ತುಂಬಿ ಹರಿಯುವ ಚರಂಡಿಗಿಳಿದು ಸ್ವಚ್ಛಗೊಳಿಸಿದ ಎಎಪಿ ನಾಯಕ

Published : Mar 23, 2022, 07:16 PM IST
ತುಂಬಿ ಹರಿಯುವ ಚರಂಡಿಗಿಳಿದು ಸ್ವಚ್ಛಗೊಳಿಸಿದ ಎಎಪಿ ನಾಯಕ

ಸಾರಾಂಶ

ಆಮ್ ಆದ್ಮಿ ಪಕ್ಷದ ಕಾರ್ಪೊರೇಟರ್ ಒಬ್ಬರು ಮಂಗಳವಾರ ಚರಂಡಿ ಸ್ವಚ್ಛಗೊಳಿಸಲು ಚರಂಡಿಗೆ ಹಾರಿ, ನಂತರ ಹಾಲಿನ ಸ್ನಾನ ಮಾಡಿದ ಘಟನೆ ನಡೆದಿದೆ. 

ನವದೆಹಲಿ(ಮಾ.23): ಆಮ್ ಆದ್ಮಿ ಪಕ್ಷದ ಕಾರ್ಪೊರೇಟರ್ ಒಬ್ಬರು ಮಂಗಳವಾರ ಚರಂಡಿ ಸ್ವಚ್ಛಗೊಳಿಸಲು ಚರಂಡಿಗೆ ಹಾರಿ, ನಂತರ ಹಾಲಿನ ಸ್ನಾನ ಮಾಡಿದ ಘಟನೆ ನಡೆದಿದೆ. 'ನಾಯಕ್' ಸಿನಿಮಾವನ್ನು  ನೆನಪಿಸುವ ನಾಟಕೀಯ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಪೂರ್ವ ದೆಹಲಿಯ ಎಎಪಿ ಕೌನ್ಸಿಲರ್ ಹಸೀಬ್-ಉಲ್-ಹಸನ್ ಅವರು ಶಾಸ್ತ್ರಿ ಪಾರ್ಕ್‌ಗೆ ಭೇಟಿ ನೀಡಿದಾಗ ದುರ್ವಾಸನೆ ಮತ್ತು ತುಂಬಿ ಹರಿಯುತ್ತಿರುವ ಚರಂಡಿಯನ್ನು ಕಂಡು  ಕೂಡಲೇ ಚರಂಡಿಗಿಳಿದು ಸ್ವಚ್ಛ ಮಾಡಲು ಮುಂದಾಗಿದ್ದಾರೆ. 

ಟ್ವಿಟರ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ತೇಲುವ ಅವಶೇಷಗಳನ್ನು ತೆಗೆದುಹಾಕಲು ಎದೆಯೆತ್ತರದ ಆಳದ ಚರಂಡಿಗಿಳಿಯುವ ಕೌನ್ಸಿಲರ್‌ , ಚರಂಡಿಯನ್ನು ಸ್ವಚ್ಛಗೊಳಿಸಿದ ನಂತರ ನಾಯಕ್ ಚಿತ್ರದಲ್ಲಿ ನಟ ಅನಿಲ್ ಕಪೂರ್ ಅವರು ಮಾಡಿದಂತೆ ಹಾಲಿನಲ್ಲಿ ಸ್ನಾನ ಮಾಡಿದ್ದಾರೆ. ಹಸನ್ ಬೆಂಬಲಿಗರು ಅವರ ಮೇಲೆ ಹಾಲಿನ ಅಭಿಷೇಕ ಮಾಡಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹಸನ್, ಚರಂಡಿ ತುಂಬಿ ಹರಿಯುತ್ತಿದ್ದು, ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಈ ಸಮಸ್ಯೆಯನ್ನು ಉನ್ನತ ಅಧಿಕಾರಿಗಳ ಮುಂದೆ ಇಟ್ಟರು ಈ ಪ್ರದೇಶದ ಜನರಿಗೆ ಏನೂ ಮಾಡಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ ಎಂದು ವರದಿ ಆಗಿದೆ.

