
ಇಸ್ಲಮಾಬಾದ್(ಫೆ.,09): ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಲ್ಲಿ ಮುಸ್ಲಿಮ್ ಹುಡುಗಿಯರು ಹಿಜಾಬ್ ಧರಿಸುವ ವಿಷಯ ಈಗ ಅಂತರರಾಷ್ಟ್ರೀಯ ವಿಷಯವಾಗಿದೆ. ಸದ್ಯ ಈಗ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜಾಯ್ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಆದಾಗ್ಯೂ, ಈ ವಿವಾದದ ಬಗ್ಗೆ ಧ್ವನಿ ಎತ್ತಿದ ಮಲಾಲಾ ಬೇರೇ ವಿಚಾರದಿಂದ ಟ್ರೋಲ್ ಆಗುತ್ತಿದ್ದಾರೆ.
ಹೌದು ಮಲಾಲಾ ಯೂಸುಫ್‌ಜಾಯ್ ತಮ್ಮ ಟ್ವೀಟ್‌ನಲ್ಲಿ, “ಹಿಜಾಬ್ ಧರಿಸಿದ ಹೆಣ್ಣು ಮಕ್ಕಳನ್ನು ಶಾಲೆಗಳಿಗೆ ಪ್ರವೇಶಿಸುವುದನ್ನು ತಡೆಯುವುದು ಭಯಾನಕ. ಮಹಿಳೆಯರ ಗುರಿ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕು" ಎಂದಿದ್ದರು.
Karnataka Hijab row ಹಿಜಾಬ್ ವಿವಾದ ಕಿಚ್ಚಿಗೆ ತುಪ್ಪ ಸುರಿದ ಪಾಕಿಸ್ತಾನ ಮೂಲದ ಮಲಾಲಾ!
ಆದರೀಗ ಹಿಜಾಬ್ ಧರಿಸುವ ವಿಚಾರವಾಗಿ ಧ್ವನಿ ಎತ್ತಿರುವ ಮಲಾಲಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅನೇಕ ಮಂದಿ ಮಲಾಲಾರ I am Malala ದಲ್ಲಿ ಉಲ್ಲೇಖಿಸಿದ ಕೆಲ ಆಯ್ದ ಅಂಶಗಳನ್ನು ಟ್ವೀಟ್ ಮಾಡಿ ಅವರ ನಿಲುವಿನ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಮಲಾಲಾ ತಮ್ಮ ಕೃತಿಯಲ್ಲಿ ಬುರ್ಖಾ ಧರಿಸುವುದು ಬಹುದೊಡ್ಡ ಶಿಕ್ಷೆ ಎಂದು ಹೇಳಿದ್ದರು. ಹೀಗಿರುವಾಗ ಭಾರತದ ವಿಚಾರ ಬಂದಾಗ ನಿಮ್ಮ ನಿಲುವು ಯಾಕೆ ಬದಲಾಯ್ತು ಎಂದು ಅನೇಕ ಮಂದಿ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಮಲಾಲಾ ಅವರನ್ನು ವಿರೋಧಿಸಿದರು
ಅದೇ ಸಮಯದಲ್ಲಿ, ಮಲಾಲಾ ಅವರ ಈ ಪೋಸ್ಟ್ ಅನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರೋಧಿಸಿದ್ದಾರೆ. ಈ ವಿಚಾರವಾಗಿ ಅವರು ಟ್ವೀಟ್ ಒಂದನ್ನೂ ಮಾಡಿದ್ದಾರೆ. ‘‘ಅಫ್ಘಾನಿಸ್ತಾನ, ಇರಾನ್ ಮತ್ತು ಪಾಕಿಸ್ತಾನದಲ್ಲಿ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಹುಡುಗಿಯರನ್ನು ಕೊಲ್ಲಲಾಗುತ್ತಿದೆ. ಪಾಕಿಸ್ತಾನದಲ್ಲಿ ಹಿಂದೂ ಮತ್ತು ಸಿಖ್ ಹೆಣ್ಣುಮಕ್ಕಳನ್ನು ಹಿಂದೂಗಳು ಎಂಬ ಕಾರಣಕ್ಕೆ ಹತ್ಯೆ ಮಾಡಲಾಗುತ್ತಿದೆ. ಅವರು ನಿಜವಾದ ಸಮಸ್ಯೆಗಳ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. ಮಲಾಲಾ ತೀವ್ರಗಾಮಿ ಇಸ್ಲಾಮಿಕ್ ಜಿಹಾದಿ ಅಜೆಂಡಾವನ್ನು ನಡೆಸುತ್ತಿದ್ದಾರೆ' ಎಂದು ಕಪಿಲ್ ಮಿಶ್ರಾ ಆರೋಪಿಸಿದ್ದಾರೆ.
Malala Gets Degree: ಆಕ್ಸ್‌ಫರ್ಡ್ ಪದವಿ ಪಡೆದ ಮಲಾಲಾಗೆ ಪತಿಯಿಂದ ಹೃದಸ್ಪರ್ಶಿ ಪೋಸ್ಟ್
ಸಿರ್ಸಾ ಕೂಡ ಮಲಾಲಾ ಅವರನ್ನು ನಿಂದಿಸಿದ್ದಾರೆ
ಅದೇ ಸಮಯದಲ್ಲಿ, ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಮಲಾಲಾ ಅವರನ್ನು ಟೀಕಿಸಿದ್ದಾರೆ. ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಸಿಖ್ ಬಾಲಕಿಯರ ಬಲವಂತದ ಮತಾಂತರದಂತಹ ವಿಷಯಗಳ ಬಗ್ಗೆ ಮಲಾಲಾ ಏಕೆ ಮಾತನಾಡಲಿಲ್ಲ ಎಂದು ಸಿರ್ಸಾ ಪ್ರಶ್ನಿಸಿದ್ದಾರೆ. ಇದು ವಿಚಿತ್ರ! ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಸಿಖ್ ಹುಡುಗಿಯರ ಬಲವಂತದ ಮತಾಂತರದಂತಹ ಇತರ ಪ್ರಮುಖ ವಿಷಯಗಳ ಬಗ್ಗೆ ಮಲಾಲಾ ಎಂದಿಗೂ ಮಾತನಾಡಲಿಲ್ಲ. ಆದರೆ ಇಂದು ಸತ್ಯಾಂಶ ಪರಿಶೀಲಿಸದೆ ಟ್ವೀಟ್ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