ವಿದ್ಯುತ್ ಕಂಬ ಏರಿದ್ದಕ್ಕೆ ಬಲವಂತದ ಮದುವೆ ಎಂದು ವರನೊಬ್ಬ ಗಳಗಳನೇ ಅತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ನೌಕರಿ ಸಿಕ್ಕಿದ್ದೇ ತಪ್ಪಾಯ್ತು ಎಂದು ವರ ಅಳಲು ತೋಡಿಕೊಂಡಿದ್ದಾನೆ.
ನವದೆಹಲಿ: ಬಲವಂತದ ಮದುವೆ ಬಗ್ಗೆ ಎಲ್ಲರೂ ಕೇಳಿರುತ್ತೇವೆ. ಈ ಹಿಂದೆ ಪೋಷಕರು ತೋರಿಸುವ ಹುಡುಗ-ಹುಡುಗಿಯನ್ನು ಮದುವೆಯಾಗುತ್ತಿದ್ದರು. ಆದ್ರೆ ಇಂದು ಕಾಲ ಬದಲಾಗಿದ್ದು, ಹುಡುಗ/ಹುಡುಗಿ ತಮ್ಮಿಷ್ಟದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಇಂದು ಲವ್ ಮ್ಯಾರೇಜ್ ಟ್ರೆಂಡ್ ಹೆಚ್ಚಾಗಿದ್ದು, ಪೋಷಕರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ. ಅದರಲ್ಲಿಯೂ ಸರ್ಕಾರಿ ನೌಕರಿಯಲ್ಲಿರೋರಿಗೆ ಹೆಚ್ಚು ಡಿಮ್ಯಾಂಡ್ ಇರುತ್ತದೆ. ಸರ್ಕಾರಿ ನೌಕರಿ ಇದ್ರೆ ಜೀವನದ ಭದ್ರತೆ ಇರುತ್ತೆ. ಹಾಗಾಗಿ ಹುಡುಗ ಸರ್ಕಾರಿ ಕೆಲಸ ಮಾಡುತ್ತಿದ್ರೆ ಪೋಷಕರು ತಮ್ಮ ಮಕ್ಕಳನ್ನು ಕೊಡಲು ಮುಂದಾಗುತ್ತಾರೆ. ಆದರೆ ಇಲ್ಲೋರ್ವ ಯುವಕನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ದೊಡ್ಡ ತಪ್ಪಾಗಿದೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ವರ ಗಳಗಳನೇ ಕಣ್ಣೀರು ಹಾಕುತ್ತಿದ್ದಾನೆ. ಇದು ಬಲವಂತದ ಮದುವೆ ಎಂದು ಹೇಳುತ್ತಾ ಯುವಕ ಅತ್ತಿದ್ದಾನೆ. ayush_sharma_official_page1 ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. 18 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಯುವಕನೋರ್ವನಿಗೆ ಹಾರ ಹಾಕುವಂತೆ ಕೆಲವರು ಹೇಳುತ್ತಿರುತ್ತಾರೆ. ಯುವಕ ಕಣ್ಣೀರು ಹಾಕುತ್ತಲೇ ಇದು ಬಲವಂತದ ಮದುವೆ ಎಂದ ಹೇಳುತ್ತಾನೆ. ಈ ವೇಳೆ ಅಲ್ಲಿಗೆ ಬಂದ ವ್ಯ ಕ್ತಿ, ಏನಾಗ್ತಿದೆ ಇಲ್ಲಿ? ನೀನ್ಯಾಕೆ ಅಳುತ್ತಿದ್ದೀಯಾ ಎಂದು ಹೇಳುತ್ತಾನೆ. ಇದಕ್ಕೆ ಉತ್ತರಿಸೋ ಯುವಕ, ನಾನು ವಿದ್ಯುತ್ ಸಂಪರ್ಕ ಸರಿಪಡಿಸಲು ಕಂಬ ಏರಿದ್ದೆ. ಒಂದು ಕಡೆ ಈ ಮೇಡಮ್ ಸ್ನಾನ ಮಾಡುತ್ತಿದ್ದರು. ನನ್ನನ್ನು ನೋಡಿದ ಕೂಡಲೇ ಕೂಗಿಕೊಂಡರು. ನಾನು ಇವರನ್ನು ನೋಡಿ ಕೂಗಿಕೊಂಡೆ. ಅಷ್ಟರಲ್ಲಿ ಊರಿನವರೆಲ್ಲರೂ ಸೇರಿ ಬಲವಂತವಾಗಿ ಮದುವೆ ಮಾಡಿಸಿದರು ಎಂದು ಹೇಳುತ್ತಾನೆ.
