ಮನೆಬಾಗಿಲಿಗೆ ಮದ್ಯ ಪೂರೈಕೆ; ಸ್ವಿಗ್ಗಿಯಿಂದ ಭರ್ಜರಿ ಆಫರ್!

By Suvarna News  |  First Published May 21, 2020, 7:58 PM IST

ಮನೆಬಾಗಿಲಿಗೆ ಆನ್‌ಲೈನ್ ಮೂಲಕ ಮದ್ಯ ಪೂರೈಕೆಗೆ ಹಲವು ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಇದೀಗ ಕೊರೋನಾ ವೈರಸ್ ಸಮಯದಲ್ಲಿ ಆನ್‌ಲೈನ್ ಡೆಲಿವರಿ ಹೆಚ್ಚು ಸುರಕ್ಷತೆ. ಇದೀಗ ಆಹಾರ ಡೆಲಿವರಿ ಆ್ಯಪ್ ಸ್ವಿಗ್ಗಿ, ಮನೆಬಾಗಿಲಿಗೆ ಎಣ್ಣೆ ಡೆಲಿವರಿ ಮಾಡುತ್ತಿದೆ. ಆ್ಯಪ್ ಮೂಲಕ ವೈನ್ ಶಾಪ್ ವಿಭಾಗದಲ್ಲಿ ಕ್ಲಿಕ್ ಮಾಡಿ, ಮದ್ಯ ಆರ್ಡರ್ ಮಾಡಿದರೆ, ಕುಳಿತಲ್ಲೇ ಕಿಕ್ ಏರಿಸಬಹುದು.


ಬೆಂಗಳೂರು(ಮೇ.21): ಭಾರತದಲ್ಲಿ ಮುಂಚೂಣಿಯಲ್ಲಿರುವ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್ ಫಾರ್ಮ್ ಆಗಿರುವ ಸ್ವಿಗ್ಗಿ(Swiggy) ತನ್ನ ಆ್ಯಪ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಮದ್ಯವನ್ನು ತಲುಪಿಸುವ ಸೇವೆಯನ್ನು ಜಾರ್ಖಂಡ್ ರಾಜ್ಯದಲ್ಲಿ ಆರಂಭಿಸಿದೆ. Swiggy ಆ್ಯಪ್‌ನಲ್ಲಿನ ವೈನ್ ಶಾಪ್ ವಿಭಾಗದ ಮೂಲಕ  ಈ ಸೇವೆಯನ್ನು ನೀಡುತ್ತಿದೆ.  ಜಾರ್ಖಂಡ್ ರಾಜ್ಯ ಸರ್ಕಾರದ ಅನುಮತಿ ಪಡೆದಿರುವ ಸ್ವಿಗ್ಗಿ, ರಾಜಧಾನಿ ರಾಂಚಿಯಲ್ಲಿ ಈ ಸೇವೆಯನ್ನು ಆರಂಭಿಸಿದೆ. ಈ ವಾರದೊಳಗೆ ರಾಜ್ಯದ ಇನ್ನೂ ಕೆಲವು ನಗರಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗುತ್ತದೆ.

ಮದ್ಯ ಮಾರಾಟಕ್ಕೂ ಮೊಬೈಲ್‌ ವ್ಯಾನ್‌! ಮನೆ ಬಾಗಿಲಿಗೇ ಬಾಟಲ್

Latest Videos

undefined

ಮದ್ಯವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸಂಬಂಧ ಅನುಮತಿ ಪಡೆಯಲು ವಿವಿಧ ರಾಜ್ಯ ಸರ್ಕಾರಗಳೊಂದಿಗೆ  Swiggy ಮಾತುಕತೆ ನಡೆಸುತ್ತಿದೆ. ಸರ್ಕಾರಗಳಿಂದ ಅನುಮತಿ ದೊರೆತ ತಕ್ಷಣ ಅಲ್ಲಿಯೂ ಈ ಸೇವೆಯನ್ನು ಆರಂಭಿಸಲಾಗುತ್ತದೆ.