 

ಏಪ್ರಿಲ್‌ನಲ್ಲಿ ದೆಹಲಿ ಮುನ್ಸಿಪಲ್ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಈ ಘಟನೆ ನಡೆದಿದೆ. ಏತನ್ಮಧ್ಯೆ, ದೆಹಲಿಯ ಮೂರು ಮುನ್ಸಿಪಲ್ ಕಾರ್ಪೊರೇಶನ್‌ಗಳನ್ನು ಒಂದಾಗಿ ವಿಲೀನಗೊಳಿಸಲು ಪ್ರಸ್ತಾಪಿಸುವ ಮಸೂದೆಯನ್ನು ಕೇಂದ್ರವು ಮಂಗಳವಾರ ಅನುಮೋದಿಸಿದೆ. ಇದರ ಪ್ರಕಾರ ಈಗಿನ ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್, ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಬದಲಿಗೆ - ರಾಷ್ಟ್ರ ರಾಜಧಾನಿ ನಗರದಲ್ಲಿ ಕೇವಲ ಒಂದು ನಾಗರಿಕ ಸಂಸ್ಥೆ ಇರುತ್ತದೆ. ಆದಾಗ್ಯೂ, ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ವೇಳಾಪಟ್ಟಿಯ ಪ್ರಕಟಣೆಯು ತಿದ್ದುಪಡಿ ಮಾಡಲಾದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯನ್ನು ಅವಲಂಬಿಸಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ರೈತ, ವಕೀಲ, ಡಾಕ್ಟರ್, ಇಂಜಿನಿಯರ್: ನೂತನ 'ಕ್ಯಾಪ್ಟನ್' ಮಾನ್ ಟೀಂ 10 ಇದು!

ಭಾರತೀಯ ಜನತಾ ಪಕ್ಷವು ಸುಮಾರು ಎಂಟು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ.ಆದರೆ ಅವರು ಇಷ್ಟು ವರ್ಷಗಳ ಕಾಲ ಅದನ್ನು ಏಕೆ ಮಾಡಲಿಲ್ಲ? ಎಂಸಿಡಿ ಚುನಾವಣೆಯ ದಿನಾಂಕಗಳ ನಿಗದಿತ ಘೋಷಣೆಗೆ ಕೇವಲ ಒಂದು ಗಂಟೆ ಮೊದಲು ಚುನಾವಣಾ ಆಯೋಗಕ್ಕೆ  ಏಕೆ ಪತ್ರ ಬರೆದರು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಪ್ರಶ್ನಿಸಿದ್ದಾರೆ. ಮೂರು ಮುನ್ಸಿಪಲ್‌ ಕಾರ್ಪೋರೇಷನ್‌ನಗಳ ಏಕೀಕರಣವನ್ನು ಬಹಳ ಹಿಂದೆಯೇ ಮತ್ತು ಯಾವಾಗ ಬೇಕಾದರೂ ಮಾಡಬಹುದಿತ್ತು. ಇದು ಎಂಸಿಡಿ ಚುನಾವಣೆಯನ್ನು ವಿಳಂಬಗೊಳಿಸುವ ತಂತ್ರವಾಗಿದೆ. ದೆಹಲಿಯ ನಾಗರಿಕ ಚುನಾವಣೆಯಲ್ಲಿ ಬಿಜೆಪಿ ಸೋಲುವ ಭಯದಲ್ಲಿದೆ ಎಂದು ಆಮ್ ಆದ್ಮಿ ಪಕ್ಷ ಟೀಕಿಸಿದೆ.

ಪಂಜಾಬ್‌ನ 17 ನೇ ಮುಖ್ಯಮಂತ್ರಿಯಾದ ಭಗವಂತ್ ಮಾನ್, ಜನರ ಪ್ರೀತಿಯ ಋಣ ತೀರಿಸುವುದು ಅಸಾಧ್ಯ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