ಮಮತಾಗೆ ಮತ್ತೊಂದು ಹೊಡೆತ; ಬಿಜೆಪಿ ಸೇರಲು ಐವರು TMC ನಾಯಕರು ದೆಹಲಿಗೆ!

By Suvarna NewsFirst Published Jan 30, 2021, 7:12 PM IST
Highlights

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಗುದ್ದಾಟ ಹೆಚ್ಚಾಗುತ್ತಿದೆ. ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಸಂಘರ್ಷ ಕೂಡ ಹೆಚ್ಚಾಗುತ್ತಿದೆ. ಇದೀಗ ಟಿಎಂಸಿಯಿಂದ ಹೊರಬಂದ ಐವರು ನಾಯಕರು, ಬಿಜೆಪಿ ಸೇರಲು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
 

ನವದೆಹಲಿ(ಜ.30): ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷ, ತೃಣ ಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಪರ್ವ ಹೆಚ್ಚಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಈ ನಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಕಂಗೆಡಿಸಿದೆ. ಈಗಾಗಲೇ ತೃಣಮೂಲ ಕಾಂಗ್ರೆಸ್ ತೊರೆದಿರುವ ಐವರು ನಾಯಕರು ಇದೀಗ ಬಿಜೆಪಿ ಸೇರಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ, ಜನ ಸೇವೆಗೆ ಅವಕಾಶ ನೀಡಿದ ಸಿಎಂಗೆ ಧನ್ಯವಾದ ಅಂದ್ರು...!.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ(ಜ.31) ಹೌರಾದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಟಿಎಂಸಿಯ ಐವರು ನಾಯಕರು ಬಿಜೆಪಿ ಸೇರಲು ಸಜ್ಜಾಗಿದ್ದರು. ಆದರೆ ದೆಹಲಿ ಬಾಂಬ್ ಸ್ಫೋಟದ ಕಾರಣ ಅಮಿತ್ ಶಾ ಕೋಲ್ಕತಾ ಭೇಟಿ ರದ್ದು ಮಾಡಿದ್ದಾರೆ. ಹೀಗಾಗಿ ಟಿಎಂಸಿಯ ಐವರು ನಾಯಕರು ದೆಹಲಿಗೆ ತೆರಳಿದ್ದಾರೆ.

ಬಂಗಾಳದ ತಂಟೆಗೆ ಬಂದರೆ ಛಿದ್ರ ಮಾಡ್ತೇವೆ ಹುಷಾರ್‌: ಬಿಜೆಪಿಗೆ ಟಿಎಂಸಿ ಬೆದರಿಕೆ!.

ಬಿಜೆಪಿ ಮುಖ್ಯ ಕಚೇರಿಯಲ್ಲಿ ಟಿಎಂಸಿಯ ಐವರು ನಾಯಕರನ್ನು ಅಮಿತ್ ಶಾ ಬಿಜೆಪಿಗೆ ಬರಮಾಡಿಕೊಳ್ಳಲಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಜೀಬ್ ಬ್ಯಾನರ್ಜಿ,MLA ಬೈಶಾಲಿ ದಾಲ್ಮಿಯಾ, ಉತ್ತರಾಪರ MLA ಪ್ರಬೀರ್ ಘೋಷಾಲ್,  ಹೌರಾ ಮೇಯರ್ ರತಿನ್ ಚಕ್ರಬೊರ್ತಿ ಹಾಗೂ ಮಾಜಿ MLA ರಾನಘಟ್ ಪಾರ್ಥಸಾರಥಿ ಚಟರ್ಜಿ  ಬಿಜೆಪಿ ಸೇರಿಕೊಳ್ಳುತ್ತಿರುವ ಟಿಎಂಸಿ ಪ್ರಮುಖ ನಾಯಕರಾಗಿದ್ದಾರೆ.

click me!