Monuments and Heritage : ಸ್ಮಾರಕಗಳು ಮತ್ತು ಪರಂಪರೆಯ ಕುರಿತಾಗಿ ಜಾಗತಿಕ ವೆಬಿನಾರ್

By Suvarna NewsFirst Published Feb 9, 2022, 7:50 PM IST
Highlights

ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಕಾರ್ಯಕ್ರಮ
ಸ್ಮಾರಕಗಳು ಮತ್ತು ಪರಂಪರೆಯ ಕುರಿತಾಗಿ ಜಾಗತಿಕ ವೆಬಿನಾರ್
ಅಮೆರಿಕ ಸೇರಿದಂತೆ 20 ದೇಶಗಳು ಭಾಗಿ

ನವದೆಹಲಿ (ಫೆ. 9):  ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರವು ( National Monuments Authority) ಸ್ಮಾರಕಗಳ ಸಂರಕ್ಷಣೆಯ ರಾಷ್ಟ್ರೀಯ ಪರಂಪರೆ ಮತ್ತು ಅವುಗಳ ಪ್ರಾಮುಖ್ಯತೆಯ ಕುರಿತು ICCR (MEA) ಸಹಯೋಗದೊಂದಿಗೆ ಫೆಬ್ರವರಿ 11 ರಂದು ಜಾಗತಿಕ ವೆಬಿನಾರ್ ( global webinar) ಅನ್ನು ಆಯೋಜನೆ ಮಾಡಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ (Pt. Deendayal Upadhya) ಅವರ ಸ್ಮರಣಾರ್ಥವಾಗಿ ಈ ದಿನವನ್ನು ಆಯೋಜನೆ ಮಾಡಲಾಗುತ್ತಿದೆ. ಸ್ಮಾರಕಗಳು ಮತ್ತು ಪರಂಪರೆಯ ಸಂರಕ್ಷಣೆಯ ಕುರಿತು ವಿಶ್ವಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ, ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರವು ಈ ಕಾರ್ಯಕ್ರವನ್ನು ನಡೆಸಲಿದೆ. 'ಸ್ಮಾರಕಗಳ ಸಂರಕ್ಷಣೆ ಮತ್ತು ರಾಷ್ಟ್ರೀಯ ಪರಂಪರೆಯ ಸಂರಕ್ಷಣೆಗಾಗಿ ಅವುಗಳ ಪ್ರಾಮುಖ್ಯತೆ' ಎನ್ನುವ ವಿಷಯದಲ್ಲಿ ವೆಬಿನಾರ್ ಅನ್ನು ಆಯೋಜನೆ ಮಾಡಲಾಗಿದೆ.

ಸುಮಾರು 20 ದೇಶಗಳು ಈ ವೆಬ್‌ನಾರ್‌ನಲ್ಲಿ ಭಾಗವಹಿಸಲಿದೆ.  ಇದು ಸ್ಮಾರಕಗಳ ಸಂರಕ್ಷಣೆಗಾಗಿ ವಿಶ್ವದಲ್ಲೇ ನಡೆಯುತ್ತಿರುವ ಮೊದಲ ವೆಬಿನಾರ್ ಆಗಿದೆ.  ಬಾಂಗ್ಲಾದೇಶ, ಭೂತಾನ್, ಜಪಾನ್, ಇರಾನ್, ದಕ್ಷಿಣ ಆಫ್ರಿಕಾ, ವೆನೆಜುವೆಲಾ, ಇಸ್ರೇಲ್ ಮತ್ತು ಅಮೆರಿಕ ದೇಶಗಳೂ ಸಹ ಈ ವೆಬಿನಾರ್ ನಲ್ಲಿ ಭಾಗವಹಿಸಲಿದೆ. ಅದರೊಂದಿಗೆ ಇನ್ನೂ ಕೆಲವು ದೇಶಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇಡಲಾಗಿದ.ೆಸ್ಮಾರಕಗಳ ಸಂರಕ್ಷಣೆ ಕುರಿತು ಇದು ಮೊದಲ ಜಾಗತಿಕ ವೆಬ್‌ನಾರ್ ಆಗಿದ್ದು ಇದನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಸ್ಮರಣಾರ್ಥ ದಿನದಂದು ಆಯೋಜನೆ ಮಾಡಲಾಗಿದೆ.