ಇದನ್ನೂ ಓದಿ: ಹೂ ಮಾರ್ತಿದ್ದ ಬಾಲಕನಿಗೆ ಸರ್ಪ್ರೈಸ್ ಕೊಟ್ಟ ಅಪರಿಚಿತ; ಮುಗಳ್ನಕ್ಕು ಭಾವುಕರಾದ ನೆಟ್ಟಿಗರು, ವಿಡಿಯೋ ನೋಡಿ
undefined
ಕೆಲ ದಿನಗಳ ಹಿಂದೆಯಷ್ಟೇ ವಿದ್ಯುತ್ ಇಲಾಖೆಯಲ್ಲಿ ನನಗೆ ಸರ್ಕಾರಿ ಕೆಲಸ ಸಿಕ್ಕಿದೆ. ದೆಹಲಿಯಲ್ಲಿ ನನಗೆ ಗರ್ಲ್ ಫ್ರೆಂಡ್ ಇದ್ದಾಳೆ. ದಯವಿಟ್ಟು ನನ್ನನ್ನು ಸೇವ್ ಮಾಡಿ ಎಂದು ಯುವಕ ಕೈ ಮುಗಿಯುತ್ತಾನೆ. ಇದಕ್ಕೆ ಉತ್ತರ ಕೊಡುವ ವ್ಯಕ್ತಿ, ಒಳ್ಳೆಯ ಹುಡುಗಿ ಸಿಕ್ಕಿದ್ದು, ಜೀವನ ನಡೆಸಿಕೊಂಡು ಹೋಗಲು. ನನಗೆ ಕುಂಟಿ ಜೊತೆ ಮದುವೆ ಮಾಡಿಸಿದ್ರು. ಇಂದಿಗೂ ನಾನು ಕಷ್ಟಪಡುತ್ತಿದ್ದೇನೆ. ನೀನು ಕಂಬ ಏರಿದ್ದು ತಪ್ಪಲ್ಲ. ಸರ್ಕಾರಿ ನೌಕರಿ ಸಿಕ್ಕಿರೋದು ತಪ್ಪು ಎಂದು ಹೇಳಿ ಕೈಗೆ ಮೇಕೆಮರಿ ನೀಡಿ ಮುಂದಿನ ಜೀವನ ಒಳ್ಳೆಯದಾಗಲಿ ಎಂದು ಹಾರೈಸಿದ್ದಾನೆ.
ಈ ವಿಡಿಯೋದಲ್ಲಿ ನಡೆದಿರೋದೆಲ್ಲಾ ಸತ್ಯ ಅಲ್ಲ. ayush_sharma_official_page1 ಖಾತೆಯಲ್ಲಿ ಈ ರೀತಿಯ ತಮಾಷೆ ವಿಡಿಯೋಗಳನ್ನು ಕ್ರಿಯೇಟ್ ಮಾಡಲಾಗುತ್ತದೆ. ಯಾವುದಾದರೂ ಒಂದು ವಿಷಯನ್ನಿಟ್ಟುಕೊಂಡು ಫನ್ನಿ ವಿಡಿಯೋ ಮಾಡಿ ಅಪ್ಲೋಡ್ ಮಾಡಲಾಗುತ್ತದೆ.
ಇದನ್ನೂ ಓದಿ: ಬೈಕ್ ಮೇಲೆ ಹಿಂದೂ ಸ್ಟಿಕ್ಕರ್ ನೋಡಿ ಕೋಪಗೊಂಡ ಮಹಿಳೆ; ಮುಂದೇನಾಗಿದ್ದು? ವಿಡಿಯೋ ನೋಡಿ