ನವದೆಹಲಿ(ಮಾ.23) :'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಆರೂವರೆ ಸಾವಿರ ಮತಗಳಿಂದ ಸೋತ ಬಿಜೆಪಿ ಅಭ್ಯರ್ಥಿ ಉತ್ತರಾಖಂಡದ ಸಿಎಂ. ತಾವು ಸೋತರೂ ಪಕ್ಷ ಗೆಲ್ಲಿಸಿದರು ಎಂಬ ಕಾರಣಕ್ಕೆ ಪುಷ್ಕರ್ ಸಿಂಗ್ ಧಾಮಿ ಅವರನ್ನು ದೇವಭೂಮಿ ಉತ್ತರಾಖಂಡದ ಮುಖ್ಯಮಂತ್ರಿ ಅಂಥ ಬಿಜೆಪಿ ಘೋಷಿಸಿತು. ಅದರಂತೆ ಧಾಮಿ ಅವರು ಬುಧವಾರ ಪದಗ್ರಹಣ ಮಾಡಿದರು. ಇವರ ಜೊತೆಗೆ ಹಳೇ ಕ್ಯಾಬಿನೆಟ್ ನಲ್ಲಿ ಜೊತೆಗಿದ್ದ ಐವರು ಸಚಿವರು ಸೇರಿದಂತೆ ಒಟ್ಟು 8 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಒಂದು ಬಾರಿ ಕಾಂಗ್ರೆಸ್, ಒಂದು ಬಾರಿ ಬಿಜೆಪಿ ಎನ್ನುವ ಸ್ಲೋಗನ್ ಅನ್ನು 2ನೇ ಬಾರಿಯೂ ನಮ್ಮದೇ ಅಂಥ ಗೆಲುವಿನ ಷರಾ ಬಿಜೆಪಿ ಬರೆದ ಹಿನ್ನೆಲೆ ಯಲ್ಲಿ ಧಾಮಿಯವರ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗು ಯು ಪಿ ನಿಯೋಜಿತ ಸಿಎಂ ಯೋಗಿ ಅದಿತ್ಯನಾಥ್, ಗುಜರಾತ್, ಅಸ್ಸಾಂ, ಹರಿಯಾಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿ ಹಲವು ಹಿರಿಯ ಮುಖಂಡರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಉತ್ತರಾಖಂಡ್ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ, ಹುದ್ದೆಗೇರುವ ಮುನ್ನ ಸ್ಫೋಟಕ ಘೋಷಣೆ!
ಸೋತರೂ ಧಾಮಿ ಸಿಎಂ ಆಗಿದ್ದು ಹೇಗೆ ? ಏಕೆ ?
ಹಿಮಾಲಯದ ತಪ್ಪಲು ಪ್ರದೇಶ, ದೇವಭೂಮಿ ಉತ್ತರಾಖಂಡ ರಾಜ್ಯಕ್ಕೆ ಸತತ ಎರಡನೇ ಬಾರಿ 46 ವರ್ಷದ ಪುಷ್ಕರ್ ಸಿಂಗ್ ಧಾಮಿ ಸಿಎಂ ಆಗಿದ್ದು ಹೇಗೆ ? ಇನ್ನೊಂದು ಸೋಜಗದ ಸಂಗತಿ ಎಂದರೆ ಸೋತರೂ ಧಾಮಿ ಅವರು ಸಿಎಂ ಆಗಿದ್ದು ಹೇಗೆ ? ದೆಹಲಿಯ ರಾಜಕೀಯ ಕಟ್ಟೆಯಲ್ಲಿ ಬಹುವಾಗಿ ಚರ್ಚಿತವಾಗುತ್ತಿರುವ ವಿಷಯ. ಇದಕ್ಕೆ ಹಲವು ಕಾರಣಗಳು ಸಿಗುತ್ತವೆ.