ಹೆಚ್ಚಿನ ಸಂಖ್ಯೆಯ ವಿದ್ವಾಂಸರು/ರಾಜತಾಂತ್ರಿಕರು ರಾಷ್ಟ್ರೀಯ ಸ್ಮಾರಕಗಳು ಮತ್ತು ಪಾರಂಪರಿಕ ತಾಣಗಳನ್ನು ರಕ್ಷಿಸುವ ಮಹತ್ವದ ಕುರಿತು ಮಾತನಾಡಲು ಒಪ್ಪಿಕೊಂಡಿದ್ದಾರೆ. ಆ ಮೂಲಕ ಸ್ಮಾರಕಗಳನ್ನು ಕೆತ್ತುವಲ್ಲಿ ಶ್ರಮಿಸಿದ ಜನರ ಸ್ಮರಣೆಯನ್ನು ಮಾಡಲಿದ್ದಾರೆ.
 

ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ ನಡೆಸಲಿರುವ ಕುರಿತಾದ ಜಾಗತಿಕ ವೆಬಿನಾರ್ ನಲ್ಲಿ 20 ದೇಶಗಳು ಭಾಗವಹಿಸಲಿವೆ.
pic.twitter.com/MvUHOZtYN2

— Asianet Suvarna News (@AsianetNewsSN)


ಹಲವಾರು ದೇಶಗಳ ಸ್ಮಾರಕ ತಜ್ಞರು ಇರಲಿದ್ದಾರೆ:  ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ, ಸಂಸ್ಕೃತಿ ರಾಜ್ಯ ಸಚಿವ ಮೀನಾಕ್ಷಿ ಲೇಖಿ, ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಸಂಸದ ಡಾ. ವಿನಯ್ ಸಹಸ್ರಬುದ್ಧೆ ವೆಬಿನಾರ್ ನ ಉದ್ಘಾಟನಾ ಸಮಾರಂಭದ ವೇಳೆ ಇರಲಿದ್ದಾರೆ. ಸಂಸ್ಕೃತಿ ಕಾರ್ಯದರ್ಶಿ ಗೋವಿಂದ ಮೋಹನ್ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

Boycott Hyundai: ಕಾಶ್ಮೀರ ವಿಚಾರವನ್ನೆತ್ತಿ ತನಗೇ ಕುತ್ತು ತಂದುಕೊಂಡ ಹ್ಯುಂಡೈ!
ಭೂತಾನ್‌ನ ಖ್ಯಾತ ಸಂರಕ್ಷಣಾ ವಾಸ್ತುಶಿಲ್ಪಿ ಶ್ರೀಮತಿ ಪೇಮಾ, ಈಜಿಪ್ಟ್‌ನ ಮೊಹಮ್ಮದ್ ರೌಫ್ ಬದ್ರನ್, ಈಕ್ವೆಡಾರ್‌ನ ಡಾ. ಮರಿಯಾ, ಇರಾನ್‌ನ ಡಾ. ಮೊಹಮದ್ ಹೆಕ್ಮತ್, ಮ್ಯಾನ್ಮಾರ್‌ನ ಅಯುಮು ಕೊನಾಸುಕಾವಾದಿಂದ ಡಾ. ಪೈಟ್ ಫಿಯೋ ಕ್ಯಾವ್ ಸೇರಿದಂತೆ ಹಲವಾರು ಪ್ರಮುಖ ಸ್ಮಾರಕ ತಜ್ಞರು ಭಾಗವಹಿಸುತ್ತಿದ್ದಾರೆ. ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಅಧ್ಯಕ್ಷ ತರುಣ್ ವಿಜಯ್ (National Monuments Authority Chairman Tarun Vijay) ಮಾತನಾಡಿ, ಇದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಪ್ರೇರಿತವಾದ ಅತ್ಯಂತ ವಿಶಿಷ್ಟ ಮತ್ತು ಅಭೂತಪೂರ್ವ ಕಾರ್ಯಕ್ರಮವಾಗಿದೆ. ವಿದ್ವಾಂಸರು ಮತ್ತು ಆಸಕ್ತ ಯುವಕರಿಗೆ ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿ ಮೂಲಕ ಮುಕ್ತವಾಗಿ ಅವರು ಪಾಲ್ಗೊಳ್ಳಬಹುದು ಎಂದು ಹೇಳಿದ್ದಾರೆ.

ಈ ಲಿಂಕ್‌ಗಳ ಮೂಲಕವೂ ನೀವು ವೆಬ್‌ನಾರ್‌ನಲ್ಲಿ ಭಾಗವಹಿಸಬಹುದು
ಫೇಸ್ ಬುಕ್:  https://www.facebook.com/events/1271154926708589
ಟ್ವಿಟರ್: @nmanewdelhi
ಯೂಟ್ಯೂಬ್: https://youtu.be/onlkJelPktQ

Latest Videos

 

click me!