪ್ರಕರಣ

click me!