1 ತಾನು ಸೋತರೂ ಬಿಜೆಪಿ ಪಕ್ಷ ಗೆಲ್ಲಿಸಿದರು
ವ್ಯಕ್ತಿ ಮುಖ್ಯವಲ್ಲ, ಬದಲಿಗೆ ಪಕ್ಷ ಮುಖ್ಯ ಎನ್ನುವ ಸಿದ್ದಾಂತಕ್ಕೆ ಬಿಜೆಪಿ ಹೆಚ್ಚು ಒತ್ತು ನೀಡುತ್ತದೆ ಎನ್ನುವ ಮಾತನ್ನು ಈ ಬಾರಿ ಕಮಲ ಪಕ್ಷ ಹುಸಿಯಾಗಿಸಲಿಲ್ಲ. ಧಾಮಿಯವರ ವಿಷಯದಲ್ಲಿ ಬಿಜೆಪಿ ಅದೇ ರೀತಿ ನಡೆದುಕೊಂಡಿದೆ. 2017 ರಲ್ಲಿ ಉತ್ತರಾಖಂಡ ನಲ್ಲಿ ಬಿಜೆಪಿ 57 ಸ್ಥಾನ ಗಳಲ್ಲಿ ಗೆಲುವು ಸಾಧಿಸಿತ್ತು. ಆಗ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಂಥ ಘೋಷಣೆ ಮಾಡಿತು. 3 ವರ್ಷ 357 ದಿನಗಳ ಬಳಿಕ ತೀರಥ್ ಸಿಂಗ್ ರಾವತ್ ಅವರು ಸಿಎಂ ಆಗಿ 116 ದಿನ ಕಾರ್ಯನಿರ್ವವಹಿಸಿದರು.
ಬಿಜೆಪಿ ಗೆದ್ದರೂ ಸಿಎಂಗೆ ಸೋಲು: 6,900 ಮತಗಳ ಅಂತರದಿಂದ ಮುಗ್ಗರಿಸಿದ ಧಾಮಿ!
ಇದಾದ ಬಳಿಕ ಏಳು ತಿಂಗಳ ಅವಧಿಗೆ ಖಟೀಮಾ ಕ್ಷೇತ್ರದ ಯುವ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಮೂರನೇ ಸಿಎಂ ಆಗಿ ಆಯ್ಕೆ ಮಾಡಲಾಯಿತು. ಚುನಾವಣೆಗೆ ಕೇವಲ ಕೆಲವೇ ತಿಂಗಳು ಮುನ್ನ ಸಿಎಂ ಆದ ಧಾಮಿ, ಹಾರ್ಡ್ ವಕ್೯ ಮೂಲಕ ಉತ್ತರಾಖಂಡದ ಮತದಾರರ ಮನಸ್ಸು ಗೆದ್ದರು. ಅದರ ಫಲವೇ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂತು.
ದುರಾದೃಷ್ಟವಶಾತ್ ಪಕ್ಷ ಗೆದ್ದರೂ ಧಾಮಿ ಸೋತರು. ಆದರೆ ಇವರ ಹಾಡ್೯ ವಕ್೯ ಗುರುತಿಸಿದ ಬಿಜೆಪಿ ಎರಡನೇ ಬಾರಿಗೆ ಸಿಎಂ ಆಗಿಸಿದೆ.
2 ಆಡಳಿತ ವಿರೋಧ ಅಲೆಯನ್ನು ಪಕ್ಕಾ ನಿಭಾಯಿಸಿದ ಧಾಮಿ
ಪುಷ್ಕರ್ ಸಿಂಗ್ ಧಾಮಿಯವರ ನೇತೃತ್ವದಲ್ಲಿ ಚುನಾವಣೆಗೆ ಹೋದ ಬಿಜೆಪಿ, ಕಳೆದ ಬಾರಿಗಿಂತ 10 ಸ್ಥಾನ ಕಡಿಮೆ ಅಂದರೆ 47 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ, ಮತ್ತೆ ಅಧಿಕಾರಕ್ಕೆ ಬಂತು. ಕೇವಲ ಆರು ತಿಂಗಳಲ್ಲಿ ಇಬ್ಬರು ಸಿಎಂ ಗಳನ್ನು ಬದಲಾಯಿಸಿದ್ದು ಉತ್ತರಾಖಂಡ ಜನರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿತ್ತು. ಧಾಮಿ ನೇತೃತ್ವದ ಯುವ ನಾಯಕತ್ವ, ಆಡಳಿತ ರೀತಿ-ನೀತಿ ಮತದಾರರಲ್ಲಿದ್ದ ಈ ಅಸಮಧಾನ, ಆಡಳಿತ ವಿರೋಧಿ ಅಲೆ ದೂರ ಮಾಡಿ, ಬಿಜೆಪಿ ಗೆಲ್ಲುವಂತೆ ಮಾಡಿತ್ತು. ಜೊತೆಗೆ ಒಂದು ಬಾರಿ ಕಾಂಗ್ರೆಸ್, ಒಂದು ಬಾರಿ ಬಿಜೆಪಿ ಎನ್ನುವ ಸ್ಲೋಗನ್ ಧಾಮಿ ಬ್ರೇಕ್ ಮಾಡಿದರು.