ಮದ್ಯವನ್ನು ಸರಬರಾಜು ಮಾಡುವ ಸಂದರ್ಭದಲ್ಲಿ ಕಾನೂನುಗಳನ್ನು ಪಾಲಿಸಲಾಗುತ್ತದೆ. ಇದಕ್ಕಾಗಿ  Swiggy ಮದ್ಯಕ್ಕೆ ಆರ್ಡರ್ ಮಾಡುವವರ ವಯಸ್ಸು, ಬಳಕೆದಾರರ ಅಧಿಕೃತತೆ ಪರಿಶೀಲನೆ ಸೇರಿದಂತೆ ಮತ್ತಿತರೆ ಮಾನದಂಡಗಳನ್ನು ಅನುಸರಿಸುತ್ತದೆ.. ಮದ್ಯವನ್ನು ಆರ್ಡರ್ ಮಾಡುವ ಗ್ರಾಹಕರು ತಮ್ಮ ವಯಸ್ಸನ್ನು ದೃಢೀಕರಣ ಮಾಡುವ ಸರ್ಕಾರದ ಗುರುತಿನ ಚೀಟಿ ಮತ್ತು ತಮ್ಮ ಸೆಲ್ಫಿಯನ್ನು ಅಪ್ ಲೋಡ್ ಮಾಡಬೇಕು. ಎಲ್ಲಾ ಆರ್ಡರ್ ಗಳಿಗೆ ವಿನೂತನವಾದ ಒಟಿಪಿ(OTP) ಇರಲಿದೆ. ಡೆಲಿವರಿ ಸಂದರ್ಭದಲ್ಲಿ ಈ ಒಟಿಪಿಯನ್ನು ನೀಡಬೇಕಾಗುತ್ತದೆ. ರಾಜ್ಯ ಸರ್ಕಾರದ ಮಿತಿಗಿಂತ ಹೆಚ್ಚು ಪ್ರಮಾಣದ ಮದ್ಯವನ್ನು ಗ್ರಾಹಕರು ಆರ್ಡರ್ ಮಾಡುವಂತಿಲ್ಲ.

ಮದ್ಯಕ್ಕೆ ಆರಂಭದ ಉತ್ಸಾಹ ಈಗಿಲ್ಲ: ಆದಾಯದಲ್ಲಿ ಭಾರೀ ಕುಸಿತ!.

`ಸಾಂಕ್ರಾಮಿಕ ಕಂಡು ಬಂದ ದಿನದಿಂದ ಸ್ವಿಗ್ಗಿ ನಿರಂತರವಾಗಿ ಗ್ರಾಹಕರ ನೋವನ್ನು ನೀಗಿಸುವತ್ತ ಕಾರ್ಯ ನಿರತವಾಗಿದೆ. ಸ್ಥಳೀಯ ಮಟ್ಟದ ಸರ್ಕಾರಗಳ ನೆರವಿನಿಂದ ಇದು ಸಾಧ್ಯವಾಗಿದೆ. ನಮ್ಮಲ್ಲಿ ಲಭ್ಯವಿರುವ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ಬಳಸಿಕೊಂಡು ಇಂತಹ ಸೇವೆಗಳನ್ನು ನೀಡುತ್ತಿದ್ದೇವೆ. ದಿನಸಿ ಪದಾರ್ಥಗಳು ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ನಾವು ಗ್ರಾಹಕರ ಮನೆ ಬಾಗಿಲಿಗೆ ಮದ್ಯವನ್ನು ಜವಾಬ್ದಾರಿಯುತವಾಗಿ ತಲುಪಿಸುತ್ತಿದ್ದೇವೆ. ಈ ಮೂಲಕ ನಾವು ರೀಟೇಲ್ ಔಟ್ ಲೆಟ್ ಗಳ ವ್ಯವಹಾರವನ್ನು ವೃದ್ಧಿಯಾಗಲು ನೆರವಾಗುತ್ತಿದ್ದೇವೆ. ಅಲ್ಲದೇ, ಈ ಔಟ್ ಲೆಟ್ ಗಳಲ್ಲಿ ಜನಸಂದಣಿ ಆಗುವುದನ್ನು ತಪ್ಪಿಸಲು ನೆರವಾಗುತ್ತಿದ್ದೇವೆ’’ ಎಂದು ಸ್ವಿಗ್ಗಿಯ ವಿಪಿ-ಪ್ರಾಡಕ್ಟ್ಸ್ ಅನುಜ್ ರಾತಿ  ಹೇಳಿದರು.

click me!