3 ಯು ಕೆ ಮತದಾರರಲ್ಲಿ ಜನಪ್ರಿಯತೆ ಗಳಿಸಿದ್ದ ಯುವ ನೇತಾರ
46 ವರ್ಷಗಳ ಧಾಮಿ ಸಿಎಂ ಆದ ಬಳಿಕ ಮತದಾರ ಜೊತೆ ವಿಶೇಷವಾಗಿ ಗುರುತಿಸಿಕೊಳ್ಳ ತೊಡಗಿದರು. ಇದರಿಂದ ದಿನೇ ದಿನೇ ಧಾಮಿ ಜನಪ್ರಿಯತೆ ಹೆಚ್ಚುತ್ತಾ ಹೋಯ್ತು. ಅದರಲ್ಲೂ ತಮ್ಮ ಕೆಲಸಗಳ ಮೂಲಕ ಯುವ ಮತದಾರರಿಗೆ ಹೆಚ್ಚು ಆಕರ್ಷಕ ವಾಗಿ ಕಂಡರು.
4 ದೊಡ್ಡ ದೊಡ್ಡ ಯೋಜನೆಗಳ ಘೋಷಣೆ
ಧಾಮಿ ಸಿಎಂ ಆದ ಕೂಡಲೇ ಹಲವಾರು ದೊಡ್ಡ ದೊಡ್ಡ ಜನಪ್ರಿಯ ಯೋಜನೆಗಳನ್ನು ಘೋಷಿಸಿದರು. 10 ಮತ್ತು 12 ತರಗತಿಯ ಮಕ್ಕಳಿಗೆ ಟ್ಯಾಬ್ ಗಳು ನೀಡುವುದು, ಕ್ರೀಡಾನೀತಿಯ ತಿದ್ದುಪಡಿ, ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ, ಪೌರಿ- ಅಲ್ಮೋರ ನಡುವೆ ರೈಲ್ವೆ ಲೇನ್,
ಉತ್ತರಾಖಂಡ್ ರಾಜ್ಯದ ಚಾರ್ ಧಾಮ ದೇವಾಲಯಗಳು ಸೇರಿದಂತೆ 50 ದೇವಸ್ಥಾನಗಳನ್ನು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವ ತೀರ್ಮಾನ ಹಿಂದೆ ಪಡೆದಿದ್ದು ಇವೆಲ್ಲಾ ಮತದಾರರಿಗೆ ಹಿಡಿಸಿತು. ಬಿಜೆಪಿ ಗೆದ್ದಿತು.
5 ಹಿರಿಯ-ಕಿರಿಯ ನಾಯಕರ ನಡುವೆ ಹೊಂದಾಣಿಕೆ
ಉತ್ತರಾಖಂಡ ನಲ್ಲಿ ಬಿಜೆಪಿ ಗೆಲುವಿನ ರಹಸ್ಯ ಗಳಲ್ಲಿ ಇದು ಪ್ರಮುಖ ಅಂಶ. ಧಾಮಿ ಸಿಎಂ ಆದ ಬಳಿಕ ಪಕ್ಷದ ಹಿರಿಯ-ಕಿರಿಯ ನಾಯಕರ ನಡುವೆ ಹೊಂದಾಣಿಕೆ ಮಾಡಿಕೊಂಡು ಹೋದರು. ಪ್ರಮುಖ ಹಾಗು ದೊಡ್ಡ ತೀರ್ಮಾಗಳು ಮಾಡುವಾಗ ಮಾಜಿ ಮುಖ್ಯಮಂತ್ರಿ ಗಳು ಸೇರಿದಂತೆ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಇವೆಲ್ಲಾ ಅಂಶಗಳು ಪಕ್ಷ ಗೆಲಿಸುವಂತೆ ಮಾಡಿದವು. ಅಂತಿಮವಾಗಿ ಆ ಗೆಲುವು ಪುಷ್ಕರ್ ಧಾಮಿಯನ್ನು ಮತ್ತೊಮ್ಮೆ ಸಿಎಂ ಆಗಿವಂತೆ ಮಾಡಿತು.
ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸ ಬಲ್ಲ ಪಕ್ಷ ಎಂಬಂತೆ ಮತದಾರರಲ್ಲಿ ವಿಶ್ವಾಸ ಮೂಡಿಸಿದ್ದು, ಡಬಲ್ ಇಂಜಿನ್ ಸರ್ಕಾರದ ಘೋಷಣೆ, ಮಹಿಳಾ ಮತದಾರರಿಗೆ ಯೋಜನೆಗಳು ಮುಟ್ಟಿಸಿದ್ದು, ಜೊತೆಗೆ ಸಮಾಜ ಕಲ್ಯಾಣ ಯೋಜನೆಗಳು ಗೆಲುವಿನ ಮತಗಳಾಗಿ ಪರಿವರ್ತನೆ ಮಾಡಿದವು ಅಂತಾರೆ ಚುನಾವಣಾ ವಿಶ್ಲೇಷಕರು.